ಭಾರತ ವಿದ್ಯಾರ್ಥಿ ಫಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಬಸ್ ನಿಲ್ದಾಣದ ಎದುರು ವಿಜಯ ನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಏರಿಸಿದ ಶುಲ್ಕವನ್ನು ಇಳಿಕೆ ಮಾಡಿರುವುದನ್ನು ಸ್ವಾಗತಿಸಿ ಪಟಾಕಿ ಸಿಡಿಸಿ ಸಿಹಿ ಹಂಚುವುದರ ಮೂಲಕ ವಿಜಯೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗಾಗಿ ಎಸ್.ಎಫ್.ಐ ನೇತೃತ್ವದಲ್ಲಿ ಐಕ್ಯ ಹಾಗೂ ನಿರಂತರವಾಗಿ ಹೋರಾಟ ಮಾಡಿದದುದರ ಫಲವಾಗಿ ವಿಜಯ ನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಏರಿಸಿದ ಶುಲ್ಕವನ್ನು ಇಳಿಕೆ ಮಾಡಿದ್ದು ಇದು ಎಸ್.ಎಫ್.ಐ ನ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು. ಎಸ್.ಎಫ್‌ಐ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಏಪ್ರಿಲ್ ಮೊದಲ ವಾರದಿಂದ ವಿವಿಧ ಹಂತದಲ್ಲಿ ವಿಭಿನ್ನ ಹೋರಾಟಗಳನ್ನು ಮಾಡುತ್ತ ಬಂದಿದ್ದು ನಿನ್ನೆ ವಿ.ವಿಗೆ ಮುತ್ತಿಗೆ ಹಾಕಿ ಶುಲ್ಕವನ್ನು ಕಡಿಮೆಗೊಳಿಸಲು ಎಸ್.ಎಫ್.ಐ ಗೆ ಸಾಧ್ಯವಾಗಿದೆ. ಆದರೆ ಈ ಸಮಸ್ಯೆ ಪ್ರಾರಂಭವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತದ ವಿದ್ಯಾರ್ಥಿ ಸಂಘಟನೆ ಹೆಸರಿನ ಸೋಗಿನಲ್ಲಿ ಕೆಲ ಸಂಘಟನೆಗಳು ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಿ ಗೊಂದಲವನ್ನುಂಟು ಮಾಡಲು ಪ್ರಯತ್ನಸಲು ಮುಂದಾಗಿರುವುದು ಖಂಡನೀಯ. ವಿದ್ಯಾರ್ಥಿಗಳು ಅಂತಹವುಗಳಿಗೆ ಸೊಪ್ಪು ಹಾಕದೆ ಅವರನ್ನು ತಿರಸ್ಕರಿಸಿ ಐಕ್ಯ ಹೋರಾಟಕ್ಕಾಗಿ ಎಸ್.ಎಫ್.ಐ ಗಟ್ಟಿಗೊಳಿಸಬೇಕಿದೆ ಎಂದು ಕರೆ ನೀಡಿದರು.
ನಂತರ ಎಸ್.ಎಫ್.ಐ ಜಿಲ್ಲಾಧ್ಯಕ್ಷ ಅಮರೇಶ ಕಡಗದ ಹಾಗೂ ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಮಾತನಾಡಿ, ೨೦೧೪ರ ಮೇ ಮತ್ತು ಜೂನ್ ತಿಂಗಳಲ್ಲಿ ನಡೆಯುವ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ೨,೪,೬ ಹಾಗೂ ೨,೪ ಸೆಮಿಸ್ಟರಿಗೆ ದಲಿತ, ಹಿಂದುಗಳಿದ ವರ್ಗದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೀಡಿರನೆ ೧೧೦ ರೂ. ದಿಂದ ೮೫೦ ರೂ. ಹೆಚ್ಚಳ ಮಾಡಿದ್ದರಿಂದ ವಿದ್ಯಾರ್ಥಿಗಳು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ನೇತೃತ್ವದಲ್ಲಿ ಏಪ್ರೀಲ್ ಮೊದಲ ವಾರದಿಂದ ಇಲ್ಲಿಯವರೆಗೂ ಕಾಲೇಜು, ಹೋಬಳಿ, ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವಾರು ಸುತ್ತಿನ ಹೋರಾಟ ಮಾಡಿತ್ತು ಅಲ್ಲದೇ ದಿನಾಂಕ: ೨೩-೦೪-೨೦೧೪ ರಂದು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಜನ ವಿದ್ಯಾಥಿಗಳು ಶ್ರೀಕೃಷ್ಣ ದೇವರಾಯ ವಿ,ವಿ ಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದುದರ ಫಲವಾಗಿ ಪ್ರತಿಭಟನಾ ಸ್ಥಳಕ್ಕಾಗಮಿಸಿದ ವಿ.ವಿ ಉಪಕುಲಪತಿಗಳು ಹಾಗೂ ಕುಲಸಚಿವರು ಎಸ್.ಎಫ್.ಐ ನ ರಾಜ್ಯ ಮತ್ತು ಜಿಲ್ಲಾ ಮುಖಂಡರುಗಳೊಂದಿಗೆ ಮಾತುಕತೆ ನಡೆಸಿ, ಏರಿಕೆಯಾದ ಶುಲ್ಕ ರೂ.೮೫೦ ರ ಬದಲಾಗಿ ರೂ.೫೦೦ ಕಡಿತಗೊಳಿಸಿ ರೂ.೩೦೦ಗಳಿಗೆ ಇಳಿಕೆ ಮಾಡಿದರು. ಹಾಗೂ ಈಗಾಗಲೇ ಪೂರ್ಣ ಶುಲ್ಕ ಕಟ್ಟಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹಣವನ್ನು ತಕ್ಷಣ ಆಯಾ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲು ಒಪ್ಪಿಕೊಂಡರು. ಇದು ಎಸ್.ಎಫ್.ಐ ಐಕ್ಯ ಹೋರಾಟಕ್ಕೆ ಸಂದ ಜಯವಾಗಿದೆ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್.ಎಫ್.ಐ ಮುಖಂಡರುಗಳಾದ ಸುಭಾನ ಸೈಯೆದ, ಪರಶುರಾಮ ರಾಠೋಡ, ಉಮೇಶ ರಾಠೋಡ, ಶ್ರೀಕಾಂತ, ಸಂತೋಷ ರಾಠೋಡ,, ಹನುಮಂತರಾವ್, ಮುತ್ತರ್, ಯಮನೂರ, ಶಾಂತಕುಮಾರ ಸೇರಿದಂತೆ ಹಲವಾರು ಜನ ಪಾಲ್ಗೊಂಡಿದ್ದರು.
0 comments:
Post a Comment