PLEASE LOGIN TO KANNADANET.COM FOR REGULAR NEWS-UPDATES

ಜೀವನವೇ ಒಂದು ನಾಟಕದ ಕಲೆ ಇದ್ದಂತೆ. ನಾವೆಲ್ಲ ಇದರಲ್ಲಿ ಪಾತ್ರದಾರಿಗಳು ಇದ್ದಂತೆ. ಸೂತ್ರದಾರಿ ಮಾತ್ರ ಆ ದೇವನೊಬ್ಬನೆ ಅವನು ಮೇಲಿದ್ದಾನೆ. ಅವನು ಆಡಿಸಿದ ಆಟ ನಾವು ಹಾಡಬೇಕಾಗಿದೆ. ಇರುವಷ್ಟು ದಿನ ಒಳ್ಳೆಯ ಜೀವನ ಸಾಗಿಸುವುದೇ ಮುಖ್ಯ ಎಂದು ಸಯ್ಯದ್ ಫೌಂಡೇಶನ ಚಾರಿಟ್ರೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.
ಅವರು ತಾಲೂಕಿನ ಚಿಕ್ಕಸಿಂದೋಗಿ ಗ್ರಾಮದಲ್ಲಿ ಜರುಗಿದ ದಿಲ್ಲಿ ಹೊಕ್ಕ ಪುಂಡ ಹುಲಿ ಎಂಬ ಸಾಮಾಜಿಕ ನಾಟಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ, ಈ ಭೂಮಿ ಮೇಲೆ ಮನುಷ್ಯ ಇಂದಿನ ಆಧುನಿಕ ಯುಗದಲ್ಲಿ ಕೇವಲ ೬೦-೭೦ ವರ್ಷ ಮಾತ್ರ ಬದುಕಬಹುದು. ಅದರಲ್ಲಿ ಈಗಾಗಲೇ ನಾವುಗಳು ೩೦-೪೦ ವರ್ಷ ಕಳೆದಿದ್ದೇವೆ. ಉಳಿದಿರುವ ಆಯುಷ್ಯ ಆ ದೇವರ ಆಶೀರ್ವಾದವಿದ್ದರೆ ಇನ್ನೂ ಕೆಲ ವರ್ಷ ಇಲ್ಲಿ ನಾವು ಬದುಕಬಹುದು. ಆದರೆ ನಾವು ಎಷ್ಟು ದಿನ ಬದುಕುತ್ತೇವೆ ಅನ್ನುವುದಕ್ಕಿಂತ ಈ ಸಮಾಜಕ್ಕಾಗಿ ಏನು ಮಾಡಿದ್ದೇವೆ ಎನ್ನುವುದು ಮುಖ್ಯ ಎಂದರು.
ಮುಂದುವರೆದು ಮಾತನಾಡಿದ ಅವರು, ನಾಟಕ ಸನ್ನಿವೇಷ
ಗಳಲ್ಲಿ ಬರುವಂತಹ ಒಳ್ಳೆಯ ವಿಷಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟ ಸನ್ನಿವೇಶಗಳನ್ನು ಇಲ್ಲಿಯೇ ಬಿಡಬೇಕು. ಸಮಾಜದ ಮೇಲೆ ನಾಟಕ ಅತ್ಯಂತ ಪರಿಣಾಮ ಬೀರುತ್ತದೆ. ಆದರೆ ಇಂದಿನ ಸಂದರ್ಭದಲ್ಲಿ ನಾಟಕ ಕಲೆ, ರಂಗಭೂಮಿ ಕೆವಲ ಗ್ರಾಮೀಣ ಭಾಗದಲ್ಲಿ ಮಾತ್ರ ಉಳಿದಿಕೊಂಡಿದೆ. ಪಟ್ಟಣ ಪ್ರದೇಶದಲ್ಲಿ ಇಲ್ಲ. ಆದರೆ ಕಲಾಭಿಮಾನಿಗಳಾದ ನಾವುಗಳು ಇದಕ್ಕೆ ಪ್ರೋತ್ಸಾಹಿಸಬೇಕೆಂದು ಹೇಳಿದ ಅವರು, ಚಿಕ್ಕಸಿಂದೋಗಿ ಗ್ರಾಮದ ಅಭಿವೃದ್ದಿ ಕೆಲಸದಲ್ಲಿ ನನ್ನ ಸಂಪೂರ್ಣ ಸಹಕಾರ ಸದಾ ಇರುವುದಾಗಿ ಸಯ್ಯದ್ ಫೌಂಡೇಶನ ಚಾರಿಟ್ರೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.
ಈ ಸಂದರ್ಭದಲ್ಲಿ ಷಣ್ಮೂಕಪ್ಪ ಭೂತಣ್ಣನವರ, ನೀಲವ್ವ ಭೀಮನಗೌಡರ, ವೈ.ಕೆ.ಜೋಷಿ, ಯಂಕಪ್ಪ ಮುದ್ದಾಬಳ್ಳಿ, ಕಲ್ಲಯ್ಯ ಕಲ್ಲನಗೌಡರ, ಯುವ ಸಾಹಿತಿ ಎಂ.ಎಸ್.ಮುಲ್ಲಾ ಹನುಮಸಾಗರ, ಉದ್ಯಮಿದಾರ ಸಂಜೀವ ನಗರಿ ಕೊಪ್ಪಳ ಸೇರಿದಂತೆ ಗ್ರಾಮದ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top