PLEASE LOGIN TO KANNADANET.COM FOR REGULAR NEWS-UPDATES

 ಇಂದು ಡಾ.ಅಂಬೇಡ್ಕರ್ ಜಯಂತಿ. ಮುಂದಿನ ವರ್ಷದ ಇದೇ ದಿನದಂದು ಬಾಬಾ ಸಾಹೇಬರು ರೂಪಿಸಿದ ಸಂವಿಧಾನ ಸುರಕ್ಷಿತ ವಾಗಿರುತ್ತದೆಯೇ? ಎಂಬ ಆತಂಕದಲ್ಲಿ ಆ ಮಹಾನ್ ಮೇಧಾವಿಯನ್ನು ನೆನಪಿಸಿ ಕೊಳ್ಳಬೇಕಾಗಿ ಬಂದಿದೆ. ಯಾಕೆಂದರೆ ಆ ಸಂವಿಧಾನವನ್ನೇ ಹೂತು ಹಾಕಿ ದೇಶದ ಮೇಲೆ ಮನುಸ್ಮತಿಯನ್ನು ಹೇರುವ ಮಸಲತ್ತು ತೀವ್ರಗೊಂಡಿದೆ. ಅಂಬೇಡ್ಕರ್ ರಾಷ್ಟ್ರಕ್ಕೆ ನೀಡಿದ ಸಂಸದೀಯ ಜನತಂತ್ರ ವ್ಯವಸ್ಥೆಯನ್ನು ಸಮಾಧಿ ಮಾಡಿ ಅಧ್ಯಕ್ಷ ಮಾದರಿ ಹೆಸರಲ್ಲಿ ಫ್ಯಾಸಿಸ್ಟ್ ಸರ್ವಾಧಿಕಾರವನ್ನು ಹೇರುವ ಸಂಚು ರೂಪುಗೊಂಡಿದೆ.
ಅದಕ್ಕೆ ಪೂರ್ವಭಾವಿಯಾಗಿ ನರೇಂದ್ರ ಮೋದಿ ಮುಂದಿನ ಪ್ರಧಾನಿ ಎಂದು ದೇಶದ ತುಂಬ ಆತನ ಪಲ್ಲಕ್ಕಿ ಸೇವೆ ನಡೆದಿದೆ. ವಿದ್ಯುನ್ಮಾನ ಮಾಧ್ಯಮಗಳ ಪ್ರಕಾರ ಈಗಾಗಲೇ ಮೋದಿ ಪ್ರಧಾನಿಯಾಗಿದ್ದಾರೆ! ಈಗ ದೇಶದಲ್ಲಿ ನಡೆಯುತ್ತಿರುವುದು ಲೋಕಸಭಾ ಚುನಾವಣೆಯೋ ಅಥವಾ ಅಮೆರಿಕ ಮಾದರಿಯ ಅಧ್ಯಕ್ಷ ಚುನಾವಣೆಯೋ ಎಂಬ ಗೊಂದಲ ಉಂಟಾಗುವ ರೀತಿಯಲ್ಲಿ ಮೋದಿ ಪಕ್ಷದ ಪ್ರಚಾರವನ್ನು ವ್ಯಕ್ತಿ ಕೇಂದ್ರಿತ ಪ್ರಚಾರವನ್ನಾಗಿ ಮಾರ್ಪಡಿಸಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರು ಅದೇ ರೀತಿ ವ್ಯಕ್ತಿ ವೈಭವೀ ಕರಣದ ಪ್ರಚಾರದಲ್ಲಿ ತೊಡಗಿದ್ದಾರೆ.
ಭಾರತದಂಥ ಬಹು ಭಾಷಿಕ ಬಹುಧರ್ಮೀಯ ಬಹು ಜನಾಂಗೀಯ, ಬಹುಸಂಸ್ಕೃತಿಗಳ ದೇಶಕ್ಕೆ ಅಧ್ಯಕ್ಷ ಮಾದರಿ ಸೂಕ್ತವಲ್ಲ ಎಂದು ಹೇಳಿದ್ದ ಅಂಬೇಡ್ಕರ್, ಸಂಸದೀಯ ಜನತಂತ್ರ ವ್ಯವಸ್ಥೆಯೇ ಈ ದೇಶಕ್ಕೆ ಸೂಕ್ತ ಎಂದಿದ್ದರು. ಈ ಅಂಬೇಡ್ಕರ್ ಪ್ರತಿ ಪಾದಿಸಿದ ಸಂಸದೀಯ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ನಡೆದಿದೆ. ನಂತರ ಸಂವಿಧಾನದ ಸಮಾಧಿಯಾಗುತ್ತದೆ. ಮೋದಿ ಬಯಸಿದ ಅಧ್ಯಕ್ಷ ಮಾದರಿ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯಕ್ಕೆ, ಮೀಸಲಾತಿಗೆ ಅವಕಾಶವಿಲ್ಲ. ಅಲ್ಪಸಂಖ್ಯಾತರು ಚಿತ್ರಹಿಂಸೆ ಅನುಭವಿಸಬೇಕಾಗುತ್ತದೆ. ಸರಕಾರದ ಜನಕಲ್ಯಾಣ ಕಾರ್ಯಕ್ರಮಗಳು, ಸಬ್ಸಿಡಿಗಳು ರದ್ದಾಗುತ್ತವೆ.
ಕಾರ್ಮಿಕ ಕಾನೂನುಗಳು ಕಸದ ಬುಟ್ಟಿ ಸೇರುತ್ತವೆ. ಮಾನವಹಕ್ಕು ಸಂಘಟನೆಗಳಿಗೆ ಕಡಿವಾಣ ಹಾಕಲಾಗುತ್ತದೆ. ಕೃಷಿರಂಗಕ್ಕೆ ಸರಕಾರ ನೀಡುತ್ತಿರುವ ಸಬ್ಸಿಡಿ ರದ್ದಾಗುತ್ತದೆ. ಶೈಕ್ಷಣಿಕ ರಂಗ ಸಂಪೂರ್ಣ ಕೋಮು ವಾದೀಕರಣಗೊಳ್ಳುವುದರಿಂದ ಪಠ್ಯಪುಸ್ತಕಗಳ ಬದಲಾವಣೆ ಆಗುತ್ತದೆ. ಆರೆಸ್ಸೆಸ್ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸುತ್ತದೆ. ಮಾಧ್ಯಮ ಸ್ವಾತಂತ್ರ ಉಳಿದರು ಮಾಧ್ಯಮಗಳಲ್ಲಿನ ಜಾತ್ಯತೀತ, ಉದಾರವಾದಿ ದನಿಗಳನ್ನು ಹತ್ತಿಕ್ಕಲಾಗುತ್ತದೆ. ಭಾರತ ಉಪಖಂಡದಲ್ಲಿ ಕಾರ್ಮೋಡ ಕವಿಯುತ್ತದೆ. ಇದೆಲ್ಲ ಸಾಧ್ಯವಾಗಬೇಕಾದರೆ ಸಂವಿಧಾನ ಮೊದಲು ಬದಲಾಗಬೇಕು. ಮೋದಿಗೆ ಸಂಪೂರ್ಣ ಅಧಿಕಾರ ದಕ್ಕಿದರೆ ಸಂವಿಧಾನಕ್ಕೆ ಗಂಡಾಂತರ ಕಾದಿದೆ.
ಮೋದಿ ಪ್ರಧಾನಿಯಾದರೆ ಸಂವಿಧಾನ ಹೇಗೆ ನಾಶವಾಗುತ್ತದೆ ಎಂದು ಪ್ರಶ್ನೆಗಳು ಬರಬಹುದು. ಈ ಪ್ರಶ್ನೆಗಳಿಗೆ ಉತ್ತರ ಚರಿತ್ರೆ ಯಲ್ಲಿ ಸಿಗುತ್ತದೆ. ಎಲ್ಲ ಜಾತಿ, ಜನಾಂಗಗಳ ಹೋರಾಟದ ಫಲವಾಗಿ ಸ್ವಾತಂತ್ರವೇನೋ ಬಂತು. ಸ್ವಾತಂತ್ರಾನಂತರ ಈ ದೇಶದ ಮುಂದಿನ ದಾರಿ ಯಾವುದೆಂಬ ಬಗ್ಗೆ ಜಿಜ್ಞಾಸೆ ನಡೆಯಿತು. ಸ್ವಾತಂತ್ರ ಚಳವಳಿಯ ಸಾರಥ್ಯವಹಿಸಿದ್ದ ಗಾಂಧಿ, ನೆಹರೂ, ಸುಭಾಷ್, ಭಗತ್ ಸಿಂಗ್ ಕಟ್ಟ ಬಯಸಿದ್ದು ಸಕಲರಿಗೂ ಸಮಾನ ಅವಕಾಶವಿರುವ ಜಾತ್ಯತೀತ ಭಾರತವನ್ನು. ಈ ಸೆಕ್ಯುಲರ್ ಪ್ರಜಾಪ್ರಭುತ್ವ-ರಾಷ್ಟ್ರದ ಸಂವಿಧಾನ ರಚಿಸುವ ಹೊಣೆ ಹೊತ್ತವರು ಡಾ.ಅಂಬೇಡ್ಕರ್. ಈ ಮಹಾಚೇತನ ರೂಪಿಸಿದ ಸಂವಿಧಾನ ನಮಗೆ ಇಂದಿಗೂ ಬೆಳಕು ನೀಡುತ್ತಿದೆ.
ಬ್ರಿಟಿಷರು ಬರುವುದಕ್ಕಿಂತ ಮುಂಚೆ ನಮ್ಮ ದೇಶದಲ್ಲಿ ಇನ್ನೊಂದು ಸಂವಿಧಾನ ಇತ್ತು. ಇದನ್ನು ಸಾಮಾನ್ಯವಾಗಿ ಮನುಸ್ಮತಿ ಎಂದು ಕರೆಯಲಾಗುತ್ತದೆ. ಈ ಕರಾಳ ಸಂವಿಧಾನ ಮನುಷ್ಯರನ್ನು ಜಾತಿ ಆಧಾರದಲ್ಲಿ ವಿಭಜಿಸಿತ್ತು. ಇದನ್ನು ಶ್ರೇಣೀಕೃತ ಜಾತಿ ವ್ಯವಸ್ಥೆ ಎಂದು ಕರೆಯುತ್ತೇವೆ. ‘ರಾಜಾ ಪ್ರತ್ಯಕ್ಷ ದೇವತಾ’ ಎಂಬುದು ಈ ಮನು ವಾದದ ಸಮರ್ಥಕರ ನಂಬಿಕೆ. ಇದನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೂ ಗಳ ಉತ್ಕರ್ಷದ ಯುಗ ಎಂದು ಕರೆಯು ತ್ತದೆ. ಈ ವ್ಯವಸ್ಥೆಯಲ್ಲಿ ದಲಿತರು, ಶೂದ್ರರು ಬ್ರಾಹ್ಮಣರ, ವೈಶ್ಯರ ಸೇವೆ ಮಾಡಿಕೊಂಡಿರ ಬೇಕು.
ಕ್ಷತ್ರಿಯರು ರಕ್ಷಕರಾಗಬೇಕು. ಇಂದಿಗೂ ಇದನ್ನು ನಂಬಿ ವೈಭವದ ಯುಗ ವನ್ನು ಮತ್ತೆ ತರಬೇಕೆಂದು ಹೊರಟವರನ್ನು ಸಾಮಾನ್ಯವಾಗಿ ಆರೆಸ್ಸೆಸ್ ಸ್ವಯಂ ಸೇವಕ ರೆಂದು ಕರೆಯುತ್ತದೆ. ಸ್ವಾತಂತ್ರದ ಆರೂವರೆ ದಶಕಗಳ ನಂತರವೂ ಆ ಮನು ಸಂವಿಧಾನವನ್ನು ದೇಶದ ಮೇಲೆ ಹೇರುವ ಹುನ್ನಾರ ನಡೆದಿದೆ. ರಾಜ್ಯಾಂಗ ರಚನೆಯ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಅದನ್ನು ತಡೆದರು. ಸಕಲ ರಿಗೂ ಸಮಾನ ಅವಕಾಶವಿರುವ ಸಂವಿಧಾನ ನೀಡಿದರು. ಆದರೆ ಆಗ ಬಾಲಮುಚ್ಚಿಕೊಂಡ ಈ ಮನುವಾದಿ ಶಕ್ತಿಗಳು ಸುಮ್ಮನೆ ಕುಳಿತಿಲಲ.
ಈಗ ಮೋದಿಯ ಭಜನೆ ಮಾಡುತ್ತಿರುವವರು ಇದೆ ಜನ. ಸಂವಿಧಾನ ದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಲೋಕಸಭೆಗೆ ಗೆದ್ದು ಬರುವ 545 ಜನಪ್ರತಿನಿಧಿಗಳು ಪ್ರಧಾನಿಯನ್ನು ಚುನಾಯಿ ಸುತ್ತಾರೆ ಎಂದು ಗೊತ್ತಿದ್ದರೂ ಆ ಪ್ರಕ್ರಿಯೆ ಯನ್ನು ತಲೆಕೆಳಗೆ ಮಾಡಿ ಮೋದಿಯನ್ನು ಪ್ರಧಾನಿ ಎಂದು ಹೆಗಲ ಮೇಲೆ ಹೊತ್ತು ಕುಣಿಯುತ್ತಿರುವವರು ಬಯಸುತ್ತಿರುವುದು ಏಕವ್ಯಕ್ತಿ ಸರ್ವಾಧಿಕಾರವನ್ನು. ಭಾರತದ ರಾಜ್ಯಾಂಗ ರಚನೆಯ ಸಂದರ್ಭ ದಲ್ಲಿ ಅಮೆರಿಕದ ಅಧ್ಯಕ್ಷ ಮಾದರಿ ಸರಕಾರದ ಕೂಗೆದ್ದಿತ್ತು. ಆಗ ಎದ್ದು ನಿಂತ ಡಾ. ಅಂಬೇಡ್ಕರ್ ಅಮೆರಿಕದಲ್ಲಿರುವ ಸರಕಾರದ ಸ್ವರೂಪ ಅಧ್ಯಕ್ಷ ಮಾದರಿಯದ್ದು. ಅಲ್ಲಿ ಅಧ್ಯಕ್ಷರೆ ಪ್ರಧಾನರು.
ಆದರೆ ಈ ಸಂವಿಧಾನದಲ್ಲಿ ಅಧ್ಯಕ್ಷರಿಗಿರುವ ಸ್ಥಾನವು ಬ್ರಿಟನಿನಲ್ಲಿ ರಾಜರಿಗಿ ರುವಂಥದ್ದು. ಅವರೇ ರಾಷ್ಟ್ರಕ್ಕೆ ಅಧ್ಯಕ್ಷರು ಕಾರ್ಯಾಂಗದ ಮುಖ್ಯಸ್ಥರಲ್ಲ. ಅವರು ರಾಷ್ಟ್ರದ ಆಡಳಿತವನ್ನು ಪ್ರತಿನಿಧಿಸುವುದಿಲ್ಲ. ಇಡೀ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ. ಅಮೆರಿಕದ ಕಾರ್ಯಾಂಗ ಸಂಸದೀಯ ಕಾರ್ಯಾಂಗವಲ್ಲ. ಅಂದರೆ ಆ ಕಾರ್ಯಾಂಗ ಸಂಸತ್ತನ್ನು ಅವಲಂಬಿ ಸಿಲ್ಲ. ಆದರೆ ಬ್ರಿಟನ್ ಮಾದರಿಯ ಶಾಸಕಾಂಗವು ಸಂಪೂರ್ಣವಾಗಿ ಸಂಸತ್ತನ್ನು ಅವಲಂಬಿಸಿದೆ.
ದೇಶಕ್ಕೆ ಆ ಸಂಸದೀಯ ವ್ಯವಸ್ಥೆ ಸೂಕ್ತ ಎಂದು ಸಮರ್ಥಿಸಿಕೊಂಡಿದ್ದರು. ಆದರೆ ಅಂಬೇಡ್ಕರ್ ರೂಪಿಸಿದ ಸಂಸದೀಯ ಜನತಂತ್ರ ವ್ಯವಸ್ಥೆಯನ್ನು ಬದಲಿಸಿ ಅಮೆರಿಕ ಅಧ್ಯಕ್ಷ ಮಾದರಿ ಆಡಳಿತ ವ್ಯವಸ್ಥೆ ತರುವ ಯತ್ನ ಮತ್ತೆ ಮತ್ತೆ ನಡೆಯುತ್ತಲೇ ಇದೆ.
ವಾಜಪೇಯಿ ಪ್ರಧಾನಿಯಾಗಿದ್ದಾಗ ಸಂವಿಧಾನ ಪುನರ್ ರಚನೆಯ ಯತ್ನವೊಂದು ನಡೆಯಿತು. ಆಗ ಪ್ರತಿಪಕ್ಷಗಳು ಮಾತ್ರವಲ್ಲ ಎನ್‌ಡಿಎ ಮಿತ್ರ ಪಕ್ಷಗಳು ಕೂಡ ಅದನ್ನು ವಿರೋಧಿಸಿದವು. ಅಂತಲೇ ಈ ಬಾರಿ ವ್ಯಕ್ತಿಯೇ ಪ್ರಧಾನಿ ಎಂದು ಬಿಂಬಿಸಿ ನರೇಂದ್ರ ಮೋದಿಯನ್ನು ಗೆಲ್ಲಿಸಿ ಯಾರ ಹಂಗಿಲ್ಲದೆ ತಮ್ಮ ಗುರಿ ಸಾಧಿಸಿಕೊಳ್ಳಲು ಫ್ಯಾಸಿಸ್ಟ್ ಶಕ್ತಿಗಳು ಷಡ್ಯಂತ್ರ ರೂಪಿಸಿದೆ. ಕಾರ್ಪೊರೇಟ್ ಬಂಡವಾಳಶಾಹಿ ಗೂ ಸಂಸತ್ತು ಬೇಡವಾಗಿದೆ.
ರಾಜಕೀಯ ಅಧಿಕಾರ ಒಬ್ಬ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾದರೆ ದೇಶ ಲೂಟಿ ಮಾಡುವ ಅವರ ದಂಧೆ ನಿರಾತಂಕವಾಗಿ ನಡೆಯುತ್ತದೆ. ಗುಜರಾತ್‌ನಲ್ಲಿ ನರೇಂದ್ರ ಮೋದಿ ವಿಧಾನಸಭೆಯ ಗಮನಕ್ಕೂ ತಾರದೆ ಅದಾನಿ ಎಂಬ ಬಂಡವಾಳಗಾರನಿಗೆ 18 ಸಾವಿರ ಎಕರೆ ಭೂಮಿಯನ್ನು ಎಕರೆಗೆ 4 ಸಾವಿರ ರೂ. ನಿಗದಿ ಮಾಡಿ ನೀಡಿ ದರು. ಕೈಗಾರಿಕಾ ಉದ್ದೇಶಕ್ಕಾಗಿ ಪಡೆದ ಭೂಮಿಯನ್ನು ಆತ ಎಕರೆಗೆ 32 ಲಕ್ಷ ರೂ.ನಂತೆ ಬೇರೆಯವರಿಗೆ ಮಾರಾಟ ಮಾಡಿದ್ದಾನೆ. ಈ ಎಲ್ಲ ಪ್ರಕ್ರಿಯೆ ನಿರಾತಂಕವಾಗಿ ಯಾವುದೇ ಚರ್ಚೆ ಇಲ್ಲದೆ ನಡೆಯಿತು.
ಇಂಥ ವ್ಯಕ್ತಿ ಪ್ರಧಾನಿಯಾಗಲಿ ಎಂದು ಈ ಬಂಡವಾಳಿಗರು ಕನಸು ಕಾಣುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಜನ ಆ ಸರಕಾರದ ಕಹಿ ಅನುಭವಿಸಿದ್ದಾರೆ. ಆರೆಸ್ಸೆಸ್ ಶಾಖೆಯಲ್ಲಿ ಚಾರಿತ್ರವಂತರಾಗಿ ತಯಾರಾದ ಸ್ವಯಂ ಸೇವಕರು ಮಂತ್ರಿಗಳಾದ ನಂತರ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದರು. ಸದನದಲ್ಲಿ ಬ್ಲೂಫಿಲಂ ನೋಡಿದರು. ಅಂತಲೆ ಇಲ್ಲಿನ ಬಿಜೆಪಿ ನಾಯಕರು ತಮಗೆ ಮತ ನೀಡಬೇಕೆಂದು ಕೇಳುತ್ತಿಲ್ಲ.
ಬಿಜೆಪಿಯ ಯಾರನ್ನೇ ಕೇಳಿದರೂ ‘‘ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ತಮಗೆ ಓಟು ಹಾಕಿ’’ ಎಂದು ಹೇಳುತ್ತಾರೆ. ಅಂತಲೇ ಈ ಬಾರಿ ಮೋದಿ ಎಂದು ದೇಶದ ಮೂಲೆಮೂಲೆಗಳಲ್ಲಿ ಪ್ರಚಾರ ನಡೆದಿದೆ. ಗಾಂಧಿ ಹೆಸರು ಗೊತ್ತಿಲ್ಲದ ಊರಿನಲ್ಲೂ ಮೋದಿ ಭಜನಾ ಮಂಡಳಿಗಳು ಹುಟ್ಟಿಕೊಂಡಿವೆ. ಬಿಜೆಪಿಯಲ್ಲೆ ಅಡ್ವಾಣಿ, ಜೋಶಿ, ಜಸ್ವಂತ್ ಸಿಂಗ್ ಮೂಲೆಗುಂಪಾಗಿದ್ದಾರೆ. ಗುಜರಾತ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಭದ್ರ ಬುನಾದಿಯನ್ನು 60/80ರ ದಶಕದಲ್ಲಿ ಸಾಧಿಸಲಾಗಿತ್ತು ಎಂಬುವುದು ಮೇಲಿನ ಅಂಶಗಳಿಂದ ರುಜುವಾತಾಗುತ್ತದೆ.
ೋದಿ ಸರಕಾರದ ಸಾಧನೆಗಳು ನಿಜಕ್ಕೂ ಮಾದರಿಯಾಗಲು ಸಾಧ್ಯವೇ? ಬೃಹತ್ ಕೈಗಾರಿಕೆಗಳಿಗೆ ಉತ್ತೇಜನ, ಸಣ್ಣ ಉದ್ದಿಮೆದಾರರಿಗೆ ಮತ್ತು ರೈತ ವರ್ಗಕ್ಕೆ ಸಂಕಷ್ಠ: ಕೈಗಾರಿಕೆಗಳಿಗೆ ಪ್ರೋತ್ಸಾಹ ಎಂಬ ನೆಪದಲ್ಲಿ ಮೋದಿಯವರು ದೊಡ್ಡ ಉದ್ಯಮಿಗಳಿಗೆ ಕೆಂಪು ಹಾಸು ಹಾಕಿ ಸ್ವಾಗತಿಸಿ ಕನಿಷ್ಠ ದರದಲ್ಲಿ ರೈತರ ಜಮೀನುಗಳನ್ನು ನೀಡಿದ್ದಾರೆ. ಉದಾ: ಅದಾನಿ ಗ್ರೂಪ್ ಸಂಸ್ಥೆಗಳಿಗೆ ಚದರ ಅಡಿಗೆ ರೂ. 150ರಿಂದ 1000 ಬೆಲೆಯ ಭೂಮಿಯನ್ನು ಕೇವಲ ರೂ.1ರಿಂದ ರೂ. 32(ಚ.ಮೀ.)ರಂತೆ ನೀಡಿದ್ದಾರೆ.
ಇದೇ ರೀತಿ ಟಾಟಾ ಸಂಸ್ಥೆಯ ನ್ಯಾನೋ ಕಾರು ಸಂಸ್ಥೆಗೆ ಚ.ಕಿ.ಮೀ.ಗೆ ರೂ. 10,000 ಬೆಲೆಯ ಭೂಮಿಯನ್ನು ಕೇವಲ ರೂ. 900ರಂತೆ ನೀಡಿದ್ದಲ್ಲದೆ, ಅವರ ಒಟ್ಟು ಬಂಡವಾಳ ರೂ. 2200 ಕೋಟಿಗೆ ಪ್ರತಿಯಾಗಿ ರೂ.9000 ಕೋಟಿಯನ್ನು ಕೇವಲ 0.10 ಶೇ. ಬಡ್ಡಿದರದಲ್ಲಿ ದೀರ್ಘಾವಧಿ ಸಾಲವಾಗಿ ನೀಡಲಾಯಿತು! ಇದೇ ರೀತಿ ರಿಲಯನ್ಸ್, ಎಸ್ಸಾರ್ ಗ್ರೂಪ್ ಸಂಸ್ಥೆಗಳಿಗೂ ಜುಜುಬಿ ದರದಲ್ಲಿ ಭೂಮಿ ನೀಡುತ್ತಾ ರೈತರು ಪದೇ ಪದೇ ತಮ್ಮ ಹಕ್ಕಿಗಾಗಿ/ನ್ಯಾಯಕ್ಕಾಗಿ ಹೋರಾಟಕ್ಕಿಳಿದರೆ ಅವರನ್ನು ಕೇಳುವವರೇ ಇಲ್ಲವಾಯಿತು.
ಪರಿಣಾಮವಾಗಿ ಕಳೆದ 10 ವರ್ಷಗಳಲ್ಲಿ ಮೋದಿಯವರ ಪ್ರಗತಿಪರ ಸುಖೀ ರಾಜ್ಯದಲ್ಲಿ ಸುಮಾರು 5,547 ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ! ಉದ್ಯಮ ಪರ ರೈತ ವಿರೋಧಿ ಭೂಸ್ವಾಧೀನ ಕಾನೂನು:   ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ಪೂರ್ತಿ ಉದ್ಯಮಪತಿಗಳ ಪರವಾಗಿವ ಭೂಸ್ವಾಧೀನ ಕಾನೂನನ್ನು ಗುಜರಾತ್ ರಾಜ್ಯದಲ್ಲಿ ಜಾರಿಗೊಳಿಸಿದ ಮೋದಿಯವರು ಉದ್ಯಮಿಗಳು ಪಡೆದುಕೊಂಡ ಭೂಮಿಯ ಶೇ.75 ಭಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಮತ್ತು ಮಾರಾಟ ಮಾಡುವ ಹಕ್ಕನ್ನು ನೀಡಿದ್ದರು.
ಇಂತಹ ಉದ್ಯಮ ಪರ ಭೂಸ್ವಾಧೀನ ಕಾನೂನಿನ ಪ್ರಯೋಜನ ಪಡೆದು ರೂ. 1ರಿಂದ 32ರವರೆಗೆ (ಚ.ಮೀ.) ಪಡೆದ ಭೂಮಿಯನ್ನು ಗೌತಮ್ ಅದಾನಿ ಸಂಸ್ಥೆ ಚ.ಮೀ. ಗೆ ರೂ.800 ರಿಂದ 10,000ದವರೆಗೆ ಇತರ ಸಂಸ್ಥೆಗಳಿಗೆ ಮಾರಾಟ ಮಾಡಿ 10ಪಟ್ಟುಗಳಿಗಿಂತಲೂ ಅಧಿಕ ಲಾಭಗಳಿಸುವ ಅವಕಾಶ ನೀಡಲಾಗಿದೆ!
ಸಣ್ಣ ಕೈಗಾರಿಕೆಗಳ ನಿರ್ಲಕ್ಷ:   ಬೃಹತ್ ಉದ್ಯಮಿ ಪತಿಗಳನ್ನು ಪ್ರೋತ್ಸ್ಸಾಹಿಸುತ್ತ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳನ್ನು ನಿರ್ಲಕ್ಷಿಸುತ್ತಾ, ಮೋದಿ ಕಳೆದ 10 ವರ್ಷಗಳಲ್ಲಿ ರಾಜ್ಯದಾದ್ಯಂತ ಸುಮಾರು 60 ಸಾವಿರ ಸಣ್ಣ ಉದ್ದಿಮೆಗಳು ರೋಗ ಗ್ರಸ್ಥವಾಗಿ. 7,000 ಘಟಕಗಳು ಮುಚ್ಚಲು ಕಾರಣರಾಗಿದ್ದಾರೆ! ಅಭಿವೃದ್ಧಿಗೆ ಮಾದರಿ ಎಂದು ಹೇಳುವ ಗುಜರಾತ್ ರಾಜ್ಯ ಬಡತನ ನಿರ್ಮೂಲನಾ ಪ್ರಮಾಣದಲ್ಲಿ ರಾಷ್ಟ್ರ ಮಟ್ಟದದಲ್ಲಿ 8ನೆ ಸ್ಥಾನ ದಲ್ಲಿದೆ! ವಿಕಾಸಕ್ಕೆ ಮಾದರಿಯಾದ ಗುಜರಾತ್‌ನ, ತಲಾ ಆದಾಯ (ಛ್ಟಿ ಇಜಿಠಿ ಐ್ಞ್ಚಟಞಛಿ)ದಲ್ಲಿ ರಾಷ್ಟ್ರ ಮಟ್ಟದಲ್ಲಿ 12ನೆ ಸ್ಥಾನದಲ್ಲಿದೆ.
ಸುಖೀ ರಾಜ್ಯ ಗುಜರಾತ್‌ನಲ್ಲಿ 1ರಿಂದ 10ನೆ ತರಗತಿಯ ಶಾಲಾ ಮಕ್ಕಳು ಶಾಲೆ ಬಿಟ್ಟು ಹೋಗುವ (ಈ್ಕ ಖಿಖ) ದರ 64%ರ ತೀರಾ ಶೋಚನೀಯ ಮಟ್ಟದಲ್ಲಿದೆ.  2001ರಲ್ಲಿ ಮೋದಿ ಸಾಹೇಬರು ಅಧಿಕಾರ ವಹಿಸಿಕೊಂಡಾಗ ಇದ್ದ ಒಟ್ಟು ಸರಕಾರಿ ಸಾಲ ರೂ. 47,000 ಕೋಟಿ. ಈಗ ಅದು ರೂ. 1.76 ಲಕ್ಷ ಕೋಟಿಗೆ ತಲುಪಿದೆ! ಸದಾ ಅಭಿವೃದ್ಧಿಗೆ ದುಡಿಯುತ್ತಿರುವ (್ಖಐಆ್ಕಅಘೆ)   ಗುಜರಾತ್ ರಾಜ್ಯ ಕಳೆದ 8/9 ವರ್ಷಗಳಲ್ಲಿ ವಿವಿಧ ವಿಶ್ವ ಬಂಡವಾಳದಾರರ ಸಭೆಗಳ ಮೂಲಕ ಮಾಡಿರುವ ಯೋಜನೆಗಳ ಒಪ್ಪಂದಗಳ (ಖಿ) ಒಟ್ಟು ಮೊತ್ತ ರೂ. 39.60 ಲಕ್ಷ ಕೋಟಿ, ಆದರೆ ಬಂಡವಾಳ ದೊರೆಯುತ್ತಿರುವುದು ಕೇವಲ ರೂ. 2.16 ಲಕ್ಷ ಕೋಟಿ, ಅಂದರೆ ಒಪ್ಪಂದ ಕೇವಲ 5% !
ದೇಶದ ವಾಯುಪಡೆ 
ಯ ಪಶ್ಚಿಮ ದಕ್ಷಿಣ ವಲಯದ ನೆಲೆ ಸ್ಥಾಪಿಸಲು ಜಾಗ ಕೇಳಿ ಬರೆದ ಕಡತ ರಾಜ್ಯ ಸರಕಾರದ ಕೆಂಪು ಪಟ್ಟಿಗೆ ಸಿಲುಕಿ ನಾಲ್ಕಾರು ವರ್ಷ ದಾರಿ ಕಾಣದೆ ಕೊನೆಗೆ ಪ್ರಧಾನ ಮಂತ್ರಿ ಕಚೇರಿಯ ಮಧ್ಯ ಪ್ರವೇಶದ ನಂತರ, ಮೋದಿ ಸರಕಾರ ಆ ಭೂಮಿಯನ್ನು ಚ.ಮೀ.ಗೆ ರೂ. 1100ರ ದರದಲ್ಲಿ ನೀಡಲಾಯಿತು. ಆದರೆ ಅಲ್ಲೇ ಪಕ್ಕದ ಭೂಮಿಯನ್ನು ರಿಯಲ್ ಎಸ್ಟೇಟ್ ದಿಗ್ಗಜ ರಹೆಜಾ ಕಂಪೆನಿಗೆ ಕೇವಲ ರೂ.450ರಂತೆ ನೀಡಲಾಯಿತು. ಸದಾ ದೇಶಭಕ್ತಿಯ ಮಾತು ಗಳನ್ನು ಪುಂಖಾನಪುಂಖವಾಗಿ ಪಠಿಸುವ ಬಾ.ಜ.ಪ ಬಂಧುಗಳಿಗೆ ಮೋದಿಯವರ ಮೇಲಿನ ಅತೀವ ದೇಶಭಕ್ತಿಯ ಮಾದರಿ ಗಮನಕ್ಕೆ ಬರುವುದೇ ಇಲ್ಲ!
ಸದಾ ಇತರೇ ಪಕ್ಷಗಳ/ಸರಕಾರಗಳ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಮೋದಿ ಸಾಹೇಬರು ತನ್ನ ರಾಜ್ಯದಲ್ಲಿ ಲೋಕಾಯುಕ್ತರ ನೇಮಕಕ್ಕೆ ಪೂರ್ತಿ 12 ವರ್ಷ ಬೇಕಾಯಿತು. ಅದೂ, ರಾಜ್ಯಪಾಲರ ಮತ್ತು ಹೈಕೋರ್ಟ್ ಆದೇಶದ ಬಳಿಕ!
ಈ ಮೇಲಿನ ವಿಚಾರಗಳೊಂದಿಗೆ ಇನ್ನು ಅನೇಕ ವಿಷಯಗಳನ್ನು ಚಾಪೆಯಡಿಗೆ ತೂರುತ್ತಾ ತನ್ನ ರಾಜ್ಯದ ಅಮೋಘ ತಥಾಕಥಿತ ಅಭಿವೃದ್ಧಿ ಮಾದರಿಯನ್ನು ಅದ್ದೂರಿಯಾಗಿ ಪ್ರಚಾರ ಮಾಡುತ್ತಲೇ ಇದ್ದರೆ ಇಂತಹ ಅದ್ದೂರಿ ಮಾರ್ಕೆಟಿಂಗ್ ಸುಳಿಗೆ ಸಿಕ್ಕ ಮತದಾರರು ಈ ಮೇಲಿನ ವಿಚಾರಗಳನ್ನು ಸಮಚಿತ್ತದಿಂದ ವಿಮರ್ಶಿಸಿ ವಿವೇಚನೆಯಿಂದ ಮತದಾನದ ಹಕ್ಕನ್ನು ಚಲಾಯಿಸುವರೆಂದು ಆಶಿಸುತ್ತೇನೆ.
ಆಧಾರ: ಪ್ರೊ. ಹೇಮಂತ ಶಹಾ ಅವರ ಸಚ್ಚಾಯಿ ಗುಜರಾತ್‌ಕೀ, ಗೌತಂ ಠಕ್ಕರ್, ಪಿಯುಸಿಎಲ್ ಕಾರ್ಯಕರ್ತ ಇವರ ಲೇಖನಗಳು ಮತ್ತು ಸರಕಾರಿ ಮತ್ತು ಆರ್.ಬಿ.ಐ. 

Advertisement

0 comments:

Post a Comment

 
Top