
ಪ್ರೀತಿ ಮಾಯೆ ಹುಷಾರು ಕಣ್ಣಿಗೆ ಕಾಣೋ ಬಜಾರು.. ಅಂತಿರೋ ಹಾಡನ್ನು ನಾವು ಈ ಸ್ಟೋರಿಗಾಗಿ ಕೊಂಚ ಚೇಂಜ್ ಮಾಡಿ ಹೇಳಬೇಕಿದೆ. ಯಾಕಂದ್ರೆ ಪ್ರೀತಿಯ ಮಾಯೆ ಒಂಥರಾ ಆಗಿದ್ರೆ ಇಂದಿನ ಯುವಜನರಲ್ಲಿ ಮೊಬೈಲ್ ಗೀಳು ಕಡಿಮೆಯೇನಿಲ್ಲ. ತನ್ನಷ್ಟಿದ ಮೊಬೈಲ್ ಕೊಡಿಸಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಆ ಹುಡುಗ ಈಗ ಮನೆ ಬಿಟ್ಟು ಓಡಿಹೋಗಿದ್ದಾನೆ. ಹೀಗಾಗಿ ಮಗನನ್ನು ಕಾಣದ ಪಾಲಕರು ಕಂಗಾಲಾಗುವಂತಾಗಿದೆ.
ಬಹುತೇಕ ಕಡೆಗಳಲ್ಲಿ ಪ್ರೀತಿಗಾಗಿ ಮನೆ ಬಿಟ್ಟು ಹೋಗುತ್ತಿದ್ದ ಯುವಕರು, ಬಾಲಕರು ಇಂದು ಮೊಬೈಲ್ ಗಾಗಿ ಮನೆ ಬಿಟ್ಟು ಓಡಿ ಹೋಗೋಕೆ ಮುಂದಾಗ್ತಿದ್ದಾರೆ. ಅಂದ್ಹಾಗೆ ಈತನ ಹೆಸರು ಶಶಿಕುಮಾರ್ ಅಂತಾ,,, ಈತ ಮೂಲತ ಕೊಪ್ಪಳದ ಗಂಗಾವತಿಯ ಹಿರೇಜಂತಕಲ್
ಗ್ರಾಮದಲ್ಲಿರುವ ವಿರುಪಾಕ್ಷಪ್ಪ ಮತ್ತು ಶಶಿರೇಖಾ ಅನ್ನೋ ದಂಪತಿಯ ಎರಡನೇ ಸುಪುತ್ರ. ಹದಿನೈದು ವರ್ಷದ ಶಶಿಕುಮಾರ್‌ಗೆ ಮೊಬೈಲ್ ಅಂದ್ರೆ ಇನ್ನಿಲ್ಲದ ಹುಚ್ಚು. ಮಲಗಿದ್ರು ಮೊಬೈಲ್ ಬೇಕು... ಊಟುಕ್ಕೆ ಕುಳಿತೀರು ಮೊಬೈಲ್‌ನಲ್ಲಿ ಮಾತನಾಡುತ್ತ ಊಟ ಮಾಡುತ್ತಿದ್ದ ಕಣ್ರೀ,,, ಮೊಬೈಲ್ ಕೈಯಲ್ಲಿ ಇಲ್ಲಂದ್ರೆ ಸಾಕು ಈತ ಏನು ಮಾಡುವುಕ್ಕೆ ಹಿಂಜೆರುತ್ತೀರಲಿಲ್ಲ,,,
ಮೊಬೈಲ್ ಗೀಳಿಗೆ ಬಿದ್ದ ಬಾಲಕ ತನಗೆ ಇಷ್ಟ ಆಗುವ ಮೊಬೈಲ್ ಸೆಟ್ ಮನೆಯವರು ಕೊಡಿಸಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಮನೆ ಬಿಟ್ಟು ಓಡಿ ಹೋಗಿದ್ದಾನೆ.
.png)

0 comments:
Post a Comment