ಶೃಂಗೇರಿಯಲ್ಲಿ ನಡೆದ ಎಎನ್‌ಎಫ್ ಎನ್‌ಕೌಂಟರ್ ನಲ್ಲಿ ಮುಗ್ದ ಯುವಕ ಕಬೀರ್ ಬಲಿಯಾಗಿದ್ದಾನೆ. ಯಾವುದೇ ರೀತಿಯ ವಿಚಾರಣೆ ಮಾಡದೇ ಚೆಕ್‌ಪೋಸ್ಟ್‌ನಲ್ಲಿದ್ದ ಎಎನ್‌ಎಫ್ ಪೋಲೀಸರು ನಕ್ಸಲಿಯ ಎಂಬ ಸಂಶಯದ ಮೇರೆಗೆ ಅಮಾಯಕನ ಬಲಿ ತೆಗೆದುಕೊಂಡಿದ್ದಾರೆ. ಜಾನುವಾರು ಸಾಗಾಟ ಮಾಡುತ್ತಿದ್ದವರ ಮೇಲೆ ಕರ್ತವ್ಯ ನಿರತ ಸಿಬ್ಬಂದಿಯು ಸರಿಯಾದ ವಿಚಾರಣೆ ಮಾಡದೆ ಗುಂಡು ಹಾರಿಸಿದ್ದಾರೆ. ಮುಗ್ಧನ ಹತ್ಯೆಯನ್ನು ಕೊಪ್ಪಳ ಪ್ರಗತಿ ಪರ ವೇದಿಕೆಯು ತೀವ್ರವಾಗಿ ಖಂಡಿಸಿದೆ.
ಸರಕಾರವೂ ಈ ಕೂಡಲೇ ತಪ್ಪಿತಸ್ಥ ಪೋಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಮೃತ ಕುಟುಂಬಕ್ಕೆ ನೀಡಲಾದ ಪರಿಹಾರ ಮೊತ್ತವನ್ನು ಹೆಚ್ಚಿಸುವುದರ ಜೊತೆಗೆ ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ನೀಡಬೇಕು ಅಲ್ಲದೇ ಮೃತನ ಶರೀರವನ್ನು ಪಡೆಯಲು ಬಂದ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಮಾನವೀಯತೆ ಮರೆತ ಬಜರಂಗದಳ ಸೇರಿದಂತೆ ಇತರ ಸಂಘಟನೆಗಳವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಶ ಹಿಟ್ನಾಳರಿಗೆ ಕೊಪ್ಪಳದ ಪ್ರಗತಿ ಪರ ಸಂಘಟನೆಗಳ ವೇದಿಕೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಪಿಯುಸಿಎಲ್ ಸಂಘಟನೆಯ ಎಚ್.ವಿ.ರಾಜಾಬಕ್ಷಿ, ಭಾರತ ಕಮ್ಯೂನಿಸ್ಟ್ ಪಕ್ಷದ ಎಸ್.ಎ.ಗಫಾರ್, ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ಸಂಘಟಕರು, ವೀರಕನ್ನಡಿಗ ಯುವಕ ಸಂಘದ ಶಿವಾನಂದ ಹೊದ್ಲೂರ, ಅಂಜುಮನ್ ಕಮೀಟಿಯ ಕಾಟನ್ ಪಾಷಾ, ಮಾನ್ವಿ ಪಾಷಾ, ಭೀಮರಾವ್ ಸಂಸ್ಥೆಯ ರಾಜಶೇಖರ ಮುಳುಗುಂದ, ಅಖಿಲ ಭಾರತ ತನ್‌ಝೀಮ್ ಎ ಇನ್ಸಾಫ್‌ನ ನನ್ನುಸಾಬ ನೀಲಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಮೇಶ , ಅಮನ್ ವೆಲ್ ಫೇರ್ ಸೊಸೈಟಿಯ ಶಾಬುದ್ದೀನ್ ಸಾಬ ನೂರಬಾಷಾ, ಸ್ನೇಹ ಬಳಗದ ಅಜೀಮ್ ಅತ್ತಾರ,ಶೇರ್ ಎ ಮೈಸೂರ ಹಜರತ್ ಟಿಪ್ಪುಸುಲ್ತಾನ್ ಸರ್ಕಲ್‌ನ ಮುಸ್ತಫಾ,ಎಂ.ಎಸ್.ಗುದಿ, ಸ್ಲಂ ಜನಾಂದೋಲನ ವೇದಿಕೆಯ ವಹಾಬ್, ಜಯ ಕರ್ನಾಟಕ ಸಂಘಟನೆಯ ಬಷೀರ್ ಹಾಗೂ ಸಯ್ಯದ್ ಗೌಸ್ ಪಾಶಾ,ಪ್ರಭು ಗಾಳಿ,ಸಮಾಜ ಸೇವಕ ಕೆ.ಎಂ.ಸಯ್ಯದ ಉಪಸ್ಥಿತರಿದ್ದರು.
0 comments:
Post a Comment