PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು ೦೮ ವಿಧಾನಸಭೆ ಕ್ಷೇತ್ರಗಳು ಒಳಪಟ್ಟಿದ್ದು, ಇದರಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳು.  ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳು ಸೇರಿವೆ.  

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ೭೫೪೬೦೫ ಪುರುಷ, ೭೪೮೧೮೦ ಮಹಿಳೆ ಸೇರಿದಂತೆ ಒಟ್ಟು ೧೫೦೨೭೮೫ ಮತದಾರರಿದ್ದಾರೆ ಅಲ್ಲದೆ ಕ್ಷೇತ್ರದಲ್ಲಿ ಒಟ್ಟು ೧೮೩೬ ಮತಗಟ್ಟೆಗಳಿವೆ.  

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ  ೨೫೨ ಮತಗಟ್ಟೆಗಳಿದ್ದು, ೧೦೦೯೦೭-ಪುರುಷ, ೯೮೨೪೬- ಮಹಿಳೆ ಸೇರಿದಂತೆ ಒಟ್ಟು ೧೯೯೧೫೩ ಮತದಾರರಿದ್ದಾರೆ.  

ಕನಕಗಿರಿ ಕ್ಷೇತ್ರದಲ್ಲಿ ೨೩೯ ಮತಗಟ್ಟೆಗಳಿದ್ದು, ೯೨೭೧೩-ಪುರುಷ, ೯೩೫೮೬- ಮಹಿಳೆ ಸೇರಿದಂತೆ ಒಟ್ಟು ೧೮೬೨೯೯ ಮತದಾರರಿದ್ದಾರೆ.  

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ೨೧೧ ಮತಗಟ್ಟೆಗಳಿದ್ದು, ೮೭೫೫೬-ಪುರುಷ, ೮೭೩೨೫-ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೭೪೮೮೧ ಮತದಾರರಿದ್ದಾರೆ.  

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ೨೩೭ ಮತಗಟ್ಟೆಗಳಿದ್ದು, ೯೪೨೨೬-ಪುರುಷ, ೯೦೪೪೪- ಮಹಿಳೆ ಹೀಗೆ, ಒಟ್ಟು ೧೮೪೬೭೦ ಮತದಾರರಿದ್ದಾರೆ.  

ಕೊಪ್ಪಳ ಕ್ಷೇತ್ರದಲ್ಲಿ ೨೫೩ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೧೦೭೦೩೮-ಪುರುಷ, ೧೦೪೭೨೫-ಮಹಿಳೆ ಸೇರಿದಂತೆ ಒಟ್ಟು ೨೧೧೭೬೩ ಮತದಾರರಿದ್ದಾರೆ.  

ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರದಲ್ಲಿ ೨೩೭ ಮತಗಟ್ಟೆಗಳಿದ್ದು, ೧೦೧೩೪೭-ಪುರುಷ, ೧೦೧೨೦೮- ಮಹಿಳೆ ಸೇರಿದಂತೆ ಒಟ್ಟು ೨೦೨೫೫೫ ಮತದಾರರಿದ್ದಾರೆ.  

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ೨೦೪ ಮತಗಟ್ಟೆಗಳಿದ್ದು, ೮೪೩೩೭-ಪುರುಷ, ೮೪೦೦೧-ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೬೮೩೩೮ ಮತದಾರರಿದ್ದಾರೆ.  

ಬಳ್ಳಾರಿ ಜಿಲ್ಲೆ ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ೨೦೩ ಮತಗಟ್ಟೆಗಳಿದ್ದು, ೮೬೪೮೧-ಪುರುಷ, ೮೮೬೪೫- ಮಹಿಳೆ ಹೀಗೆ, ಒಟ್ಟು ೧೭೫೧೨೬ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top