PLEASE LOGIN TO KANNADANET.COM FOR REGULAR NEWS-UPDATES

  ಕೊಪ್ಪಳ : ಹೈದ್ರಾಬಾದ ಕರ್ನಾಟಕದ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಜೊತೆಗೆ ಕೊಪ್ಪಳ ಸಾಕ್ಷರತತೆಯಲ್ಲಿಯೂ ಹಿಂದುಳಿದ್ದು. ಈ  ಕಳಂಕ ತೊಡೆದದು ಹಾಕಲು ಶ್ರಮಿಸಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಯಪನ್ಯಾಸಕ ಡಾ|| ಕೆ.ಎಂ. ಮೇತ್ರಾಕರೆ ನೀಡಿದ್ದಾರೆ. ತಾಲೂಕಿನ ಬೂದಗುಂಪಾದಲ್ಲಿ ಕುವೆಂಪು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಕ್ಕಳನ್ನು ಶಾಲೆಯತ್ತ ಅಕರ್ಪಿಸಲು ಸರ್ಕಾರಗಳು ಹಲವು ಯೋಜನೆ ರೂಪಿಸಿದ್ದರೂ ಸಹ ಸಂಪೂರ್ಣ ಯಶಸ್ಸು ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಪಾಲಕರು ಹಾಗೂ ಶಿಕ್ಷಕರು ಹೆಚ್ಚು ಕಾರ್ಯೋನ್ಮುಖರಾಗಬೇಕಿದೆ ಎಂದರು. 
      ಪತ್ರಕರ್ತ ದೇವ್ರ ನಾಗನೂರ ಮಾತನಾಡಿ, ಪ್ರಾಥಮಿಕ ಶಾಲೆಗಳೇ  ಶಿಕ್ಷಣದ ಬುನಾದಿ, ಆದರೆ, ಶಾಲೆಗಳಲ್ಲಿ ಕೇವಲ ಪಠ್ಯಕ್ರಮ, ಅಂಕಗಳು ಹಾಗೂ ಫಲಿತಾಂಶದ ಬಗ್ಗೆ ಚರ್ಚೆ ನಡೆದಿದೆ. ಪಠ್ಯೇತರ ಚಟುವಟಿಕೆಗಳು ಗೌಣವಾಗುತ್ತಿವೆ. ಆದರೆ, ಮಕ್ಕಳಲ್ಲಿ ಆತ್ಮಬಲ ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಇಲ್ಲದಿದ್ದರೆ ವಿದ್ಯಾರ್ಥಿಗಳು ಆತ್ಮಹತ್ಯೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದರು. 
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ವೈ. ಸುದರ್ಶನ್ ರಾವ್, ಸಹಾಯಕ ಪ್ರಾಧ್ಯಪಕಿ ಡಾ.ಹುಲಿಗೆಮ್ಮೆ ನಾಗನೂರ, ಶಿಕ್ಷಣ ಸಂಯೋಜಕ ಹನುಮಂತಪ್ಪ ನಾಯಕ, ಶಿವನಗೌಡ ಪೊಲೀಸ್ ಪಾಟೀಲ್  ಸೇರಿದಂತೆ ಹಲವರು ಇದ್ದರು. 

Advertisement

0 comments:

Post a Comment

 
Top