PLEASE LOGIN TO KANNADANET.COM FOR REGULAR NEWS-UPDATES

 ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಭಾರತ ಮತ್ತೊಮ್ಮೆ ಆರೆಸ್ಸೆಸ್ ನಿಯಂತ್ರಣಕ್ಕೆ ಒಳಪಡುತ್ತದೆ. ಒಮ್ಮೆ ಕೇಂದ್ರ ಸರಕಾರದ ಅಧಿಕಾರ ಸೂತ್ರ ಹಿಡಿದ ನಂತರ ಮನುವಾದಿ ಫ್ಯಾಸಿಸ್ಟ್ ಅಜೆಂಡಾವನ್ನು ನಾಜೂಕಾಗಿ ಜಾರಿಗೆ ತರಲು ಸಾಧ್ಯವಾಗುತ್ತದೆ. ಕ್ರಮೇಣ ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಹೂತು ಹಾಕಿ ಸಾಮಾಜಿಕ ನ್ಯಾಯ ಆಶಯಕ್ಕೆ ಕೊಳ್ಳಿ ಇಡಬಹುದು. ಇವೆಲ್ಲ ಯಶಸ್ವಿಯಾಗ ಬೇಕಾದರೆ ಲೋಕಸಭೆ ಚುನಾವಣೆಯಲ್ಲಿ 272 ಸ್ಥಾನಗಳನ್ನು ಗೆಲ್ಲಬೇಕು. ಗೆಲ್ಲಲು ಏನೇನು ಮಾಡಬೇಕೋ ಅದನ್ನೇ ಸಂಘಪರಿವಾರ ಈಗ ಮಾಡುತ್ತಿದೆ. ಲೋಕಸಭೆಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ 120 ಸದಸ್ಯರು ಆರಿಸಿ ಬರುತ್ತಾರೆ.

ವಾರ್ತಾಭಾರತಿ ಪತ್ರಿಕೆಯ ಅಂಕಣ ಬರಹ
ಈ 120 ಸ್ಥಾನಗಳನ್ನು ಗೆಲ್ಲಬೇಕಾ ದರೆ ಬರೀ ಮೇಲ್ಜಾತಿಯ ಬ್ರಾಹ್ಮಣ, ಬನಿಯಾ ಓಟುಗಳನ್ನು ಮಾತ್ರ ನೆಚ್ಚಿಕೊಂಡರೆ ಸಾಧ್ಯ ವಾಗುವುದಿಲ್ಲ. ಈ ಗುರಿಸಾಧನೆಗೆ ಇತರ ಹಿಂದುಳಿದ ಮತ್ತು ದಲಿತರ ಓಟುಗಳು ಬಿಜೆಪಿ ಕೂಟದ ಪರವಾಗಿ ಬೀಳಬೇಕಾಗುತ್ತದೆ. ಇದ ಕ್ಕಾಗಿ ಮಂಡಲ-ಕಮಂಡಲ ಮಿಶ್ರ ಸೂತ್ರವನ್ನು ಅಳವಡಿಸಲು ಆರೆಸ್ಸೆಸ್ ಮುಂದಾಗಿದೆ. ಈ ನಿಟ್ಟಿನಲ್ಲಿ ಸಮಾಜವಾದಿ ಹಾಗೂ ಸಂಯುಕ್ತ ಜನತಾದಳದ ಅನೇಕ ನಾಯಕ ರನ್ನು ಅದು ತನ್ನ ಬುಟ್ಟಿಗೆ ಹಾಕಿ ಕೊಳ್ಳತೊಡಗಿದೆ. ವಿ.ಪಿ. ಸಿಂಗ್ ಸರಕಾರ ಕೇಂದ್ರದಲ್ಲಿದ್ದಾಗ ಮಂಡಲ ಆಯೋಗ ಜಾರಿಗೆ ತಂದು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಮುಂದಾ ದರು. ಅದನ್ನು ತಡೆಯಲು ಶತಾಯ ಗತಾಯ ಯತ್ನಿಸಿದ ಸಂಘಪರಿವಾರ ರಾಮಜನ್ಮ ಭೂಮಿ ರಥಯಾತ್ರೆ ನಡೆಸಿ ಕಮಂಡಲ ಅಸ್ತ್ರ ಪ್ರಯೋಗಿ ಸಿತು. ಆದರೆ, ನಂತರದ ವರ್ಷಗಳಲ್ಲಿ ಇದು ಫಲನೀಡದಿದ್ದಾಗ ನಿತೀಶ್ ಕುಮಾರ್‌ರಂಥ ಹಿಂದುಳಿದ ನಾಯಕ ರನ್ನು ಬುಟ್ಟಿಗೆ ಹಾಕಿಕೊಂಡಿತು. ಜಾರ್ಜ್ ಫೆರ್ನಾಂಡಿಸ್‌ರಂಥ ಸಮಾಜವಾದಿಗಳು ಈ ಮಂಡಲ- ಕಮಂಡಲದ ಮಿಶ್ರಣ ರಾಜಕಾರಣದ ಸೂತ್ರಧಾರರಾದರು. ಈ ಮಂಡಲ-ಕಮಂಡಲ ಮಿಶ್ರಣ ಮಾಡಿ ಎನ್‌ಡಿಎ ಹೆಸರಿನಲ್ಲಿ ಕೇಂದ್ರದ ಅಧಿಕಾರ ಸೂತ್ರ ಹಿಡಿದು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದ ಸಂಘಪರಿವಾರ ನಂತರ ತನ್ನ ಹಿಡನ್ ಅಜೆಂಡಾವನ್ನು ಸದ್ದಿಲ್ಲದೆ ಜಾರಿಗೆ ತರತೊಡಗಿತು. ಪಠ್ಯಪುಸ್ತಕಗಳ ಕೇಸರೀಕರಣ ಅಂದರೆ ಕೋಮು ವಾದೀಕರಣ ಪ್ರಕ್ರಿಯೆಗೆ ಚಾಲನೆ ನೀಡಿತು. ಸಂವಿಧಾನ ಪರಾಮರ್ಶೆಯ ದುಸ್ಸಾಹಸಕ್ಕೂ ಕೈಹಾಕಿತು. ಆಗೆಲ್ಲ ಕೇಂದ್ರ ಸರಕಾರದಲ್ಲಿ ಸಚಿವ ರಾಗಿದ್ದ ಜಾರ್ಜ್ ಫೆರ್ನಾಂಡಿಸ್, ರಾಮ್ ವಿಲಾಸ್ ಪಾಸ್ವಾನ್, ಶರದ್ ಯಾದವ್ ತೆಪ್ಪಗಿದ್ದರು.
ಆದರೆ, ವಾಜಪೇಯಿ ನೇತೃತ್ವದ ಸರಕಾರದ ಜಾಗತೀಕರಣ, ಮುಕ್ತ ಮಾರುಕಟ್ಟೆ ಪರವಾದ ಆರ್ಥಿಕ ನೀತಿ ಧೋರಣೆಗಳ ಬಗ್ಗೆ ಜನರಲ್ಲಿ ಭ್ರಮ ನಿರಶನ ಉಂಟು ಮಾಡಿದವು. ಭ್ರಷ್ಟಾಚಾರ ಹಗರಣ ಜನರಿಗೆ ಬೇಸರ ತರಿಸಿ ದವು. ಇದೆಲ್ಲದರ ಪರಿಣಾಮವಾಗಿ 2004ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಪರಾಭವಗೊಂಡು ಎಡಪಕ್ಷಗಳ ಬಾಹ್ಯ ಬೆಂಬಲದಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂತು. ನಂತರದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ವಾಜಪೇಯಿ ಸರಕಾರವಿದ್ದಾಗ ಕೋಮು ವಾದಿ, ಮನುವಾದಿ ಅಜೆಂಡಾವನ್ನು ಸಂಪೂರ್ಣವಾಗಿ ಜಾರಿಗೆ ತರಲು ಆರೆಸ್ಸೆಸ್‌ಗೆ ಸಾಧ್ಯವಾಗಿರಲಿಲ್ಲ. ಈಗ ನರೇಂದ್ರ ಮೋದಿಯಂಥ ಫ್ಯಾಸಿಸ್ಟ್ ಮನೋಭಾವದ ದುರಹಂಕಾರಿಯನ್ನು ಮುಂದಿಟ್ಟುಕೊಂಡು ಕೇಂದ್ರದ ಅಧಿಕಾರ ಸೂತ್ರ ಹಿಡಿದು ಮತ್ತೆ ಅದೇ ಅಜೆಂಡಾವನ್ನು ಜಾರಿಗೆ ತರಲು ಸಂಘಪರಿವಾರ ಮಸಲತ್ತು ನಡೆಸಿದೆ. ಅದಕ್ಕಾಗಿ ಮಂಡಲ-ಕಮಂಡಲ ಮಿಶ್ರಣದ ಸೂತ್ರವನ್ನು ಉತ್ತರ ಭಾರತದಲ್ಲಿ ಅಳವಡಿಸಲು ಮುಂದಾಗಿದೆ. ಅದಕ್ಕಾಗಿ ಅವಕಾಶವಾದಿ ಆಸೆಬುರುಕ ರಾಜಕಾರಣಿಗಳನ್ನು ಅದು ಬಳಸಿಕೊಳ್ಳಲು ತಂತ್ರರೂಪಿಸಿದೆ. ಅವಕಾಶವಾದಿ ರಾಜಕಾರಣಿಗಳು ತಮ್ಮ ಕುರ್ಚಿಗಾಗಿ ಹಿಂದೆಲ್ಲ ಎಂಥ ಅನಾಹುತ ಮಾಡಿದ್ದಾರೆ ಎಂಬುದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ಇಂಥ ಅನೈತಿಕ ರಾಜಕಾರಣಕ್ಕೆ ತೀರ ಇತ್ತೀಚಿನ ಉದಾಹರಣೆಗಳೆಂದರೆ ರಾಮ್‌ವಿಲಾಸ್ ಪಾಸ್ವಾನ್ ಮತ್ತು ಉದಿತ್ ರಾಜ್. ಇವರಿಬ್ಬರೂ ಈಗ ಬಿಜೆಪಿ ಪಾಳೆಯಕ್ಕೆ ಜಿಗಿದಿದ್ದಾರೆ. ಪಾಸ್ವಾನ್ ತನ್ನ ಪುತ್ರನನ್ನು, ಪಕ್ಷವನ್ನು ಕಟ್ಟಿಕೊಂಡು ತಾವು ಹಿಂದೆಲ್ಲ ಕೋಮುವಾದಿ, ಮನುವಾದಿ ಎಂದು ಜರೆಯುತ್ತಿದ್ದ ಸಂಘಪರಿವಾರದ ಬಿಜೆಪಿ ಖೆಡ್ಡಾಕ್ಕೆ ಜಾರಿ ಬಿದ್ದಿದ್ದಾರೆ. ಉದಿತ್‌ರಾಜ್, ನೇರವಾಗಿ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ರಾಮ್‌ವಿಲಾಸ್ ಪಾಸ್ವಾನ್ ಹಿಂದೊಮ್ಮೆ ಪ್ರಧಾನಿಯಾಗುವ ಭರವಸೆ ಮೂಡಿಸಿದ್ದ ದಲಿತ ನಾಯಕ. ಲೋಹಿಯಾ ಸಮಾಜವಾದಿಯಾ ಗಿದ್ದ ಇವರು ಬಾಬರಿ ಮಸೀದಿ ನೆಲಕ್ಕುರುಳಿಸಿದ ಬಿಜೆಪಿಯನ್ನು ಕಟುವಾಗಿ ಟೀಕಿಸಿ ನಂತರ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾಗಿದ್ದರು. 2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಾಗ ಬಿಜೆಪಿಯ ಫ್ಯಾಸಿಸ್ಟ್ ಕ್ರೌರ್ಯವನ್ನು ಪ್ರತಿಭಟಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಲಾಲೂ ಪ್ರಸಾದ್ ಯಾದವ್ ಜೊತೆ ಸೇರಿ ಬಿಹಾರದಲ್ಲಿ ಜಾತ್ಯತೀತರಂಗ ಕಟ್ಟಿಕೊಂಡಿದ್ದರು. ಈ ಪಾಸ್ವಾನ್ ಈಗ ಮತ್ತೆ ಬಿಜೆಪಿ ಜೊತೆ ಮೈತ್ರಿಗೆ ಹಾತೊರೆಯುತ್ತಿದ್ದಾರೆ. ತಮ್ಮ ರಾಜಕೀಯ ಉತ್ತರಾಧಿಕಾರಿ ಪುತ್ರ ಚಿರಾಗ್‌ನನ್ನು ಕಟ್ಟಿ ಕೊಂಡು ಬಿಜೆಪಿ ಬಾವಿಗೆ ಬೀಳಲು ತಯಾರಾಗಿದ್ದಾರೆ. ಉದಿತ್‌ರಾಜ್ ಹಿಂದೆಲ್ಲ ಸಂಘಪರಿವಾರದ ಮನುವಾದವನ್ನು ವಿರೋಧಿಸುತ್ತ ಬಂದವರು. ಪರಿಶಿಷ್ಟ ವರ್ಗಗಳ ನೌಕರರ ಸಂಘಟನೆಯ ನಾಯಕ ಉದಿತ್‌ರಾಜ್ ಆರೆಸ್ಸೆಸ್ ಮತಾಂತರ ನೆಪಮಾಡಿಕೊಂಡು ಪುಂಡಾಟಿಕೆಗೆ ಇಳಿದಾಗ ಮತಾಂತರವನ್ನು ಬೆಂಬಲಿಸಿ ದಿಲ್ಲಿಯಲ್ಲಿ ಭಾರೀ ರ್ಯಾಲಿ ಸಂಘಟಿಸಿದವರು. ಈಗ ಈ ಉದಿತ್ ರಾಜ್ ದೃಷ್ಟಿಯಲ್ಲಿ ಬಿಜೆಪಿ ಕೋಮುವಾದಿ ಅಲ್ಲ, ಮನುವಾದಿ ಅಲ್ಲ. ಅದೇ ನಿಜವಾದ ಜನಪರ ಪಕ್ಷ ಎಂದು ನೇರವಾಗಿ ಆ ಪಕ್ಷದ ಸದಸ್ಯತ್ವ ಸ್ವೀಕರಿಸಿದ್ದಾರೆ. ಜಾತ್ಯತೀತ ಪಕ್ಷಗಳನ್ನು ಟೀಕಿಸಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಇನ್ನೊಬ್ಬ ದಲಿತ ನಾಯಕ ರಾಮದಾಸ್ ಅಠಾವಳೆ ಶಿವಸೇನೆ-ಬಿಜೆಪಿ ಮೈತ್ರಿ ಕೂಟ ಸೇರಿ ರಾಜ್ಯಸಭಾ ಸದಸ್ಯತ್ವ ಗಿಟ್ಟಿಸಿಕೊಂಡಿ ದ್ದಾರೆ. ಇವರನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳ ಬೇಕೆಂಬುದು ಬಿಜೆಪಿಗೂ ಗೊತ್ತು. ಒಂದೆರಡು ಎಂಪಿ, ಎಂಎಲ್‌ಎ ಸೀಟುಗಳನ್ನು ನೀಡಿದರೆ ಇವರು ಬಾಬಾ ಸಾಹೇಬರನ್ನು ಮೂಲೆಗೆ ತಳ್ಳಿ ತಮ್ಮ ಹಿಂದುತ್ವವಾದಕ್ಕೆ ಶರಣಾಗುತ್ತಾರೆ ಎಂದು ಗೊತ್ತಿರುವುದರಿಂದಲೇ ಇಂಥವರನ್ನು ಅದು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ದಲಿತರನ್ನು ಈಗಾಗಲೇ ಎಡಗೈ- ಬಲಗೈ ಎಂದು ವಿಭಜಿಸಿರುವ ಆರೆಸ್ಸೆಸ್ ಒಡೆದು ಹೋಳಾಗಿಸಿ ಆ ಗುಂಪುಗಳಲ್ಲೇ ಆಸೆ ಬುರುಕ ನಾಯಕರನ್ನು ಬುಟ್ಟಿಗೆ ಹಾಕಿಕೊಂಡು ಅವರ ನೆರವಿನಿಂದ ಸರಕಾರ ರಚಿಸಿ ತಮ್ಮ ಮನುವಾದಿ ಅಜೆಂಡಾವನ್ನು ಅತ್ಯಂತ ರಹಸ್ಯವಾಗಿ ಜಾರಿಗೆ ತರುತ್ತದೆ. ಇದರ ಫಲವನ್ನು ಈಗಾಗಲೇ ದೇಶ ಉಣ್ಣುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಇಡೀ ಸಮುದಾಯದ ಹಿತವನ್ನು ಬಲಿಕೊಡುವ ಇಂಥವ ರಿಂದಾಗಿ ಶೋಷಿತ ವರ್ಗದ ಚಳವಳಿ ಗಳು ಸತ್ವಹೀನವಾಗುತ್ತಿವೆ. ಈ ದೃಷ್ಟಿಯಿಂದ ಕರ್ನಾಟಕದ ದಲಿತ ಸಂಘಟನೆಗಳು ಎಷ್ಟೋ ವಾಸಿ. ಅಧಿಕಾರ ರಾಜಕಾರಣದ ಹತ್ತಿರ ಹೋದರೂ ಸಂಘಪರಿವಾರದ ಬಲೆಗೆ ಬಿದ್ದಿಲ್ಲ. ಕಾಂಗ್ರೆಸ್‌ನಂಥ ಜಾತ್ಯತೀತ ಪಕ್ಷಗಳ ಜೊತೆ ಒಡನಾಟ ಇಟ್ಟು ಕೊಂಡಿದ್ದರೂ ಬಿಜೆಪಿ ಹತ್ತಿರ ಸುಳಿದ ವರು ತುಂಬ ಕಡಿಮೆ. ಎಪ್ಪತ್ತರ ದಶಕ ದಲ್ಲಿ ಒಡಮೂಡಿದ ಕರ್ನಾಟಕದ ದಲಿತ ಚಳವಳಿಯ ಆರಂಭದ ದಿನಗ ಳಲ್ಲಿ ಏರ್ಪಡಿಸುತ್ತಿದ್ದ ಸತತ ಅಧ್ಯಯನ ಶಿಬಿರಗಳು ಇಂದಿಗೂ ಅನೇಕ ಕಾರ್ಯಕರ್ತರನ್ನು ದಾರಿತಪ್ಪದಂತೆ ತಡೆದು ನಿಲ್ಲಿಸಿವೆ. ಇಲ್ಲಿನ ದಲಿತ ಆಂದೋಲನ ಅಂಬೇಡ್ಕರ್ ವಾದ ಲೋಹಿಯಾ ವಾದದ ಜೊತೆ ಮಾರ್ಕ್ಸ್ ವಾದವನ್ನು ಅಪ್ಪಿಕೊಂಡ ಪರಿಣಾಮ ಇಲ್ಲಿ ಮನುವಾದದ ಆಟ ನಡೆಯಲಿಲ್ಲ. ಪಾಸ್ವಾನ್, ಉದಿತ್‌ರಾಜ್‌ರಂಥ ಅವಕಾಶ ವಾದಿಗಳು ಮನುವಾದದ ನೇಣುಗಂಬಕ್ಕೆ ಕೊರಳು ನೀಡಿದರೂ ದಲಿತ, ಹಿಂದುಳಿದ ಸಮುದಾಯ ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ತೊರೆದು ಈ ಅವಕಾಶವಾದಿಗಳ ರಾಜಕಾರಣಕ್ಕೆ ಮರುಳಾಗುವುದಿಲ್ಲ. ಅದೊಂದೆ ಈಗ ಉಳಿದ ಆಶಾಕಿರಣವಾಗಿದೆ.    ಕೃಪೆ : ವಾರ್ತಾಭಾರತಿ

Advertisement

0 comments:

Post a Comment

 
Top