PLEASE LOGIN TO KANNADANET.COM FOR REGULAR NEWS-UPDATES

 ಮನುಷ್ಯನ ಜ್ಞಾನವೃದ್ಧಿಗೆ ಮತ್ತು ಮಾನಸಿಕ ಪರಿಕರಗಳನ್ನು ವಾಸ್ತವಿಕದಲ್ಲಿ ಸಾರ್ಥಕ ಪಡಿಸಿಕೊಳ್ಳಲು ರಂಗಭೂಮಿ ನೆರವಿಗೆ ಬರುತ್ತದೆ. ಕುವೆಂಪು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗುಶಿಕ್ಷಕರ ಕಲಾವೃಂದ    ಕರ್ನಾಟಕ ನಾಟಕ  ಅಕಾಡಮಿಯ ನೂತನ ಸದಸ್ಯರಾದ ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್‌ಅವರಿಗೆ  ಅಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ   ಹಾಲ್ಕುರಿಕೆಯವರು ಮಾತನಾಡುತ್ತಾ ಜಾಗತಿಕ ಪ್ರಸ್ತುತದಲ್ಲಿ ಚಲನಾಚಿತ್ರಗಳು ಮನುಷ್ಯನನ್ನು ಹಿಂಸೆ ಕ್ರೌರ್ಯ ದುರಾಸೆಯ ಕಡೆ ಚಲಿಸುವಂತೆ ಮಾಡುತ್ತಿದ್ದರೆ, ಧಾರವಾಹಿಗಳು ಗೃಹಿಣಿಯರನ್ನು ಗುರಿಯಾಗಿಟ್ಟುಕೊಂಡು ಅವರಲ್ಲಿ ಬೇಕು ಬೇಡಗಳ ಆಸೆಗಳ ಮಹಾಪೂರವನ್ನೇ ತಲೆಗೆ ತುಂಬಿ ಸಂಸಾರಗಳನ್ನು ಹೊಡೆಯುತ್ತಿವೆ.ಆದರೆ ರಂಗಭೂಮಿ  ಮನುಷ್ಯನ ಆತ್ಮವನ್ನು ಶುದ್ಧೀಕರಿಸುವುದಲ್ಲದೆ ಸರಳ ಜೀವನದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರೇರೇಪಿಸುತ್ತದೆ,ಎಂದರು.ಶಿಕ್ಷಕರ ಕಲಾವೃಂದ ಮುಖ್ಯಸ್ಥರಾದ ರಂಗಕರ್ಮಿ ಪ್ರಾಣೇಶ ಪೂಜಾರ ಅಭಿನಂದನೆ ನುಡಿಗಳನ್ನಾಡುತ್ತಾ  ಹಾಲ್ಕುರಿಕೆ ಶಿವಶಂಕರ್ ರಂಗಭೂಮಿಗಾಗಿ ಹಗಲಿರಳು ಶ್ರಮಿಸುತ್ತಿರುವ ಅಪರೂಪದ ರಂಗವಿಜ್ಙಾನಿ.ಇಡೀ ಜೀವನವನ್ನೇ ಮುಡುಪಾಗಿಟ್ಟು ರಂಗಭೂಮಿಯ ವಿವಿಧ ನೆಲೆಗಳನ್ನು ಶೋಧಿಸುತ್ತಿದ್ದಾರೆ,ಕಾವ್ಯ, ನಾಟಕ, ಸಾಹಿತ್ಯ ,ಲೇಖನಗಳ ಮೂಲಕ ಸಮಾಜವನ್ನು ಸಂವೇದನೆ ಗೊಳಿಸುತ್ತಿರುವ ಹಾಲ್ಕುರಿಕೆ ಯವರು ಕರ್ನಾಟಕ ನಾಟಕ  ಅಕಾಡಮಿಯ   ಸದಸ್ಯರಾಗಿರುವುದು ನಮ್ಮ  ಭಾಗದಲ್ಲಿ  ಇನ್ನೂ ಹೆಚ್ಚಿನ ಮಟ್ಟದಲ್ಲಿ ರಂಗಚಟುವಟಿಕೆಗಳು ನೆಡೆಯಲು ಸಾಧ್ಯವಾಗಿತ್ತದೆ.ಎಂದರು.ಅಭಿನಂದನಾ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶರಣಪ್ಪ ವಡಗೇರಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಮ್ಮಿ ಫಕೀರಪ್ಪ, ಕುವೆಂಪು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವ್ಯವಸ್ಥಾಪಕರಾದ ಶಿವನಗೌಡ ಪೋಲೀಸ್ ಪಾಟೀಲ್. ಇಂದರಗಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಭೀಮಸೇನ, ಬೂದಗುಂಪಾಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ತಿಪ್ಪೇಸ್ವಾಮಿ.ಎಮ್.ದುರ್ಗಪ್ಪ ಉಪಸ್ಥಿತರಿದ್ದರು.  

Advertisement

0 comments:

Post a Comment

 
Top