PLEASE LOGIN TO KANNADANET.COM FOR REGULAR NEWS-UPDATES



ಹುತಾತ್ಮ ಸುಖದೇವ, ರಾಜಗುರು ಹಾಗೂ ಭಗತಸಿಂಗ್ ಇವರ ಬಲಿದಾನದ ನೆನಪಿಗಾಗಿ, ಜಿಲ್ಲೆಯ ಎಲ್ಲ ಯೋಗಕೇಂದ್ರಗಳಲ್ಲಿ, ಜರುಗಿದ ಯೋಗ ಸಪ್ತಾಹದ ಸಮಾರೋಪ ಸಮಾರಂs, ದಿನಾಂಕ ೨೩.೦೩.೨೦೧೪ ರಂದು ಸಾಯಂಕಾಲ ೪.೦೦ ಘಂಟೆಗೆ ಕೊಪ್ಪಳದ ಗವಿಮಠದ ಆವರಣದಲ್ಲಿ ನಡೆಯಿತು. ದಿ ೧೭ ರಿಂದ ೨೨ ರವರೆಗೆ ಜಲ್ಲೆಯ ಎಲ್ಲ ಯೋಗ ಕೇಂದ್ರಗಳಲ್ಲಿ ನಡೆz ಯೋಗ ಶಿಬಿರದ ಸಮಾರೋಪ ಸಮಾರಂಭದ ಈ ಕಾರ್ಯಕ್ರಮದಲ್ಲಿ ಶ್ರೀ ಮ.ನಿ.ಪ್ರ.ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಗವಿಮಠ ಕೊಪ್ಪಳ ಇವರ ದಿವ್ಯ ಸಾನಿಧ್ಯ

 ಹಾಗೂ ಶ್ರೀ ಶ್ರೀ ೧೦೮ ಷ.ಬ್ರ.ಬಸವಲಿಂಗೇಶ್ವರ ಮಹಾಸ್ವಾಮಿಗಳು ಶ್ರೀ ಧರಮುರಡಿ ಹಿರೇಮಠ ಯಲಬುರ್ಗಾ, ಶ್ರೀ ಭಾರಧ್ವಾಜ ಸರಸ್ವತಿ ಮಹಾಸ್ವಾಮಿಗಳು ಮಾತಾ ಮಾಣಿಕ್ಕೇಶ್ವರಿ ಜ್ಞಾನಯೋಗಶ್ರಮ ಕ್ಯಾದಿಗುಪ್ಪ ಹಾಗೂ ಜಿಗೇರಿ, ಗುಳೇದಗುಡ್ಡ ಶ್ರೀಗಳ ಘನ ಉಪಸ್ಥಿತಿಯಲ್ಲಿ ದೀಪ ಬೆಳೆಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯ್ತು.
                 ಶ್ರೀ ಗವಿಮಠ ಶ್ರೀಗಳು ತಮ್ಮ ಆಶೀರ್ವಚದಲ್ಲಿ ಈ ನಾಡಿನ ಸಂತರು, ಮಾಹಾತ್ಮರು, ಸ್ವಾತಂತ್ರ್ಯ ಯೋಧರು, ನಮ್ಮ ಯುವಕರಿಗೆ ಮಾದರಿಯಾಗಬೇಕೇ ವಿನ: ಸಿನಿಮಾ, ಕ್ರಿಕೆಟ್ ತಾರೆಯರಲ್ಲ,  ಎಂದರು. ಶ್ರೀ ಶ್ರೀ ೧೦೮ ಷ.ಬ್ರ.ಬಸವಲಿಂಗೇಶ್ವರ ಮಹಾಸ್ವಾಮಿಗಳು ಶ್ರೀ ಧರಮುರಡಿ ಹಿರೇಮಠ ಯಲಬುರ್ಗಾ ಇವರು ಸ್ವತ: ಯೋಗಾಭ್ಯಾಸಿಗಳಿದ್ದು, ಅವರ ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ನಂತರ ಎಲ್ಲ ಯೋಗ ಕೇಂದ್ರಗಳ ಸಾಧಕರಿಗೆ,ಪಧಾಧಿಕಾರಿಗಳಿಗೆ  ಸನ್ಮಾನಿಸಲಾಯ್ತು.  
     ಪತಂಜಲಿ ಯೋಗ ಸಮಿತಿ ಹಾಗೂ ಭಾರv ಸ್ವಾಭಿಮಾನ್ ಟ್ರಸ್ಟ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ. ಗಂಗಾವತಿ, ಕಾರಟಗಿ, ಕೊಪ್ಪಳ,ಯಲಬುರ್ಗಾ. ತಾವರಗೇರಾ,ಕುಷ್ಟಗಿಯ ಯೋಗ ಕೇಂದ್ರಗಳ ಸಾವಿರಾರು ಯೋಗಾಭ್ಯಾಸಿಗಳು, ಭಾಗವಹಿಸಿದ್ದರು.ಗುಲ್ಬರ್ಗಾದ ಶ್ರೀ ವೀರೇಶ ಕುಲಕರ್ಣಿಯವರು ಯೋU ತರಬೇತಿ ನಡೆಸಿಕೊಟ್ಟರು. ಕುಮಾರಿ ಸಮೀಕ್ಷಾ ಪ್ರಾರ್ಥಿಸಿದರು,   ವೀರೇಶ ಬಂಗಾರಶೆಟ್ಟರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿUಳನ್ನಾಡಿದರು,  ಗೋವಿಂದರಾಜ್ ಗಿಣಿಗೇರಿ ವಂದಿಸಿದರು. ಗಂಗಾವತಿಯ ಡಾ, ಎಸ್.ಬಿ.ಹಂದ್ರಾಳ ನಿರೂಪಿಸಿದರು,ನಂತರ ಗವಿಮಠದ ಶ್ರೀಗಳು ನೆರೆದ ಸಾವಿರಾರು ಜನರಿಗೆ ಪ್ರಸಾದ ವ್ಯಸ್ಥೆ ಮಾಡಿಸಿದ್ದರು.ಹೇಮರಾಜ್ ಶರ್ಮ,ಸಿ.ಹನುಮಂತಪ್ಪ, ರಾಮಗೋಪಾಲ ತಪಾಡಿಯ, ಶರಣಪ್ಪ ಸಿಎಚ್, ವೀರಯ್ಯ ಒಂಟಿಗೋಡಿಮಠ, ಬಸವರಾಜ್ ಅಂಗಡಿ,ಕಿಶೋರ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.       

Advertisement

0 comments:

Post a Comment

 
Top