ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯ ಕೊಪ್ಪಳದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ದಿನಾಂಕ ೨೩-೦೩-೨೦೧೪ ರಂದು ಹಲಗೇರಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವನ್ನು ಶರಣಬಸಪ್ಪ ಬಿಳೆಎಲಿ ಎನ್.ಎಸ್,ಎಸ್.ಅಧಿಕಾರಿಗಳು ಶ್ರೀ ಗವಿಸಿದ್ದೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯ ಕೊಪ್ಪಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧೀಜಿಯವರ ಕನಸಿನ ಕೂಸು ಇದರಿಂದ ಗ್ರಾಮಗಳ ಉದ್ದಾರ ಸಾದ್ಯ ಮತ್ತು ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನ ಹೊಂದಬಹುದು ಏಕೆಂದರೆ ಮಹಾತ್ಮ ಗಾಂಧೀಜಿಯವರು ಮತ್ತು ಸ್ವಾಮಿವಿವೇಕಾನಂದರು ತಮ್ಮ ವ್ಯಕ್ತಿತ್ವ ವಿಕಸನವನ್ನ ಬೆಳೆಸಿಕೊಳ್ಳಲು ಯಾವುದೇ ತರಬೇತಿ ಕೇಂದ್ರಗಳು ಇದ್ದಿಲಾ ಅವರು ಇಂತಹ ಸಮೂಹಗಳೊಂದಿಗೆ ಕೂಡಿ ಜಗತ್ ಪ್ರಸಿದ್ದ ವ್ಯಕ್ತಿಗಳಾಗಿ ಬಾಳಿದರು ಶಿಬಿರಾರ್ಥಿಗಳು ಸಹ ಇತಂಹ ವ್ಯಕ್ತಿತ್ವ ವಿಕಸನ ಹೊಂದಲು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮವು ಉಪಯುಕ್ತವಾದದು ಇದರ ಪ್ರಯೋಜನವನ್ನ ಶಿಬಿರಾರ್ಥಿಗಳು ಪಡೆದುಕೊಳ್ಳಬೆಕೇಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು .
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿದ ಪರಮೇಶಗೌಡ್ರ ಪಾಟೀಲ್‌ರವರು ಮಾತನಾಡುತ್ತಾ ತ್ಯಾಗ ಮತ್ತು ನಿಸ್ವಾರ್ಥ ಸೇವೆಯಿಂದ ದುಡಿದರೆ ಮಾತ್ರ ಅದು ಸಮಾಜ ಸೇವೆಯೆಂದು ತಿಳಿಯಬಹುದು. ಈ ಎರಡು ಅಸ್ತ್ರಗಳು ಕೇವಲ ರಾಷ್ಟ್ರೀಯ ಸೇವಾ ಯೋಜನೆಯಿಂದ ಮಾತ್ರ ಸಾಧ್ಯ ಎಂದರು. ಇನ್ನೋರ್ವ ಅತಿಥಿಯಾದ ಕೆ.ನಾಗಬಸಯ್ಯ ಉಪಾನ್ಯಾಸಕರು ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರು ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುವುದರಿಂದ ನಾವೆಲ್ಲರೊಂದೆ ಎಂಬ ಭಾವನೆ ಬೆಳೆಯುತ್ತದೆ ಮತ್ತು ಜನರ ಸಮಸ್ಯಯನ್ನು ತಿಳಿಯಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ.ಕೆ.ಬಿ.ಬ್ಯಾಳಿ ಸಂಯೋಜಕರು, ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರಮವು ಶಾಶ್ವತವಾಗಿ ಉಳಿಯುವಂತ ಕಾರ್ಯಗಳನ್ನು ಹಮ್ಮಿಕೊಂಡು ಜನರ ಪ್ರೀತಿಗೆ ಪಾತ್ರರಾಗಬೇಕು. ಮತ್ತು ನಿಮ್ಮಿಂದ ಸಮಾಜಕ್ಕೆ ಏನನ್ನಾದರು ಸಲ್ಲಿಸುವುದಿದ್ದರೆ ಅದು ಕೇವಲ ರಾಷ್ಟ್ರೀಯ ಸೇವಾ ಯೋಜನೆಯಿಂದ ಮಾತ್ರ ಸಾಧ್ಯ ಹಾಗೂ ಮಹಾತ್ಮ ಗಾಂಧೀಜಿಯವರು ಹೇಳಿದಂತೆ ದೇಶಗಳ ಭವಿಷ್ಯವು ಕೇವಲ ಹಳ್ಳಿಗಳಿಂದ ಕೂಡಿದೆ ಅವುಗಳ ಉದ್ದಾರವು ಇಂತಹ ಯೋಜನೆಯಿಂದ ಮಾತ್ರ ಸಾಧ್ಯವಾಗಲಿವೆ ಎಂದು ಹೇಳಿದರು. ಅತಿಥಿಗಳಾಗಿ ಹನಮಂತಪ್ಪ ಸಿ ಅಬ್ಬಿಗೇರಿ ಕಾರ್ಯದರ್ಶಿಗಳು ಕುವೆಂಪು ಯುವಕ ಮಂಡಳ, ಹಲಗೇರಿ ಹಾಗೂ ಹನಮಂತಪ್ಪ ಹಳ್ಳಿಕೇರಿ ಪತ್ರಕರ್ತರು ಶ್ರೀಮತಿ ಉಷಾದೇವಿ ಹಿರೇಮಠ ಆಗಮಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮವನ್ನು ಕುರಿತು ಬಸವರಾಜ .ಎಸ್.ಎಮ್. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧೀಕಾರಿಯು ಪ್ರಾಸ್ತಾವಿಕ ನುಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳನ್ನ ಹೇಳಿದರು. ಗಿರಿಜಾ ಹಾಗೂ ಸಂಗಡಿಗರ ಪ್ರಾರ್ಥನೆಯಿಂದ ಪ್ರಾರಂಭವಾದ ಕಾರ್ಯಕ್ರಮವನ್ನು ಕುಮಾರ ಸುರೇಶ ಹಳ್ಳಿಕೇರಿ ಸ್ವಾಗತಿಸಿದರು. ಕುಮಾರ ಮೆಹರಾಜ ನಿರೂಪಿಸಿದರು ಕುಮಾರ ಕಳಕಪ್ಪ ಬೆಟಗೇರಿ ವಂದಿಸಿದರು ಕಾರ್ಯಕ್ರಮದಲ್ಲಿ ಕಾನೂನು ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ ವೃಂದ, ಶಿಬಿರಾರ್ಥಿಗಳು ಮತ್ತು ಹಲಗೇರಿ ಗ್ರಾi ದ ಸಮಸ್ತ ಗುರು-ಹಿರಿಯರು ಪಾಲ್ಗೂಂಡಿದ್ದರು.
0 comments:
Post a Comment