ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಅಭಿಯೋಜಕರಾದ ಬಿ.ಎಸ್ ಪಾಟೀಲ ಮಾತನಾಡಿ ಕವಿತೆಗಳನ್ನು ಕಟ್ಟುವ ಕಲಾತ್ಮಕತೆ ಹಾಗೂ ಸೊಗಸುಗಾರಿಕೆ ಗವಿಸಿದ್ಧ ಎನ್ ಬಳ್ಳಾರಿಯವರಲ್ಲಿತ್ತು. ಇವರ ಕವಿತೆಗಳಲ್ಲಿ ಗಟ್ಟಿತನವಿದೆ ಹಾಗೂ ಸಮಾಜ ಮುಖೀ ಚಿಂತನೆಗಳು ಇವೆ ಎಂದರು. ನಂತರ ಕವಿಗೋಷ್ಠಿ ಜರುಗಿತು. ಹಲವು ಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಕವಿಗೋಷ್ಠಿ ಅಧ್ಯಕ್ಷತೆ ಡಾ.ಕಾಶೀನಾಥ ಅಂಬಲಗಿ ವಹಿಸಿ ಕವಿಗಳಿಗೆ ಸಲಹೆ ಸೂಚನೆ ಮಾರ್ಗದರ್ಶನ ನೀಡಿದರು. ಪ್ರಾಸ್ತಾವಿಕ ಎಸ್.ಎಸ್. ಪಾಟೀಲ, ಸ್ವಾಗತ ಅಲ್ಲಮಪ್ರಭು ಬೆಟ್ಟದೂರ, ವಂದನಾರ್ಪಣೆ ಡಾ.ಪ್ರಕಾಶಬಳ್ಳಾರಿ, ನಿರೂಪಣೆ ಎಸ್.ಎನ್.ತಿಮ್ಮನಗೌಡರ ನೆರವೇರಿಸಿದರು. ಸಾಹಿತ್ಯಾಸಕ್ತರು ಹಾಗೂ ಗವಿಸಿದ್ದ ಎನ್ ಬಳ್ಳಾರಿಯವರ ಅಭಿಮಾನಿ ಬಳಗ ಹಾಗೂ ಕವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Home
»
»Unlabelled
» ಕವಿ ಗವಿಸಿದ್ಧ ಎನ್ ಬಳ್ಳಾರಿ ಹೈದ್ರಾಬಾದ್ ಕರ್ನಾಟಕದ ಮಹತ್ವದ ಕವಿ. -ಡಾ.ಕಾಶೀನಾಥ ಅಂಬಲಗೆ
Advertisement
Subscribe to:
Post Comments (Atom)
0 comments:
Post a Comment