PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಸಂಸತ್ ಚುನಾವಣೆಗೆ ಸಿ.ಪಿ.ಐ.ಎಂ.ಎಲ್. ಲಿಬರೇಷನ್ ಪಕ್ಷದ ಅಭ್ಯರ್ಥಿಯಾಗಿ ಕಾ|| ಭಾರದ್ವಾಜ್‌ರವರನ್ನು ಘೋಷಿಸಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸನಗೌಡ  ತಿಳಿಸಿದ್ದಾರೆ.
ಕೊಪ್ಪಳ ಸಂಸತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಮಿಕರಿಗಾಗಿ ಹಗಲಿರುಳು ದುಡಿಯುತ್ತಿರುವ ಭ್ರಷ್ಠಾಚಾರ ಮುಕ್ತರಾದ ಕಾ|| ಭಾರದ್ವಾಜ್‌ರನ್ನು ಸಿ.ಪಿ.ಐ.ಎಂ.ಎಲ್. ಪಕ್ಷದಿಂದ ಹುರಿಯಾಳಾಗಿ ಕಣಕ್ಕಿಳಿಸಲು ಸಿ.ಪಿ.ಐ.ಎಂ.ಎಲ್. ಪಕ್ಷದ ಕೇಂದ್ರಿಯ ಸಮಿತಿ ನಿರ್ಧರಿಸಿದೆ.
ಜಿಲ್ಲೆಯಲ್ಲಿ ಕಾರ್ಮಿಕರ, ರೈತರ, ಕೃಷಿಕಾರ್ಮಿಕರ, ಬೀದಿಬದಿಯ ವ್ಯಾಪಾರಿಗಳ ಮತ್ತೀನ್ನೀತರ ಅಸಂಘಟಿತ ಕಾರ್ಮಿಕರಿಗಾಗಿ ಹೋರಾಟ ಮಾಡುತ್ತಿರುವ ಕಾ|| ಭಾರದ್ವಾಜ್‌ರವರು ಎಲ್ಲಾ ವರ್ಗದ ಶ್ರಮಜೀವಿಗಳ ಬೆಂಬಲ ಸಿಗುತ್ತದೆ ಎಂದು ಹೇಳಿದ್ದಾರೆ. ಕಾ|| ಭಾರದ್ವಾಜ್‌ರವರ ಚುನಾವಣಾ ಖರ್ಚುಗಳನ್ನು ಜನರಿಂದ ಹಾಗೂ ಕಾರ್ಮಿಕರಿಂದ ಸಂಗ್ರಹಿಸಿ ಚುನಾವಣೆ ಖರ್ಚು-ವೆಚ್ಚಗಳನ್ನು ನಡೆಸಲಾಗುವುದು. 

ಕೊಪ್ಪಳ ಜಿಲ್ಲೆಯ ದಿಟ್ಟ ಹೋರಾಟಗಾರ ಕಾ|| ಭಾರದ್ವಾಜ್‌ರಿಗೆ ಕಾರ್ಮಿಕರು, ಪ್ರಗತಿಪರರು, ತನು-ಮನ-ಧನದಿಂದ ಇವರನ್ನು ಬೆಂಬಲಿಸಬೇಕೆಂದು ಸಿ.ಪಿ.ಐ.ಎಂ.ಎಲ್. ಪಕ್ಷ ಶ್ರಮಜೀವಿಗಳಲ್ಲಿ ಮನವಿ ಮಾಡುತ್ತದೆ ಎಂದು   ಮನವಿ ಮಾಡುತ್ತಿದ್ದಾರೆ.

Advertisement

0 comments:

Post a Comment

 
Top