PLEASE LOGIN TO KANNADANET.COM FOR REGULAR NEWS-UPDATES

 ನಗರ ಸಭೆಯ ಉಪಾಧ್ಯಕ್ಷರಾಗಿರುವ ಅಮಜದ್ ಪಟೇಲ್ ಅವರ ತಂದೆ ನಗರದ ತೆಗ್ಗಿನ ಕೆರೆ ಓಣಿಯ ಹಿರಿಯ ನಿವಾಸಿ ಹಾಗೂ ಗುತ್ತಿಗೆ ದಾರರಾಗಿದ್ದ ಎಸ್. ಎಂ. ಪಟೇಲ್(೯೨) ರವರು ಸೋಮವಾರ ಮಧ್ಯರಾತ್ರಿ ವೇಳೆಯಲ್ಲಿ ತಮ್ಮ ಸ್ವ ನಿವಾಸದಲ್ಲಿ ನಿಧನಹೊಂದಿದರು. ಮೃತರು ನಿವೃತ್ತ ಅಭಿಯಂತ  ಹಾಜಿ ಅಬ್ದುಲ್ ರಜಾಕ್ ಪಟೇಲ್ ರವರ ಅಣ್ಣ ಹಾಗೂ ಹಾಜಿ ಎಂ ಉಸ್ಮಾನ್ ಅಲಿ ಯವರ  ಪತ್ನಿಯ ಅಣ್ಣನವರಾಗಿದ್ದಾರೆ. ಅಲ್ಲದೇ ಪತ್ರಕರ್ತ ಎಂ ಸಾದಿಕ್ ಅಲಿಯವರ ಸೋದರ ಮಾವನವರಾಗಿದ್ದಾರೆ.
ಕೆಲ ತಿಂಗಳಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದರು ಮೃತರಿಗೆ ಪತ್ನಿ, ಸಹೋದರಿ ಹಾಗೂ ಸಹೋದರ ಸೇರಿದಂತೆ ೬ ಜನ ಗಂಡು ಮಕ್ಕಳು ೬ ಜನ ಹೆಣ್ಣುಮಕ್ಕಳು ಸೋಸೆಯಂದಿರು ಅಳಿಯಂದಿರು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ.
ಮೃತರ ನಿವಾಸಕ್ಕೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ, ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಅಂದಣ್ಣ ಅಗಡಿ, ಸೂರೇಶ ಭೂಮರಡ್ಡಿ, ನಗರಸಭಾ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು ನಗರ ಸಭೆಯ ಮಾಜಿ ಅಧ್ಯಕ್ಷ ಸೂರೇಶ ದೇಸಾಯಿ  ಕಾಂಗ್ರೆಸ್ ಮುಖಂಡರಾದ ಕೆ.ಎಂ ಸೈಯದ್ ಶಾಂತಣ್ಣ ಮುದಗಲ್, ಆಸಿಫ್ ಅಲಿ, ಇಂದಿರಾ ಭಾವಿಕಟ್ಟಿ, ಕುಷ್ಟಗಿ ಮಾಜಿ ಶಾಸಕ ಹಸನ ಸಾಬ್ ದೋಟಿಹಾಳ, ಗಂಗಾವತಿ ನಗರ ಸಭೆಯ ಅಧ್ಯಕ್ಷ ಶಾಮೀದ್ ಸಾಬ್ ಮನಿಯಾರ, ಸಾಹಿತಿ ಮಹೆಬೂಬ್ ಮುಲ್ಲಾ ಕರಿಮುದ್ದೀನ್ ಕಿಲ್ಲೆದಾರ, ಎಂ.ಎ. ಮಾಜೀದ್ ಸಿದ್ದಕಿ, ಶೇಖರಿಜ್ವಾನ, ಮತ್ತಿತರರು ಭೇಟಿ ನೀಡಿ ತೀವ್ರ ಸಂತಾಪ ವ್ಯಕ್ತಪಡಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಜಿ.ಎಸ್. ಗೋನಾಳ, ರಾಜ್ಯ ಸದಸ್ಯ ಹರೀಶ ಎಚ್.ಎಸ್. ಸೇರಿದಂತೆ ಹಲವು ಜನ ಪತ್ರಕರ್ತರು ಭೇಟಿಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದರು. ಮೃತರ ಅಂತೆಕ್ರಿಯೆ ಮಂಗಳವಾರ ಸಂಜೆ ಅಪಾರ ಜನಸ್ತೋಮದ ಮಧ್ಯ ನಗರದ ಕಿನ್ನಾಳ ರಸ್ತೆಯಲ್ಲಿರುವ ಖಬರಸ್ತಾನದಲ್ಲಿ ಜರುಗಿತು. 

Advertisement

0 comments:

Post a Comment

 
Top