PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳದ ಶ್ರೀ ಬಸವೇಶ್ವರ ನಗರದಲ್ಲಿರುವ ಮಾದಿಗ ಸಮಾಜದ ಶ್ರೀ ಮಾರುತೇಶ್ವರ ದೇವಾಲಯದ ನೂತನ ಮೂರ್ತಿ ಪ್ರತಿಷ್ಠಾಪನೆಗೆ ಇಂದು ಅದ್ದೂರಿ ಚಾಲನೆ ನೀಡಲಾಯಿತು. ಮಾದಿಗ ಸಮಾಜದ ವತಿಯಿಂದ ನೆರವೇರಿಸಲ್ಪಡುತ್ತಿರುವ
ಈ ಧಾರ್ಮಿಕ ಕಾರ್ಯವು ಇಂದಿನಿಂದ ಏಪ್ರಿಲ್ 1 ವರೆಗೆ ನಡೆಯಲಿದೆ. ಇದರಲ್ಲಿ ಪ್ರಮುಖ ಆಕರ್ಷಣೆಯಾದ ದೇವರ ಮೂರ್ತಿಯ ಮೆರವಣಿಗೆ ಶ್ರೀ ಗವಿ ಸಿದ್ದೇಶ್ವರ ಮಠದಲ್ಲಿ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ


ಕಂಭದ ಮೂಲಕ ಮಾರುತೇಶ್ವರ ದೇವಾಲಯಕ್ಕೆ ತರಲಾಯಿತು. ಈ ಮೂರ್ತಿಯನ್ನು ಒಂದು ವಾರಗಳ ಕಾಳ ನಡೆಯುವ ವಿವಿಧ ಧಾರ್ಮಿಕ ಆಚರಣೆಯ ನಂತರ ಪ್ರತಿಷ್ಠಾಪಿಸಲಾಗುವುದು. ಇದರ ಅಂಗವಾಗಿ 27ರಂದು ಹೋಮ,
28ರಂದು ಅಭಿಷೇಕ, 29ರಂದು ಭಜನೆ, 30ರಂದು ಕೀರ್ತನೆ ನಡೆಯಲಿದ್ದು 31ರ ಬೆಳಗ್ಗೆ 8.30 ಶುಭ ಮುಹೂರ್ತದಲ್ಲಿ ಮಾರುತೇಶ್ವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಏ.1 ರ ಸಂಜೆ 5.30 ಕ್ಕೆ
ಯುವಕರಿಂದ ಕೆಂಡ ಹಾಯುವ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟನೆ ತಿಳಿಸಿದೆ.    

Advertisement

0 comments:

Post a Comment

 
Top