PLEASE LOGIN TO KANNADANET.COM FOR REGULAR NEWS-UPDATES



ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಯೂಥ್ ಪ್ರಾಜೆಕ್ಟ್
ಕೊಪ್ಪಳ, ಮಾ. ೨೦. ಹೈದರಾಬಾದ ಕರ್ನಾಟಕದ ೩೭೧ (ಜೆ) ಅಂಗೀಕರಿಸಿರುವ ಈ ಸಂದರ್ಭದಲ್ಲಿ ಎಲ್ಲಾ ವಿಭಾಗದ ಅಭಿವೃದ್ಧಿಯು ಅಗತ್ಯವಾಗಿದ್ದು, ರಾಷ್ಟ್ರದ ಮಹೋನ್ನತ ಸಂಪತ್ತು ಯುವ ಸಂಘಗಳ ಸಬಲೀಕರಣವೂ ಅಗತ್ಯವಾಗಿದೆ ಎಂದು ಯುವ ಸಂಘಟಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದರು.
ಅವರು ಜಿಲ್ಲೆಯಲ್ಲಿ ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಯೂಥ್ ಪ್ರಾಜೆಕ್ಟ್ ಜಾರಿ ಮಾಡುವ ಕುರಿತು ಇಂದು ಪತ್ರಿಕಾಗೊಷ್ಠಿಯಲ್ಲಿ ವಿವರಣೆ ನೀಡಿದರು. ನನ್ನ ಊರು-ನನ್ನ ಜನ-ನನ್ನ ಸಹಕಾರದೊಂದಿಗೆ ಸಮಗ್ರ ಅಭಿವೃದ್ಧಿ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಯೂಥ್ ಪ್ರಾಜೆಕ್ಟ್ ನ್ನು ಕೊಪ್ಪಳ, ಬಳ್ಳಾರಿ, ರಾಯಚೂರ ಹಾಗೂ ಗದಗ ಜಿಲ್ಲೆಗಳ ಎಲ್ಲಾ ಗ್ರಾಮಗಳಿಗೂ ಏಕಕಾಲಕ್ಕೆ ಜಾರಿಗೆ ತರಲಾಗುತ್ತಿದೆ. 
ಸ್ವರಭಾರತಿ ಗ್ರಾಮೀಣಾಬಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಕೊಪ್ಪಳ ಮತ್ತು ವಿಶ್ವ ಎಜ್ಯುಕೇಶನಲ್ ಆಂಡ್ ವೆಲ್‌ಫೇರ್ ಅಕಾಡೆಮಿ (ರಿ) ಸಂಯುಕ್ತವಾಗಿ ಈ ಯೋಜನೆ ರೂಪಿಸಿದ್ದು, ಪ್ರತಿಯೊಂದು ಗ್ರಾಮದಲ್ಲಿ ಮತ್ತು ನಗರ ಪ್ರದೇಶದ ಪ್ರತಿ ವಾರ್ಡಗೊಂದರಂತೆ ಸಂಘವನ್ನು ಆಯ್ಕೆ ಮಾಡುವದು, ಈ ಹಿಂದೆ ಅಸ್ತಿತ್ವದಲ್ಲಿ ಇದ್ದ ಸಂಘವನ್ನೇ ಪುನಃ ಆರಂಭಿಸುವದಕ್ಕೆ ಮೊದಲ ಆದ್ಯತೆ, ಯಾವ ಗ್ರಾಮದಲ್ಲಿ ಸಂಘ ಇಲ್ಲವೋ ಅಥವಾ ಯೋಜನೆ ವ್ಯಾಪ್ತಿಗೆ ತರಲು ಆಗದಿದ್ದಲ್ಲಿ ಅಲ್ಲಿ ಹೊಸದಾಗಿ ಸಂಘವನ್ನು ಆರಂಭಿಸಿ ಯೋಜನೆಯನ್ನು ಅಳವಡಿಸಲಾಗುವದು. ಸಂಘಗಳ ಮೂಲಕ ಯುವಜನರ ಅಭಿವೃದ್ಧಿಗೆ ಶ್ರಮಿಸಲು ಒಂದು ವಿಶಿಷ್ಟ ಸಾಂಸ್ಥಿಕ ರೂಪ ನೀಡಲಾಗಿದೆ.
ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಯೂಥ್ ಪ್ರಾಜೆಕ್ಟ್ ಯೋಜನೆಯ ಗುರಿ ಉದ್ದೇಶಗಳು : ಯುವಜನ ಸೇವಾ ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರಗಳಲ್ಲಿ ಸಂಯೋಜನೆ ಮಾಡಿಸುವದು, ಅದಕ್ಕಾಗಿ ಮೊದಲು ಸಂಘ ಸಂಸ್ಥೆಗಳ ನೋಂದಣೆ ಇಲಾಖೆಯ ೧೯೬೦ ರ ನೋಂದಣಿ ಕಾಯ್ದೆ ಅಡಿಯಲ್ಲಿ ಸ್ವಯಂ ಸೇವಾ ಸಂಸ್ಥೆಯಾಗಿ ನೋಂದಣಿ ಮಾಡಿಸುವದು. ಉತ್ತಮವಾದ ಗುರಿ ಉದ್ದೇಶಗಳನ್ನು ಹೊಂದಿರುವ ಬೈಲಾ ತಯಾರಿಸುವದು. ಮೂರು ವರ್ಷ ಸಂಘಟನೆಗೆ ಬೇಕಾದ ಎಲ್ಲಾ ರೀತಿಯ ತರಬೇತಿಗಳನ್ನು ಹಮ್ಮಿಕೊಳ್ಳುವದು, ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆಗಳ ಕುರಿತು ಮಾಹಿತಿ ಮಾರ್ಗದರ್ಶನ ಮಾಡುವದು ಸೇರಿದ್ದು, ನಂತರ ಎರಡು ವರ್ಷ ಸ್ವಯಂ ಶಕ್ತಿಯಿಂದ ಯೋಜನೆ ನಡೆಸಲು ಬಾಹ್ಯ ಮಾರ್ಗದರ್ಶನ ಮಾಡಲಾಗುವದು. ಆಯಾ ಸಂಸ್ಥೆಗಳು ಯೋಜನೆಯ ಎಲ್ಲಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದವರು ತಿಳಿಸಿದರು. 
ಹೊರಗಿನಿಂದ ಬರುವ ದೊಡ್ಡ ಸಂಘ ಸಂಸ್ಥೆಗಳ ಬದಲಾಗಿ ಜಿಲ್ಲೆಯ ಎಲ್ಲಾ ಯೋಜನೆಗಳನ್ನು ನಡೆಸಲು ಅವಕಾಶ ಮಾಡಿಕೊಡುವದಕ್ಕೆ ಸಂಬಂಧಿಸಿದಂತೆ, ಅಗತ್ಯ ಸೌಲಭ್ಯಗಳನ್ನು ಒಳಗೊಳ್ಳಲು ಅನುಕೂಲ ಮಾಡಿಕೊಡುವದು. ಯುವ ಸ್ವಸಹಾಯ ಸಂಘ ರಚನೆ, ಯುವ ಸಂಘಗಳ ಅಭಿವೃದ್ಧಿಗೆ ಸ್ವಾಮಿ ವಿವೇಕಾನಂದ ಯುವ ಸೌಹಾರ್ದ ಕೋ-ಆಪ್ ಬ್ಯಾಂಕ್ ಸ್ಥಾಪನೆ ಮಾಡುವದು. ಸ್ವಯಂ ಉದ್ಯೋಗ ತರಬೇತಿ ಹಾಗೂ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವದು.
ಜಿಲ್ಲೆಗೆ ಬೇಕಾಗಿರುವಷ್ಟು ಅಗತ್ಯ ಹಾಗೂ ಸಣ್ಣ ವಸ್ತುಗಳನ್ನು ಸಾಧ್ಯವಾದಷ್ಟು ಜಿಲ್ಲೆಯಲ್ಲಿಯೇ ತಯಾರಿಸುವದು (ಅದರಲ್ಲಿ ಮೇಣದ ಬತ್ತಿ ತಯಾರಿಕೆ, ಊದಿನಕಡ್ಡಿ ತಯಾರಿಕೆ, ಅರಿಷಿಣ-ಕುಂಕುಮ ತಯಾರಿಕೆ, ಪಾತ್ರೆ ಸೋಪು, ಫಿನೈಲ್, ಕಸಪೊರಕೆ, ಬಟ್ಟೆ ಉತ್ಪನ್ನಗಳು ಇತ್ಯಾದಿ) ಅದರ ಜೊತೆಗೆ ವಿದೇಶಿ ಕಂಪನಿಗಳನ್ನು ತ್ಯಜಿಸಿ ಸ್ವದೇಶಿ ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸಿ ಸ್ವದೇಶಿ ವಸ್ತುಗಳನ್ನು ಒದಗಿಸುವದು. ಸಂಘಗಳ ಮೂಲಕ ಗ್ರಾಮದ ಯುವಜನರಿಗೆ ತರಬೇತಿ ನೀಡುವದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಯೋಗ ಶಿಕ್ಷಣ, ಸ್ವಯಂ ರಕ್ಷಣಾ ಕಲೆ ಮತ್ತು ವಿವಿಧ ಶಾಲಾ ಕಾಲೇಜು ಪಠ್ಯಗಳ ತರಬೇತಿ ನೀಡಿ ಉತ್ತಮ ಫಲಿತಾಂಶಕ್ಕೆ ಶ್ರಮಿಸುವದು. ಇದಕ್ಕಾಗಿ ಜಿಲ್ಲೆಯ (ಈಗಿನ ನಾಲ್ಕು ಮತ್ತು ಮೂರು ಹೊಸ) ಒಟ್ಟು ಏಳು ತಾಲೂಕಿನ ತಾಲೂಕ ಕೇಂದ್ರದಲ್ಲಿ ತರಬೇತಿ ಕೇಂದ್ರ ಹಾಗೂ ಮಾರ್ಗದರ್ಶನ ಕೇಂದ್ರ ಸ್ಥಾಪನೆ ಮಾಡಲಾಗುವದು. ಸ್ವಯಂ ಉದ್ಯೋಗದಲ್ಲಿ ಕಂಪ್ಯೂಟರ್, ಹೊಲಿಗೆ, ಬ್ಯೂಟಿಷಿಯನ್, ಮನೆ ಮೇಲೆ ತೋಟಗಾರಿಕೆ, ಯರೆಹುಳು ಗೊಬ್ಬರ ತಯಾರಿಕೆ ಹೀಗೆ ಅನೇಕವು ಯೋಜನೆಯಲ್ಲಿ ಸೇರಿವೆ.
ಎಲ್ಲಾ ರೀತಿಯ ಜಾಗೃತಿಯನ್ನು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು. ರಕ್ತ ದಾನಿಗಳ ಬೃಹತ್ ಕೇಂದ್ರ ತೆರೆಯುವದು. ಸಂಪೂರ್ಣ ಶೌಚಾಲಯ ಹೊಂದಿರುವ ಜಿಲ್ಲೆಯನ್ನಾಗಿ ಮಾಡುವದು. ಪ್ರತಿಯೊಬ್ಬ ವ್ಯಕ್ತಿ ಬ್ಯಾಂಕ್ ಖಾತೆ ಮತ್ತು ಪಾನ್ ಕಾರ್ಡ ಹೊಂದುವದು. ರಾಷ್ಟ್ರದ ಹಿತ ಹಾಗೂ ಜನಸಾಮಾನ್ಯರ ಹಿತಕ್ಕಾಗಿ ಕಾಲಕಾಲಕ್ಕೆ ಅಗತ್ಯ ಹೋರಾಟಗಳನ್ನು ಹಾಗೂ ಅಭಿಪ್ರಾಯ ಮಂಡನೆ ಮಾಡುವ ಯೋಜನೆ ಸಹ ರೂಪಿಸಲಾಗುವದು.
  ಜೊತೆಗೆ ಪ್ರತಿ ತಿಂಗಳು ಎರಡರಂತೆ ಒಟ್ಟು ಕನಿಷ್ಟ ೨೪ ಕಾರ್ಯಕ್ರಮಗಳನ್ನು ರೂಪಿಸಲಾಗುವದು, ಅದರಲ್ಲಿ ಶಿಕ್ಷಣ, ಆರೋಗ್ಯ, ಆಹಾರ, ಪಶುಸಂಗೋಪನೆ, ಪರಿಸರ ಸಂರಕ್ಷಣೆ, ಕ್ರೀಡೆ, ಸಾಹಸ, ಜಲ ಸಂರಕ್ಷಣೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳು, ನಾಡು-ನುಡಿಯ ರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಯನ್ನು ಒಳಗೊಳ್ಳುತ್ತವೆ.

ಜನೇವರಿ *  ಸ್ವಾಮಿ ವಿವೇಕಾನಂದ ಜಯಂತಿ * ರಾಷ್ಟ್ರೀಯ ಯುವ ದಿನಾಚರಣೆ
ಪ್ರಜಾ ರಾಜ್ಯೋತ್ಸವ * ಶಾಲಾ ಮಕ್ಕಳಿಗೆ ಶೈಕ್ಷಣಿಕ ತರಬೇತಿ
ಫೆಬ್ರುವರಿ *  ಪರೀಕ್ಷಾ ಪೂರ್ವ ಸಿದ್ದತಾ ಮಾರ್ಗದರ್ಶನ, ಶಿವಾಜಿ ಜಯಂತಿ
ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ

Advertisement

0 comments:

Post a Comment

 
Top