ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಮಾ. ೨೯ ರಂದು ಕೇವಲ ಓರ್ವ ಅಭ್ಯರ್ಥಿ ಮಾತ್ರ ತಮ್ಮ ಉಮೇದು
ವಾರಿಕೆಯನ್ನು ಹಿಂಪಡೆದಿದ್ದು, ಇದರಿಂದಾಗಿ ಒಟ್ಟು ೧೬ ಅಭ್ಯರ್ಥಿಗಳು ಅಂತಿಮ ಚುನಾವಣಾ ಕಣದಲ್ಲಿ ಉಳಿದಂತಾಗಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣೆಗಾಗಿ ಒಟ್ಟು ೨೦ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆಯ ಸಂದರ್ಭದಲ್ಲಿ ೦೩ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡವು. ಉಮೇದುವಾರಿಕೆ ಹಿಂಪಡೆಯಲು ಮಾ. ೨೯ ಶನಿವಾರ ಕೊನೆಯ ದಿನವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಇಸಾಕಾ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದುಕೊಂಡರು. ಇದರಿಂದಾಗಿ ಒಟ್ಟು ೧೬ ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ ಉಳಿದಂತಾಗಿದೆ. ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ ಇಂತಿದೆ.
ಕೆ. ಬಸವರಾಜ ಹಿಟ್ನಾಳ್- ಕಾಂಗ್ರೆಸ್,
ಸಂಗಣ್ಣ ಕರಡಿ- ಬಿಜೆಪಿ.
ಸೈಯದ್ ಜಿಯಾಉದ್ದೀನ್ ಆರೀಫ್- ಬಿಎಸ್‌ಪಿ.
ತಿಮ್ಮಪ್ಪ ಉಪ್ಪಾರ- ಭಾರತೀಯ ಡಾ. ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ.
ನಜೀರ್ ಹುಸೇನ್- ರಾಷ್ಟ್ರೀಯ ಕ್ರಾಂತಿಕಾರಿ ಸಮಾಜವಾದಿ ಪಕ್ಷ.
ಡಿ.ಹೆಚ್. ಪೂಜಾರ- ಸಿಪಿಐ(ಎಂಎಲ್) ರೆಡ್‌ಸ್ಟಾರ್.
ಭರದ್ವಾಜ್- ಸಿಪಿಐ(ಎಂಎಲ್) ಲಿಬರೇಷನ್.
ರಮೇಶ್ ಕೋಟಿ- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ.
ಕೆ.ಎಂ. ರಂಗನಾಥ ರೆಡ್ಡಿ- ಸಮಾಜವಾದಿ ಪಾರ್ಟಿ.
ಶಿವಕುಮಾರ- ಆಮ್ ಆದ್ಮಿ ಪಕ್ಷ.
ಪಕ್ಷೇತರ ಅಭ್ಯರ್ಥಿಗಳಾದ ಜಿ. ಅಣ್ಣೋಜಿರಾವ್, ವಿ. ಗೋವಿಂದ, ಪಿ. ಗೋವಿಂದರೆಡ್ಡಿ, ನಾಗಪ್ಪ ಕಾರಟಗಿ, ಮನೋಹರ ಮತ್ತು ಸುರೇಶ್ ಅಂತಿಮ ಕಣದಲ್ಲಿ ಉಳಿದಿದ್ದಾರೆ .
0 comments:
Post a Comment