PLEASE LOGIN TO KANNADANET.COM FOR REGULAR NEWS-UPDATES


ಇಂದು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆ ಶಿಸ್ತು ಕಲಿಸಿದಾಗ ಸದೃಢವಾಗಿ ನಿರ್ಮಾಣವಾಗುತ್ತಾರೆ ಇಲ್ಲಿ ಶಿಕ್ಷಕರ-ಪಾಲಕರ ಶ್ರಮ ಅವಶ್ಯ ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳು ಎಂದು ಭಾಗ್ಯನಗರ ಗ್ರಾ.ಪಂ ಅಧ್ಯಕ್ಷ ಹೊನ್ನೂರುಸಾಬ ಭೈರಾಪುರು ಹೇಳಿದರು.
ಅವರು ಶನಿವಾರಂದು ಭಾಗ್ಯನಗರದ ಜ್ಞಾನಭಾರತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಇಂದು ಶಾಲೆಯಲ್ಲಿ ಮಗುವಿಗೆ ಪಠ್ಯದ ಜೊತೆ ಪಠ್ಯತರ ಚಟುವಟಿಕೆಗಳಿಗೆ ಆದ್ಯತೆ ನೀಡಿ ಅಂದಾಗ ಮಗು ಎಲ್ಲಾ ರೀತಿಯಿಂದ ತಯಾರವಾಗುತ್ತಾನೆ, ಪಾಲಕರು ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡಿ ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ಸುರೇಶ ಡೊಣ್ಣಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ ಸದಸ್ಯ ಶ್ರೀನಿವಾಸ ಹ್ಯಾಟಿ, ಗ್ರಾ.ಪಂ ಉಪಾಧ್ಯಕ್ಷೆ ಹುಲಿಗೆಮ್ಮ ಹನುಮಂತಪ್ಪ ನಾಯಕ, ಗ್ರಾ.ಪಂ ಸದಸ್ಯರಾದ ಸರಸ್ವತಿ ಕೃಷ್ಣಾ ಇಟ್ಟಂಗಿ, ರಂಗನಾಥ, ಮತ್ತೀತರರು ಪಾಲ್ಗೋಂಡಿದ್ದರು.
ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುಗಿದವು

Advertisement

0 comments:

Post a Comment

 
Top