PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ರಾಜ್ಯದ ಬಜೆಟ್‌ನಲ್ಲಿ ಅಂಗವಿಕಲ ಮಕ್ಕಳ ವಿಶೇಷ ಶಾಲೆಗಳಿಗೆ ರೂ.೧೭.೮೭ಕೋಟಿ  ಅನುದಾನ,ಅಂಗವಿಕಲ ವಿದ್ಯಾರ್ಥಿ ವೇತನ ದ್ವಿಗುಣ,ಅಂಗವಿಕಲರ ವೈದ್ಯಕೀಯ ಸೌಲಭ್ಯಕ್ಕೆ ರೂ.೧ಲಕ್ಷ ನಿಗದಿಪಡಿಸಿದ  ರಾಜ್ಯದ ಸುಮಾರು ೩೦ಲಕ್ಷ ಅಂಗವಿಕಲರಿಗೆ ಇದರ ಸದುಪಯೋಗವಾಗಲಿದೆ.
ಅಭಿನಂದನೆ: ಅಂಗವಿಕಲರಿಗೆ ವಿವಿಧ ಯೋಜನೆಗಳನ್ನು  ಬಜೆಟ್‌ನಲ್ಲಿ ಷೋಷಿಸಿz ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಹಾಗೂ ಅವರ ಸಂಪುಟದ ಸಚಿವರಿಗೆ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಸಂಚಾಲಕರಾದ ಭರಮಪ್ಪ ಕಟ್ಟಮನಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರಡ್ಡಿ,ಯಲಬುರ್ಗಾ ತಾಲೂಕ ಅಧ್ಯಕ್ಷರಾದ ಮಹೇಶ ಆರೇರ ಮುಂತಾವರು ಅಭಿನಂದನೆ ಸಲ್ಲಿಸಿ ಹರ್ಷ  ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top