ಮುಂಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಅಡಿಯಲಲಿ ನಗರದಲ್ಲಿ ನಿರ್ಮಿಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ರೂ. ೩೦ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ರವಿವಾರ ಬೇಟಿ ನೀಡಿ ವೀಕ್ಷಣೆ ಮಾಡಿದರು.
ನಗರದ ಹಮಾಲರ ಕಾಲೋನಿಯಲ್ಲಿ ಜರಗುತ್ತಿರುವ ಈ ಕಾಮಗಾರಿ ಹಾಗೂ ಯುಜಿಡಿ ಕಾಮಗಾರಿಯಲ್ಲಿ ಬರುವ ಒಳಚರಂಡಿ, ಸಿಸಿ ರಸ್ತೆ ಇತರೆ ಎಲ್ಲಾ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಸಕರು, ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಆದೇಶಿಸಿದರು.
ನಂತರ ನಗರದ ಕುವೆಂಪು ನಗರಕ್ಕೆ ಭೇಟಿ ಮಾಡಿ ರೂ. ೫೪ ಕೋಟಿ ವೆಚ್ಚದ ಕೊಪ್ಪಳಕ್ಕೆ ತುಂಗಭದ್ರಾ ನದಿಯಿಂದ ದಿನದ ೨೪ ತಾಸು ಶಾಶ್ವತ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಪೈಪಲೈನ್ ಅಳವಡಿಕೆ ಕಾಮಗಾರಿ ಸ್ಥಳಕ್ಕೆ ಭೇಟಿ ಮಾಡಿ ವೀಕ್ಷಣೆ ಮಾಡಿ ಕಾಮಗಾರಿ ಆದಷ್ಟು ಬೇಗನೇ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ಆದೇಶಿಸಿದರು. ಮತ್ತು ರೂ.೧೧ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕೇಂದ್ರದ ಕಾಮಗಾರಿಯೂ ಸಹ ಶಾಸಕರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಉಪಾಧ್ಯಕ್ಷ ಅಮ್ಜದ ಪಟೇಲ್, ಮಹಿಬೂಬ ಮಚ್ಚಿ, ಲೀಯಾಕತ್‌ಅಲಿ ಮುಧೋಳ, ಮುಸ್ತಫಾ, ಶೈಕತ್ ಹುಸೇನಿ, ಗುಲಾಮಸಾಬ, ಅಭಿಯಂತರಾದ ಮುಸ್ತಫಾ, ಕೃಷ್ಣಾ ಇಟ್ಟಂಗಿ, ಬಾಳಪ್ಪ ಹಳ್ಳಿಗುಡಿ, ಮರ್ದಾನಸಾಬ ಕಿಲ್ಲೇದಾರ, ಹುಸೇನಸಾಬ ಕಳಸಾಪೂರ, ಮಲ್ಲಿಕಾರ್ಜುನ ಪೂಜಾರ, ಶಿವಮೂರ್ತಿ ಗುತ್ತೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
0 comments:
Post a Comment