PLEASE LOGIN TO KANNADANET.COM FOR REGULAR NEWS-UPDATES

 ಸರ್ದಾರ ವಲ್ಲಭ ಭಾಯಿ ಪಟೇಲರು ಭಾರತ ಗಣರಾಜ್ಯದ ಸಂಸ್ಥಾಪಕ ಪಿತಾಮಹರಲ್ಲಿ  ಒಬ್ಬರು.ಇವರೊಬ್ಬ ಸಮಾಜಿಕ ಧುರಿಣರಾಗಿದ್ದು ದೇಶದ ಸ್ವಾತಂತ್ರ ಹೋರಾಟದಲ್ಲಿ ಇವರು ಅತುಲನೀಯ ಪಾತ್ರವನ್ನು ನಿವರ್ಹಿಸಿರುವುದಷ್ಟೆ ಅಲ್ಲ ಆನಂತರ ದೇಶದ ಅನುಕೂಲಕ್ಕೆ ಐಕ್ಯ ಹಾಗೂ ಸ್ವಾತಂತ್ರ ದೇಶದ ರೂಪ ನೀಡಿದವರು ಸರ್ದಾರವಲ್ಲಭ ಭಾಯಿ ಪಟೇಲರು ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಂಗಣ್ಣ ಕರಡಿ ಹೇಳಿದರು.
ಅವರು ಇಂದು ನಗರದ ೨೧.೨೨.೨೩.೨೪.೨೫ ವಾರ್ಡ್‌ಗಳಲ್ಲಿ ಸಂಚರಿಸಿ ಪಕ್ಷವತಿಯಿಂದ ಸರ್ದಾರ ವಲ್ಲಭ ಭಾಯಿ ಪಟೇಲರ ಏಕತೆಯ ಪ್ರತಿಮೇ ನಿರ್ಮಾಣಕ್ಕಾಗಿ ಕೃಷಿ ಆಧಾರಿತ ಲೋಹ ಸಂಗ್ರಹ ಮಹಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ. ದೇಶದ ಐಕ್ಯತೆ ಮತ್ತು ಸಹ ಬಾಳ್ವೇಯ ಪ್ರತಿಕವಾಗಿರುವ ಸ್ಟ್ಯಾಚ್ ಆಫ್ ಯುನಿಟಿ ಭಾರತೀಯ ಜನತೆಯ ನಡುವೆ ಏಕತೆಯ ಫಲವತ್ತಾದ ಬೆಸತವನ್ನು ನಿರ್ಮಿಸಲಿದೆ ಮತ್ತು ರಾಷ್ಟ್ರೀಯತೆಯ ಅನುಭೂತಿಗೆ ಮಹಾಕಾಯವನ್ನು ನೀಡಲಿದೆ. ಪ್ರತಿಮೆ ನಿರ್ಮಿಸಲು ನಾವು ನೀವು ಮುಂದಾಗಿ ಈ ಮಹಾ ಅಭಿಯಾನದಲ್ಲಿ ಸಹಭಾಗಿಯಾಗೋಣ ಇಂಥ ಕಾರ್ಯಕ್ರಮದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅಪ್ಪಣ್ಣ ಪದಕಿ ವಿ.ಎಂ.ಭೂಸನೂರಮಠ, ರಾಜು ಬಾಕಳೆ, ಮಂಜುನಾಥ ಪಾಟೀಲ, ಪ್ರಾಣೇಶ ಮಹಿಂದ್ರಕರ್, ಜನ್ನಾಬಾಯಿ ಜಕ್ಕಲಿ, ಹಾಲೇಶ ಕಂದಾರಿ, ಪರಮಾನಂದ ಯಾಳಗಿ, ಕೊಪ್ಪಳ ನಗರ ಸಭೆ ಸದಸ್ಯರಾದ ಪ್ರಾಣೇಶ ಮಾದೆನೂರ,ಗವಿಸಿದ್ದಪ್ಪ ಚಿನ್ನೂರು, ಬಸವರಾಜ ನಿರಲಗಿ,ಮಾರುತಿ ಕಾರಟಗಿ, ಗಾಳೆಪ್ಪ ಗೊಂದಳಿ,ವೀರಪ್ಪ ದೊಡ್ಡಮನಿ,ಬಾಬುಸಾಬ ಮನಿಯಾರ,ಹನುಮಂತಪ್ಪ ಸೀತಾಮಣಿ, ಸರ್ವೇಶ ಬನ್ನಿಕೊಪ್ಪ, ನಾಗರಾಜ ಚಿತ್ರಗಾರ, ಕನಕಪ್ಪ ಗೊಂದಳಿ,ಮಧುರಾ ಕರಣಂ, ಸುವರ್ಣ ನಿರಲಗಿ, ಪ್ರಹ್ಲಾದ ಬನ್ನಿಗೋಳ,ಗಂಗಮ್ಮ ಭಾಗಲಕೋಟ, ಈರಣ್ಣ ವಾಲ್ಮೀಕಿ. ಸಿದ್ದಪ್ಪ ಕಂಪ್ಲಿ,ಅಮ್ಮೀರಾಜನ ಮಿರ್ಜಿ, ಕನಕಪ್ಪ ಜಕ್ಕಲಿ, ಮಹಾದೇವ ಪ್ರಭುಶೆಟ್ಟರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top