ಹಿರಿಯರು ದೇಶವನ್ನು ಆಳುವದಾದರೆ ಕಿರಿಯರು ದೇಶವನ್ನು ಕಟ್ಟುವರು ಯುವಜನತೆ ಯಾವುದೆ ಕೀಳರಿಮೆ ಭಾವ ಇಟ್ಟುಕೊಳದೆ ತಮ್ಮ ಕೆಲಸವನ್ನು ಶ್ರದ್ಧಾಭಾವನೆಯಿಂದ ಮಾಡಿದರೆ ಅವರು ಒಬ್ಬ ಉತ್ತಮ ರಾಷ್ಟ್ರದ ಪ್ರಜೆ ಯಾಗುವುದರಲ್ಲಿ ಸಂದೇಹವಿಲ್ಲಾ. ದೇಶದ ಪ್ರತಿಯೊಬ್ಬ ನಾಗರಿಕನು ತನ್ನದೆ ಆದ ರೀತಿಯ ಸೇವೆಯಲ್ಲಿ ರಾಷ್ಟ್ರನಿರ್ಮಾಣ ಮಾಡುತ್ತಿದ್ದಾನೆ. ಎಂದು ಕೊಪ್ಪಳ ಜೀಲ್ಲೆಯ ಸಹಾಯಕ ಆಯುಕ್ತರಾದ ಪಿ.ಎಸ್ ಮಂಜುನಾಥ ನವರ ಹೇಳಿದರು.
ಇವರು ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಸರಕಾರ ನೆಹರು ಯುವ ಕೇಂದ್ರ ದಿಂದ ಯುವಜನ ಮತ್ತು ಕ್ರೀಡಾ ಸಚಿವಾಲಯದ ರಾಷ್ಟ್ರೀಯ ಯುವನೀತಿ ಮತ್ತು ರಾಜೀವ ಗಾಂಧಿ ಕ್ರೀಡಾ ಅಭಿಯಾನ್ ಕಾರ್ಯಕ್ರಮದ ಜಾತಾವನ್ನು ಉದ್ಘಾಟಕರಾಗಿ ಆಗಮಿಸಿದ್ದರು
ತಮ್ಮ ಉದ್ಘಾಟನೆ ಬಾಷನದಲ್ಲಿ ಮಾತನಾಡುತಾ. ಕೆಲವರು ಡಾಕ್ಟರ್, ಇಂಜಿನಿಯರ್, ವ್ಯಾಪಾರಸ್ಥರಾಗಿ ಮತ್ತು ರೈತರಾಗಿ ರಾಷ್ಟ್ರನಿರ್ಮಾನದ ಸೇವಕರಾಗಿ ದುಡಿಯುತ್ತಿದ್ದಾರೆ. ಇಂದಿನ ರಾಜಕಾರಣಿಗಳು ಯುವಜನರನ್ನು ಉಪಯೋಗಿಸಿ ಯುವಜನರು ಉಪಯೋಗಕ್ಕೆ ಬರದ ಹಾಗೆ ರಾಜಕೀಯ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಯುವಕನಲ್ಲಿ ತನ್ನದೆ ಆದ ಸಾಮರ್ಥ್ಯವಿರುತ್ತದೆ ಆ ಸಾಮರ್ಥ್ಯವನ್ನು ಹೊರಗಡೆ ಹಾಕಿದರೆ ಮಾತ್ರ ಅವನ ಸಾಮರ್ಥ್ಯಕ್ಕೆ ಬೆಲೆಸಿಗುತ್ತದೆ ಎಂದರು
ಪ್ರಾಸ್ತಾವಿಕ ನುಡಿಯನ್ನು ಶ್ರೀಗವಿಸಿದ್ದೆಶ್ವರ ಕಾಲೇಜಿನ ಎನ್.ಎಸ್.ಎಸ್ ಅಧೀಕಾರಿಯಾದ ಶರಣ್ಣಬಸಪ್ಪಾ ಬಿಲೇಎಲೆ ಮಾತನಾಡಿ ರಾಜೀವ ಗಾಂಧಿ ಖೇಲ್ ಅಭೀಯಾನದ ಉದ್ದೇಶ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯನ್ನು ಗುರುತಿಸುವುದು.ಯುವಜನತೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸುತ್ತಾ ರಾಜ್ಯದ ರಾಷ್ಟ್ರದ ಯುವಜನ ಮತ್ತು ಕ್ರೀಡಾ ಅಭಿವೃದ್ಧಿ
ಯೆ ಇದರ ಉದ್ದೇಶವಾಗಿದೆ ಎಂದರು. ಮತ್ತು ಇಂದಿನ ಸಮಾಜದಲ್ಲಿ ಯುವಜನತೆ ಮೊಬೈಲ್, ಇಂಟರ್‌ನೆಟ್‌ಗೆ ಮಾರು ಹೋಗಿ ಕ್ರೀಡಾ ಮತ್ತು ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಯುವಜನರಿಗೆ ಕಿವಿ ಮಾತ್ತು ಹೇಳಿದರು
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ತಿಮ್ಮರಡ್ಡಿ ಮೇಟಿ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕಾಲೇಜಿನ ಉಪನ್ಯಾಸಕರಾದ ಸುರೇಶ ಕುಮಾರ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಂiiಧಿಕಾರಿಯಾದ ಮಾಲತಿ.ಎಮ್.ಗಾಯಕ್‌ವಾಡ. ಶಿವಾನಂದ ಹೋದ್ಲೊರ ಉಪಸ್ಥಿತರಿದರು
0 comments:
Post a Comment