ನಿರ್ಮಲ ಭಾರತ ಅಭಿಯಾನ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ೧೫ ಅಂಶಗಳ ಕಾರ್ಯಕ್ರಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸಲು ಚೈತನ್ಯ ರಥ ಕಾರ್ಯಕ್ರಮವನ್ನು ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಚಾಲನೆ ನೀಡಿದರು.
ಚೈತನ್ಯ ರಥ ಯಾತ್ರೆ ಮೂಲಕ ಜನಪದ ಹಾಗೂ ಬೀದಿ ನಾಟಕದ ಮುಖಾಂತರ ಸರ್ಕಾರದ ಯೋಜನೆಗಳಾದ ಉದ್ಯೋಗ ಖಾತ್ರಿ ಯೋಜನೆ, ನಿರ್ಮಲ ಭಾರತ ಯೋಜನೆ, ಸಾಕ್ಷರ ಭಾರತ ಯೋಜನೆಗಳ ಮಹತ್ವವನ್ನು ಜನರಿಗೆ ತಿಳಿಸಲಾಯಿತು. ಅಲ್ಲದೇ ಎಮ್.ಜಿ.ಎನ್.ಅರ್.ಇ.ಜಿ ಯೋಜನೆಯಲ್ಲಿ ಸಮಾನ ಕೂಲಿ ಸಮಾನ ವೇತನ, ವರ್ಷದಲ್ಲಿ ಒಂದು ಕುಟುಂಬಕ್ಕೆ-೧೦೦ ದಿನ ಕೂಲಿ, ಕಾಯಕ ಸಂಘಗಳ ರಚನೆ, ಪ್ರಸ್ತುತ ವರ್ಷದಲ್ಲಿ ದಿನಕ್ಕೆ ರೂಪಾಯಿ ೧೭೪ ಕೂಲಿ, ವಯಕ್ತಿಕ ಶೌಚಾಲಯ ನಿರ್ಮಾಣ ಮುಂತಾದ ಯೋಜನೆಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.  
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಹನಮಮ್ಮ ಕೀರಿ, ಉಪಾಧ್ಯಕ್ಷೆ ಕನಕಪ್ಪ ಹೊಟ್ಟಿಪರವಿ, ತಾಲೂಕ ಐ.ಇ.ಸಿ. ಸಂಯೋಜಕ ಲಕ್ಷ್ಮಣ ಕೆರಳ್ಳಿ ಸೇರಿದಂತೆ ಗ್ರಾ.ಪಂ.ಸರ್ವ ಸದಸ್ಯರು, ದಲಿತ ಕಲಾ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು  ಭಾಗವಹಿಸಿದ್ದರು. 
0 comments:
Post a Comment