ಕೊಪ್ಪಳ : ಆಧುನಿಕ ಯುಗದಲ್ಲಿ ಯುವತಿಯರು ಆತ್ಮರಕ್ಷಣೆಯ ಕಲೆಯನ್ನು ಅಭ್ಯಾಸ ಮಾಡುವುದು ಅತ್ಯಗತ್ಯ ಎಂದು ನಗರ ಠಾಣೆ ಇನ್ಸ್‌ಪೆಕ್ಟರ್ ವಿಜಯಕುಮಾರ ಬಿರಾದಾರ್ ಅಭಿಪ್ರಾಯ ಪಟ್ಟರು. ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಗವಿಮಠ ಆವರಣದಲ್ಲಿ ಜ್ಞಾನಯೋಗ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘ ಹಮ್ಮಿಕೊಂಡಿದ್ದ ಕರಾಟೆ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಜಗತ್ತಿನ ಕ್ರೀಡೆಗಳು ಮಾಯಾವಾಗುತ್ತಿವೆ. ಸದೃಡ ದೇಹದಲ್ಲಿ ಸದೃಡ ಮನಸ್ಸು ಎಂಬ ಮಾತಿನಂತೆ ಆರೋಗ್ಯಪೂರ್ಣ ಬದುಕು ಸಾಗಿಸಲು ದೈಹಿಕ ಕಸರತ್ತು ಮುಖ್ಯ. ಅದರಲ್ಲೂ ಕರಾಟೆ ಕಲಿಕೆ ಉತ್ತಮ ಮಾರ್ಗ ಎಂದರು.
ಪತ್ರಕರ್ತ ದೇವು ನಾಗನೂರ ಮಾತನಾಡಿ ದೇಶದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಯುವತಿಯರು ಆತ್ಮರಕ್ಷಣೆಗಾಗಿ ಕರಾಟೆ ಕಲಿಯುವುದು ಅತ್ಯವಶ್ಯ ಎಂದರು.
ಜಾತ್ರೆ ಎಂದರೆ ಕೇವಲ ತೇರಿಗೆ ಉತ್ತತಿ ಎಸೆದು ನಮಸ್ಕರಿಸಿ ಪ್ರಸಾದ ಸ್ವೀಕರಿಸಿ ಮನೆಗೆ ಹೋಗುವ ಕಾಲವಿತ್ತು. ಆದರೆ ಕ್ರೀಡೆ, ಸಾಹಿತ್ಯ, ಸಂಗೀತ, ಚಿಂತನಾಗೋಷ್ಠಿಯ ಮೂಲಕ ಗವಿಸಿದ್ದೇಶ್ವರ ಜಾತ್ರೆ ಉತ್ತರ ಕರ್ನಾಟಕದ ದಸರಾ ಉತ್ಸವದಂತೆ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಹಾದೇವಿ ಗುಡಿ ರಾಜಶೇಖರ ಮಳಿಮಠ, ಶ್ರೀನಿವಾಸ, ವಿಜಯ ಕವಲೂರು ಇನ್ನೂ ಅನೇಕರು ಉಪಸ್ಥಿತರಿದ್ದರು.
0 comments:
Post a Comment