PLEASE LOGIN TO KANNADANET.COM FOR REGULAR NEWS-UPDATES

  ಯುವಕರು ಒಳ್ಳೆಯ ಗುಣಗಳೊಂದಿಗೆ ದೇಶಾಭಿಮಾನ, ದೇಶಿಯಕಲೆ, ಸಂಸ್ಕೃತಿ ಸಾಹಿತ್ಯ ಬೆಳೆಸುವ ಮೂಲಕ ಉತ್ತಮ ಸಮಾಜಕಟ್ಟಬೇಕು ಸ್ವಾಮಿ ವಿವೇಕಾನಂದರು ಈ ದೇಶವನ್ನು ಸುಭದ್ರವಾಗಿ ಯುವಕರಿಂದ ಮಾತ್ರ ಸಾಧ್ಯವೆಂದು ನಂಬಿದ್ದರು ಅಂತವರ ಆದರ್ಶಗಳ ಗುಣಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜು ಬಾಕಳೆ ಹೇಳಿದರು.
    ಅವರು ಇಂದು ನಗರದ  ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಸ್ವಾಮಿ ವಿವೇಕಾನಂದರ ೧೫೧ ಜಯಂತಿ ಉತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡುತ್ತಾ ಭವ್ಯ ಭಾರತದ ಭವಿಷ್ಯಕ್ಕಾಗಿ ಮಹಾ ಪುರುಷರು ಕಂಡ ಕನಸನ್ನು ನನಸು ಮಾಡಲು ಯುವಜನತೆ ಸಂಕಲ್ಪ ಕೈಗೊಳ್ಳಬೇಕಿದೆ ವಿವೇಕಾನಂದರು ಹಿಂದೂ
ಧರ್ಮ ಏನೆಂಬುದು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಆದರೆ ಈಗ ಅನ್ಯ ಧರ್ಮಿಯರಿಂದ ಮತಾಂತರ, ಭಯೋತ್ಪಾದನೆಯಂತಹ ಕುತಂತ್ರಕ್ಕೆ ಬಲಿಯಾಗಿ ಇಡೀ ನಮ್ಮ ದೇಶದಲ್ಲಿ ಮೂಲಹಿಂದೂ ಧರ್ಮ ಬಲಿಯಾಗುತ್ತಿದೆ ಹಿಂದೂ ಧರ್ಮದ ಜಾಗೃತಿಗಾಗು ಯುವಕರು ಸೇರಿದಂತೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.
   ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ, ತಾಲೂಕಾಧ್ಯಕ್ಷ ಡಾ.ಕೊಟ್ರೇಶ ಶೆಡ್ಮಿ ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ, ಪ್ರಾಣೇಶ ಮಹೇಂದ್ರಕರ್, ಹಂಪಣ್ಣ ಮಜ್ಜಿಗಿ, ಗವಿಸಿದ್ದಪ್ಪ ಚಿನ್ನೂರ, ಮಲ್ಲಪ್ಪ ಮುರುಡಿ, ಮಾರುತಿ ಕಾರಟಗಿ, ಬಸವರಾಜ ನೀರಲಗಿ, ಮಲ್ಲಪ್ಪ ಬೇಲೇರಿ, ರಶೀದ್ ಸಾಬ್ ಮಿಠಾಯಿ, ಮುಜಾವರ್, ನೂರ್‌ಬಾಷಾ, ಗವಿಸಿದ್ದಪ್ಪ ಕುಕನೂರ, ನಾಗರಾಜ ಚಿತ್ರಗಾರ, ಮಹೇಶ ಹಾದಿಮನಿ, ರುದ್ರೇಶ್ ಗವಿಸಿದ್ದಪ್ಪ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top