ವಾಹನ ಸವಾರರು ಸರಿಯಾದ ರಸ್ತೆ ನಿಯಮ ಪಾಲನೆಯಿಂದ ಅಪಘಾತವನ್ನು ತಪ್ಪಿಸಬಹುದು ಎಂದು ನಗರ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ.ನೇತ್ರಾವತಿ ಪಾಟೀಲ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆ ಹಾಗೂ ನಗರ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ೨೦೧೪ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,ಪ್ರತಿಯೊಬ್ಬ ವಾಹನ ಸವಾರನು ರಸ್ತೆಯ ನಿಯಮಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು.ರಸ್ತೆಯ ನಿಯಮವನ್ನು ತಿಳಿವಳಿಕೆಯಿಂದ ಅಪಘಾತ ಪ್ರಕರಣಗಳು ಕಡಿಮೆಯಾಗುತ್ತವೆ. ವಾಹನ ಚಾಲನೆ ಮಾಡುವ ಪ್ರತಿಯೊಬ್ಬ ಸವಾರನು ತನ್ನ ಜೀವನದಲ್ಲಿ ತಾಳ್ಮೆಯನ್ನು ಅಳವಡಿಸಿಕೊಳ್ಳಬೇಕು.ತಾಳ್ಮೆಯಿದ್ದರೆ ನಾವು ಹೊರಟ ಸ್ಥಳವನ್ನು ಸುರಕ್ಷಿತವಾಗಿ ತಲುಪಲು ಸಾಧ್ಯವಾಗುತ್ತದೆ.ಇತ್ತೀಚಿನ ದಿನಗಳಲ್ಲಿ ರಸ್ತೆಯ ಅಪಘಾತಗಳು ಹೆಚ್ಚಾಗಿವೆ,ಅದಕ್ಕೆ ಕಾರಣ ಚಾಲಕರ ಅತಿಯಾದ ವೇಗ ಮತ್ತು ಚಾಲಕರಿಗೆ ಸರಿಯಾದ ರಸ್ತೆಯ ನಿಯಮಗಳ ಅರಿವಿಲ್ಲದಿರುವುದರಿಂದ ಜೊತೆಗೆ ವಾಹನ ಚಾಲನೆ ಮಾಡುವವರು ವೇಗದ ಕಡೆಗೆ ಗಮನವನ್ನು ನೀಡದೆ ಸುರಕ್ಷತೆ ಮತ್ತು ನಿಯಮಗಳ ಕಡೆಗೆ ಗಮನವನ್ನು ಹರಿಸುವುದರಿಂದ ತಮ್ಮ ಜೀವನ ಹಾಗೂ ಇತರರ ಜೀವನವನ್ನು ಉಳಿಸಲು ಸಾಧ್ಯ.ಕೇವಲ ಸಪ್ತಾಹದ ೭ ದಿನಗಳಲ್ಲಿ ನಿಯಮ ಪಾಲನೆಯ ಬಗ್ಗೆ ಗಮನವನ್ನು ಹರಿಸದೆ ಜೀವನ ಪರ್ಯಂತ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಾದ ಶ್ರೀನಿವಾಸರಾವ ಸ್ವಾಗತಿಸಿ,ನಾಗಪ್ಪ ನರಿ ಎಲ್ಲರಿಗೂ ವಂದಿಸಿದರು.
0 comments:
Post a Comment