PLEASE LOGIN TO KANNADANET.COM FOR REGULAR NEWS-UPDATES

 ತರಬೇತಿಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ(ಆಇಖಿ)ಯು ದಿಢೀರನೇ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿದ್ದನ್ನು ವಿರೋಧಿಸಿ ಸಾವಿರಾರು ವಿದ್ಯಾರ್ಥಿಗಳ ಡಿಸೆಂಬರ್ ೨೩ರಂದು ಬೃಹತ್ ಹೋರಾಟ ’ಬೆಂಗಳೂರು ಚಲೋ’ದಲ್ಲಿ ಪಾಲ್ಗೊಂಡಿದ್ದರು. ಅಂದು ಹೋರಾಟದ ಸ್ಥಳಕ್ಕೆ ಆಗಮಿಸಿದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕರೊಬ್ಬರು ಎಐಡಿವೈಓ ಮತ್ತು ಎಐಡಿಎಸ್‌ಓ ರಾಜ್ಯ ನಾಯಕರಿಂದ ಮನವಿಪತ್ರವನ್ನು ಸ್ವೀಕರಿಸಿ, ಭಾರಿ ಸಂಖ್ಯೆಯಲ್ಲಿ ನೆರೆದಿದ್ದ IಖಿI ತರಬೇತಿದಾರರನ್ನು ಉದ್ದೇಶಿಸಿ ಮಾತನಾಡಿ, ಸದ್ಯದಲ್ಲೇ ’ಸಿಹಿ ಸುದ್ದಿ’ಯನ್ನು ಕೊಡುವುದಾಗಿ ಹೇಳಿದ್ದರು.
ಅದರ ಮುಂದುವರಿಕೆಯಾಗಿ ಡಿಸೆಂಬರ್ ೨೬ರಂದು ಭೇಟಿ ಮಾಡಿದ ನಿಯೋಗಕ್ಕೆ ಮುಂದಿನ ಒಂದು ವಾರದೊಳಗೆ ’ಅನುಕೂಲಕರ’ ಉತ್ತರವನ್ನು ಪಡೆಯುವ ಭರವಸೆ ಇದೆ ಎಂದು ಹೇಳಿದ್ದ ಆಇಖಿಯು ಎರಡು ವಾರವಾದರೂ ಸಹ ದೆಹಲಿಯ ಡೈರೆಕ್ಟರೇಟ್ ಜನರಲ್ ಆಫ್ ಎಂಪ್ಲಾಯ್‌ಮೆಂಟ್ ಅಂಡ್ ಟ್ರೈನಿಂಗ್(ಆಉಇಖಿ)ಗೆ ಮನವಿಪತ್ರವನ್ನು ರವಾನಿಸಲಾಗಿದೆ ಎಂದು ಹೇಳುತ್ತಾ ಅತಂತ್ರ ಸ್ಥಿತಿಯನ್ನು ಮುಂದುವರಿಸಿಕೊಳ್ಳುತ್ತಾ ಹೋಗುತ್ತಿದೆ. ಪ್ರಸಕ್ತ ತರಬೇತಿಯ ಪಠ್ತಕ್ರಮದ ಬಗ್ಗೆ, ಶಿಕ್ಷಕರ ತರಬೇತಿಯ ಬಗ್ಗೆ ಯಾವುದೇ ಪೂರ್ವ ತಯಾರಿಯನ್ನು ನಡೆಸದೆ ಇದ್ದ ರಾಜ್ಯ ಆಇಖಿಯು ಈಗ ಜನವರಿ/ಫೆಬ್ರವರಿಯಲ್ಲಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿ, ರಾಜ್ಯದಾದ್ಯಂತ ಐಟಿಐ ವಿದ್ಯಾರ್ಥಿಗಳಲ್ಲಿ ತೀವ್ರ  ಆತಂಕವನ್ನು ಸೃಷ್ಟಿಸಿದೆ.
ಈ ನಿಟ್ಟಿನಲ್ಲಿ, ಐಟಿಐ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ ಸೆಮಿಸ್ಟರ್ ಪದ್ಧತಿಯ ವಿರುದ್ಧ ಹೋರಾಟವನ್ನು ಇನ್ನೂ ಉನ್ನತ ಹಂತಕ್ಕೆ ಕೊಂಡೊಯ್ದು, ಮುಂದುವರೆಸುವ ಉದ್ದೇಶದಿಂದ ಇದೇ ಜನವರಿ ೮ರಿಂದ ವಿವಿಧ ರೀತಿಯ ಚಳುವಳಿಗಳನ್ನು ನಡೆಸಲು ಎಐಡಿವೈಓ ಮತ್ತು ಎಐಡಿಎಸ್‌ಓ ರಾಜ್ಯಸಮಿತಿಗಳು ನಿರ್ಧರಿಸಿವೆ. ಜನವರಿ ೮ರಂದು ರಾಜ್ಯದಾದ್ಯಂತ ಐಟಿಐ ತರಬೇತಿಯ ’ತರಗತಿ ಬಹಿಷ್ಕಾರ’ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಜಿಲ್ಲಾಧಿಕಾರಿ ಕಛೇರಿಗಳ ಬಳಿ ಪ್ರತಿಭಟನೆ ಮತ್ತು ಧರಣಿ ಕಾರ್ಯಕ್ರಮಗಳಿವೆ. ಐಟಿಐ ವಿದ್ಯಾರ್ಥಿಗಳ ಆತಂಕಕ್ಕೆ ಸರ್ಕಾರವು ಸ್ಪಂಧಿಸಿ, ಸೆಮಿಸ್ಟರ್ ಪದ್ಧತಿಯನ್ನು ಕೈಬಿಡದಿದ್ದಲ್ಲಿ ರಾಜ್ಯದಾದ್ಯಂತ ಪ್ರತಿಭಟನಾ ಪ್ರದರ್ಶನ, ಧರಣಿ ಕಾರ್ಯಕ್ರಮ, ಮಾನವ ಸರಪಳಿ, ಪ್ರತಿಭಟನಾ ಮೆರವಣಿಗೆ, ಅನಿರ್ಧಿಷ್ಠಾವಧಿ ಚಳುವಳಿ ಕಾರ್ಯಕ್ರಮ ಹೀಗೆ ಹೋರಾಟದ ವಿವಿಧ ಸ್ವರೂಪಗಳನ್ನೂ ಚಳುವಳಿಯಲ್ಲಿ ಅಳವಡಿಸಿಕೊಳ್ಳಲಾಗುವುದು.
IಖಿI ವಿದ್ಯಾರ್ಥಿಗಳು ಎಚ್ಚರ ತಪ್ಪದೆ ಹೋರಾಟಕ್ಕೆ ಸದಾ ಸನ್ನದ್ಧರಾಗಿರಬೇಕು. ಐಟಿಐ ವಿದ್ಯಾರ್ಥಿ ವಿರೋಧಿ, ಅವೈಜ್ಞಾನಿಕ ಸೆಮಿಸ್ಟರ್ ಪದ್ಧತಿ ರದ್ದಾಗುವವರೆಗೂ ವಿಶ್ರಮಿಸಬಾರದು ಎಂದು ಎಐಡಿವೈಓ ಮತ್ತು ಎಐಡಿಎಸ್‌ಓ ಜಿಲ್ಲಾ ಸಮಿತಿಗಳು ಕರೆ ನೀಡಿವೆ

Advertisement

0 comments:

Post a Comment

 
Top