ಮಕ್ಕಳ ನಾಟಕಗಳ ಪ್ರದರ್ಶನ ಮೂಲಕ ಸಕಾಲ ಯೋಜನೆ
ಕೊಪ್ಪಳ,ಜ,೦೩: ಇಂದಿನ ಮಕ್ಕಳ ಮನಸ್ಸಿನಲ್ಲಿ ನಾಟಕ ಎಂದರೆ ಬೇರೇಯೇ ಕಲ್ಪನೆ ಬರುತ್ತದೆ ನಾಟಕ ಕಂಪನಿಗಳಲ್ಲಿರುವ ರಂಗಸಜ್ಜಿಕೆ. ಕಲರ್‌ಫುಲ್‌ಲೈಟ್, ವಿವಿಧ ಬಗೆಯ ಸ್ಕ್ರೀನ್‌ಗಳು ಎಂಬ ಭಾವನೆ ಹೊಂದಿರುತ್ತಾರೆ. ಆದರೆ ಶಾಲೆಯ ಮಕ್ಕಳು ನಾಟಕಗಳನ್ನು ಮಾಡಲು ಯಾವುದೇ ವ್ಯವಸ್ಥೆ ಹೊಂದಿರುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಹೇಳಿದರು.
ಅವರು ಇಂದು ನಗರದ ಬನ್ನಿಕಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಲಯದ ಆಶ್ರಯದಲ್ಲಿ ೧೩-೧೪ನೇ ಸಾಲಿನ ಪ್ರೌಢಶಾಲಾ ಮಕ್ಕಳಿಗಾಗಿ ಸರಕಾರದ ಸಕಾಲ ಯೋಜನೆ ಸಾರ್ವಜನಿಕರಿಗೆ ಮಾಹಿತಿ ನೀಡುವ ತಾಲೂಕಾ ಮಟ್ಟದ ನಾಟಕ ಹಾಗೂ ಚಿತ್ರಕಲಾ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕರ್ನಾಟಕ ಸರಕಾರ ನಾಗರೀಕ ಸೇವೆಗಳು ಇಲಾಖೆಯಿಂದ ಸಕಾಲ ಯೋಜನೆಯ ಕುರಿತು ದೂರದರ್ಶನ, ರೇಡಿಯೋ, ಪತ್ರಕೆಗಳು ವಿವಿಧ ನಾಟಕ ಕಲಾತಂಡಗಳಿಂದ ಪ್ರಚಾರ ಪಡಿಸಿದರೂ ಕೂಡಾ ಯೋಜನೆ ಸಫಲಗೊಂಡಿಲ್ಲ ಸಕಾಲದಲ್ಲಿ ೪೨ ಇಲಾಖೆಗಳ ೧೨೧ ಸೇವೆಗಳು ಲಭ್ಯವಿದ್ದರೂ ಸಾರ್ವಜನಿಕರು ಇದರಿಂದ ಸರಿಯಾದ ಪ್ರಯೋಜನ ಪಡೆಯುತ್ತಿಲ್ಲ ಕಾರಣ ಅವರಲ್ಲಿರುವ ಕಡಿಮೆ ತಿಳುವಳಿಕೆ, ಇದರಿಂದ ಇಂದು ಸರಕಾರ ಪ್ರೌಢಶಾಲೆಗಳಲ್ಲಿ ಮಕ್ಕಳಿಂದ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ೩೧ ವಿಷಯ್ಳ ಮಾಹಿತಿ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುತ್ತದೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಅರ್ಜಿ ಸ್ವೀಕಾರ ವಿಲೇವಾರಿ ಕುರಿತು ಕೂಡಲೇ ಮಾಹಿತಿ ನೀಡುವ ಸಲುವಾಗಿ ಇಂತಹ ನಾಡಕ ಕಾರ್ಯಕ್ರಮಗಳ ಮೂಲಕ ಪ್ರಯತ್ನ ಮಾಡಲಾಗುತ್ತಿದೆ ಇದರ ಸುದುಪಯೋಗವನ್ನು ಸಾರ್ವಜನಿಕರು ಪಡಯಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಪರಮಾನಂದ ಯಾಳಗಿ ಮಾತನಾಡಿ ಸಾರ್ವಜನಿಕರು ತಮ್ಮ ಸೇವೇಗಳ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಲು ಸರಕಾರ ಸಕಾಲ ಯೊಜನೆಯನ್ನು ೨ವರ್ಷಗಳ ಹಿಂದೆಯೇ ಜಾರಿಗೆ ತಂದಿದೆ. ಆದರೆ ಪ್ರಚಾರದ ಕೊರತೆಯಿಂದ ಇದು ಜನರಿಗೆ ತಲುಪುತ್ತಿಲ್ಲ ಈಗಲಾದರೂ ಸಾರ್ವಜನಿಕರು ಸಕಾಲ ಯೋಜನೆಯ ಕುರಿತು ಸೂಕ್ತ ಮಾಹಿತಿ ಪಡೆದು ಜಾಗೃತರಾಗಬೇಕು ಮತ್ತು ಶಾಲಾ ಮಕ್ಕಳಿಂದ ಯೋಜನೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಸೂಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕರಿಬಸಪ್ಪ ಪಲ್ಲೇದ್, ಆದರ್ಶ ಶಾಲೆಯ ಮುಖ್ಯೋಪಾಧ್ಯಾಯ ಮಹಾಂತೇಶ, ನಿರ್ಣಾಯಕರಾದ ಶಿವಮೂರ್ತಿ ಮೇಟಿ, ಬಸವರಾಜ ಹೇರೂರ್, ಬಾಬುಸಾಬ್ ಸಿಂದೋಗಿ, ವಿಜಯಕುಮಾರ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕಿ ತಾಹೇರಾಬೇಗಂರಿಂದ ಸ್ವಾಗತ, ಜಯರಾಜ್‌ಬೂಸದ್‌ರಿಂದ ಕಾರ್ಯಕ್ರಮ ನಿರೂಪಿಸಿದರು. ಇಂದು ನಡೆದ ನಾಟಕ, ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
0 comments:
Post a Comment