ಗುಲಬರ್ಗಾ ಕೇಂದ್ರ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿರುವ ಬೋಧಕರ ನೇಮಕಾತಿಯು ಸಂವಿಧಾನ ೩೭೧ (ಜಿ) ನೇ ಕಾಲಂ ತಿದ್ದುಪಡಿಯನ್ನು ತರದೆ ನೇಮಕಾತಿಯನ್ನು ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ ವಹಿಸಿ ಹಾಗೂ ಈ ಭಾಗದ ಜನರಿಗೆ ತಲುಪದಂತೆ ಮಾಡುತ್ತಿರುವವು ಎಂದು ಆರೋಪಿಸಿ ಜಿಲ್ಲಾ ಯುವ ಮೋರ್ಚಾ ಬಿಜೆಪಿಯಿಂದ ಪ್ರತಿಭಟನೆಯನ್ನು ಮಾಡಲಾಯಿತು.ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಮಾನವ ಸಂಪನ್ಮೂಲ ಮತ್ತು ರೈಲ್ವೆ ಖಾತೆ ಸಚಿವರಿಗೆ, ಹಾಗೂ ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಿಗೆ ಮತ್ತು ಗುಲಬರ್ಗಾ ಕೇಂದ್ರ ವಿಶ್ವವಿದ್ಯಾಲಯ ಕುಲಪತಿಗಳಿಗೆ ಸಂವಿಧಾನ ೩೭೧ (ಜಿ) ನೇ ಕಾಲಂ ಅಡಿ ನೇಮಕ ಮಾಡಬೇಕು ಹಾಗೂ ಈ ನಡೆಯುತ್ತಿರುವ ನೇಮಕಾತಿ ಪ್ರ ಕ್ರಿಯೆಯನ್ನು ತಕ್ಷಣ ತಡೆಹಿಡಿಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಗರಾವ್ ಕುಲಕರ್ಣಿ, ರಾಜು ಬಾಕಳೆ, ನಗರ ಸಭಾ ಸದಸ್ಯರಾದ ಅಪ್ಪಣ್ಣ ಫದಕಿ, ಗವಿಸಿದ್ದಪ್ ಚಿನ್ನೂರ, ಬಿಜೆಪಿ ಮುಖಂಡರಾದ
ಬಸವರಾಜ, ನಾರಾಯಣಪ್ಪ, ಮಂಜುಜನಾಥ ಅಂಗಡಿ, ಡಿ, ಮಲ್ಲಣ್ಣ, ಮಾಂತೇಶ ಮೈನಳ್ಳಿ, ಮಾರುತಿ, ಶಿವಪ್ಪ ಗುಡ್ಲಾನೂರ, ತಾ.ಪಂ ಸದಸ್ಯರಾದ ದೇವಪ್ಪ ಗುಡ್ಲಾನೂರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಪಾಟೀಲ, ನಗರಾಧ್ಯಕ್ಷ ಪೃತ್ವಿರಾಜ ಚಾಕಲಬ್ಬಿ, ಯುವ ಮುಖಂಡರಾದ ರಮೇಶ ಜಾಮದಾರ, ಚಂದ್ರಶೇಖರ ಮಹೇಂದ್ರಗೌಡ, ರವಿ ಪಾಟೀಲ, ಚನ್ನಯ್ಯ ಪಾಟೀಲ, ಜೀವನ ಹಿರೇಮಠ, ಬಸವರಾಜ, ಮಲ್ಲನಗೌಡ ಹೊಸಮನಿ, ಮಲ್ಲಿಕಾರ್ಜುನ್ ಸೆ ಸಿಂಗಣಾಳ, ಜಡಿಯಪ್ಪ ಮುಕುಂಪಿ, ಮಾಂತೇಶ, ಮಹೇಶ ಹಾದಿಮನಿ, ಶಿವರಡ್ಡಿ, ಶಂಬುಲಿಂಗನಗೌಡ, ಬಸವರಾಜ ಕಳ್ಳಿ, ಚಂದ್ರಕಾಂತ ಬೆಲ್ಲದ, ರಾಘವೇಂದ್ರ ಎ, ವೀರೇಶ್ , ಉಮೇಶ್ ಕರಡೆಕರ್, ಮಲ್ಲಪ್ಪ ಬೆಲೇರಿ, ಮಹಿಳಾ ಜಿಲ್ಲಾಧ್ಯಕ್ಷರಾದ ಹೇಮಲತಾ ನಾಯಕ, ರವೀಂದ್ರರಾವ್, ಜಿಲ್ಲಾ ಬಿಜೆಪಿ ವಕ್ತಾರ ಚಂದ್ರಶೇಕರಗೌಡ ಪಾಟೀಲ ಹಲಗೇರಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
0 comments:
Post a Comment