ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಭೂ ಒಡೆತನ ಯೋಜನೆಯಡಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂಮಿ ವಿತರಿಸುವ ಯೋಜನೆಗಾಗಿ ಜಮೀನಿನ ಅಗತ್ಯವಿದ್ದು, ಅಲ್ಪಸಂಖ್ಯಾತರು, ಪ.ಜಾತಿ, ಪ.ಪಂಗಡದವರನ್ನು ಹೊರತುಪಡಿಸಿ, ಜಮೀನನ್ನು ಒದಗಿಸಲು ಸಿದ್ಧರಿರುವ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಮೀನು ಖರೀದಿಸಲು ಅನುಷ್ಠಾನ ಸಮಿತಿಯು, ದರವನ್ನು ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ ರೂ. ೨. ೫ ಲಕ್ಷ ರೂ., ತರಿ ಜಮೀನಿಗೆ ರೂ. ೭. ೫೦ ಲಕ್ಷ ರೂ. ಅಥವಾ ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ದರದ ಮೂರು ಪಟ್ಟು ದರ ಇದರಲ್ಲಿ ಯಾವುದು ಕಡಿಮೆಯೋ ಅದರಂತೆ ಜಮೀನನ್ನು ನಿಗಮಕ್ಕೆ ಒದಗಿಸಲು ಸಿದ್ಧರಿರುವ ಭೂ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ೫೦ ರೂ. ಛಾಪಾ ಕಾಗದದಲ್ಲಿ ಭೂ ಮಾಲೀಕರ ಒಪ್ಪಿಗೆ ಪತ್ರ ಮತ್ತು ಜಂಟಿ ಖಾತೆಯಾದಲ್ಲಿ ಎಲ್ಲಾ ಭೂ ಮಾಲೀಕರ ಸಹಿಯೊಂದಿಗೆ ತಲಾ ೦೩ ಫೋಟೋಗಳು. ಜಾತಿ ಪ್ರಮಾಣ ಪತ್ರ, ಗುರುತಿನ ಚೀಟಿ/ಆಧಾರ್/ಪಡಿತರ ಚೀಟಿ, ವಂಶವೃಕ್ಷ, ಪಹಣಿ ಪತ್ರ, ಮುಟೇಷನ್ ಪ್ರತಿ, ೧೫ ವರ್ಷಗಳ ಇ.ಸಿ., ಜಮೀನಿನ ಹಾತ ನಕಾಶೆ, ಚೆಕ್‌ಬಂದಿ, ಜಮೀನು ಸಾಗುವಳಿಗೆ ಯೋಗ್ಯವಾಗಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್ ದಾಖಲೆಯೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಜಿಲ್ಲಾ ಆಡಳಿತ ಭವನ, ಕೊಪ್ಪಳ ಇವರಿಗೆ ಜ. ೨೨ ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ೨೨೫೦೦೮ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment