ಕೊಪ್ಪಳ : ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಮಹಾರಥೋತ್ಸವದ ಎರಡನೆಯ ದಿನದ ಮತ್ತೊಂದು ವಿಶೇಷ ಕಾರ್ಯಕ್ರಮ ಮದ್ದು ಸುಡುವ ಕಾರ್ಯಕ್ರಮ. ಶ್ರೀ ಸಿದ್ಧೇಶ್ವರಮೂರ್ತಿ ಪುರಪ್ರದಕ್ಷಿಣೆಗೈದು ರಾತ್ರಿ ಶ್ರೀ ಗವಿಮಠವನ್ನು ತಲುಪುತ್ತಿದ್ದಂತೆ ಆಕಾಶದ ತುಂಬೆಲ್ಲ ಬೆಳಕಿನ ರಾಶಿಯೇ ಹರಿದಾಡಿತು. ಶ್ರೀ ಗವಿಮಠದ ಹೊರಾಂಗಣದಲ್ಲಿ ಜರುಗುವ ಈ ಘನ ಕಾರ್ಯಕ್ರಮಕ್ಕೂ ಲಕ್ಷ ಲಕ್ಷ ಭಕ್ತರು ಸಾಕ್ಷಿಯಾದರು. ಬೆಟ್ಟದ ಸಾಲುಗಳ ತುಂಬೆಲ್ಲ, ಮೈದಾನದ ಸುತ್ತಲೂ, ಶಾಲಾ, ಕಾಲೇಜು, ಮನೆಗಳ ಮೇಲೆ ನಿಂತುಕೊಂಡು ಬೆಳಕಿನ ಪುಂಜಗಳು ನಕ್ಕು ನಲಿಯುವ ದೃಶ್ಯವನ್ನು ವೀಕ್ಷಿಸಿದರು. ಭಕ್ತರು ಮುಗಿಲು ಮುಟ್ಟುವ ಘೋಷಗಳೊಂದಿಗೆ ಜಯಕಾರ ಶ್ರೀ ಗವಿಸಿದ್ಧೇಶ್ವರರನ್ನು ಮನದಾಳದಿಂದ ಕೊಂಡಾಡುವ ಭಕ್ತವಾಣಿ ಎಲ್ಲ ಕಡೆಗೂ ಮೊಳಗಿತು. ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವವು ಸಾಂಗವಾಗಿ ಜರುಗಿದ ಹಾಗೂ ಜಾತ್ರೆಯ ಸಂಭ್ರಮ, ವಿಜಯೋತ್ಸವದ ಸಂಕೇತವಾಗಿಯೂ ಈ ದಿನ ರಾತ್ರಿ ಬಣ-ಬಣ್ಣಗಳ, ಅಲಂಕಾರಿಕ, ಆಕರ್ಷಕವಾದ ಹೂವಿನದಂಡೆ, ಬೀಸುವ ಕಲ್ಲಿನಂತೆ ತಿರುಗುವ ಬಾಣಗಳು, ನಕ್ಷತ್ರ ಮಾಲೆ, ಪಕ್ಷಿಸಂಕುಲ ಮೊದಲಾದ ಆಕರ್ಷಕ ಬಾಣ-ಬಿರುಸುಗಳು, ಮದ್ದುಗಳು ಬಾನಂಗಳದಲ್ಲಿ ಹರಿದಾಡಿ ನೆರದವರ ಮನಸೂರೆಗೊಂಡವು. ಸರಸ್ರಾರು ಹೊಸತಾಗಿ ಮದುವೆಯಾದ ದಂಪತಿಗಳು ತೇರು ಹಾಗೂ ತೇರಿನ ಕಳಸವನ್ನು ನೋಡಿಕೊಂಡು ಮದ್ದುಸುಡುವ ಸಂಭ್ರಮವನ್ನು ಸವಿಯುವ ದೃಶ್ಯಕ್ಕೆ ಸಾಕ್ಷಿಯಾದರು.
ಸಡಗರ ಸಂಭ್ರಮದಿಂದ ಗವಿಮಠ ತಲುಪಿದ ಸಿದ್ಧೇಶ್ವರ ಮೂರ್ತಿ
ಕೊಪ್ಪಳ : ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಮಹಾರಥೋತ್ಸವದ ಎರಡನೆಯ ದಿನದ ಮತ್ತೊಂದು ವಿಶೇಷ ಕಾರ್ಯಕ್ರಮ ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ಭಕ್ತಿ ಭಾವಗಳೊಂದಿಗೆ ಶ್ರೀ ಗವಿಮಠಕ್ಕೆ ಬರುವ ಕಾರ್ಯಕ್ರಮವಾಗಿದೆ. ಜಂಗಮೋತ್ಸವ, ಕಳಸೋತ್ಸವದ ಮೆರವಣಿಗೆಗಳಂತೆ ಶ್ರೀ ಸಿದ್ಧೇಶ್ವರ ಮೂರ್ತಿಯ ದಶಮಿದಿಂಡಿನ ಮೆರವಣಿಗೆಯೂ ಸಹ ಸಾವಿರ ಸಾವಿರ ಭಕ್ತರ ನೇತೃತ್ವದಲ್ಲಿ ರಾತ್ರಿ ಗವಿಮಠಕ್ಕೆ ಬಂದಿತು. ಭಕ್ತರು ಶ್ರೀ ಸಿದ್ಧೇಶ್ವರ ಮೂರ್ತಿಯನ್ನು ದಶಮಿದಿಂಡಿನ ಮಂಟಪದಲ್ಲಿ ಕೂಡಿಸಿಕೊಂಡು ಶ್ರೀ ಗವಿಮಠದಿಂದ ಪೂಜೆ ಸಲ್ಲಿಸಿಕೊಂಡೇ ನಂದಿನಗರಕ್ಕೆ ತಲುಪಿತು. ಆ ಓಣಿಯ ಭಕ್ತರಿಂದ ಪೂಜೆಗೊಂಡು ಸಿದ್ಧೇಶ್ವರ ಮೂರ್ತಿಗೆ ಹೂವಿನ ಹಾರ ಹಾಕಿ, ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ-ಭಾವ ಮೆರೆದರು. ನಂತರ ಈ ಮೆರವಣಿಗೆ ಕವಲೂರು ಓಣಿ, ಕಿತ್ತೂರು ಚನ್ನಮ್ಮ ಸರ್ಕಲ್, ಜವಾಹರ ರಸ್ತೆ, ಗಡಿಯಾರ ಕಂಭ, ಶಾರದಾ ಚಿತ್ರಮಂದಿರದ ಮಾರ್ಗವಾಗಿ ರಾತ್ರಿ ಶ್ರೀ ಗವಿಮಠ ತಲುಪಿತು.
ತೊಟ್ಟಿಲು ಕಾರ್ಯಕ್ರಮ : ಸಿದ್ಧೇಶ್ವರ ಮೂರ್ತಿಯು ಪುರ ಸಂಚಾರಗೈದು ಪುನ: ಶ್ರೀಗವಿಮಠ ತಲುಪಿದ ತರುವಾಯ ಮಠದ ಮಹಾ ದ್ವಾರದ ಬಾಗಿಲನ್ನು ಮುಚ್ಚಿದ ಪುರೋಹಿತರು ಗವಿಸಿದ್ಧೇಶ್ವರರು ಪುರ ಸಂಚಾರ ಕೈಗೊಂಡ ಉದ್ಧೇಶವೇನು? ಎಂದು ಪ್ರಶ್ನಿಸುತ್ತಾರೆ. ಆಗ ಭಕ್ತರಿಗೆ ದರ್ಶನ, ಆಶಿರ್ವಾದ ಅವರವರ ಇಷ್ಟಾರ್ಥಗಳನ್ನು ಪೊರೈಸಲು ಪುರಸಂಚಾರವನ್ನು ಕೈಗೊಳ್ಳಲಾಗಿತ್ತೆಂದು ಹೇಳಿದಾಗ ನಂತರ ಕರ್ತೃ ಗದ್ದುಗೆಗೆ ಪ್ರದಕ್ಷಿಣೆಗೈದು ಬಣ್ಣದ ಮಂಟಪದಲ್ಲಿ ಸಿದ್ದಗೊಂಡಿರುವ ಗವಿಸಿದ್ಧನನ್ನು ಮೂರ್ತಗೊಳಿಸಿ ನೆರೆದ ತಾಯಂದಿರು ಜೋಗುಳಗೀತೆಯನ್ನು ಹಾಡಿದರು
0 comments:
Post a Comment