PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಜ.೬: ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀ ಗವಿಮಠದ ಜಾತ್ರ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವು ನಡೆಯುವ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವದ ಪ್ರಯುಕ್ತ ಕೊಪ್ಪಳನಗರಕ್ಕೆ ಲಕ್ಷತಂರ ಭಕ್ತದಿಗಳು ಆಗಮಿಸುತಿದ್ದು.  ನಗರಸಭೆ ಇಂದ ವತಿಯಿಂದ ೮-೧೦ ದಿನಗಳಿಂದ ಶ್ರಮವಹಿಸುತ್ತಿದ್ದು ಮುನ್ನಚ್ಚೆರಿಕೆಯಾಗಿ ರಸ್ತೆಗಳು ಹಾಗೂ ಕುಡಿಯುವನೀರಿ ವ್ಯವಸ್ಥೆ ವಿದ್ಯುತ್ ದೀಪಗಳ ಅಳವಡಿಕೆ ನೈರiಲ್ಯ ದ ಕೆಲಸವನ್ನು ಭರದಿಂದ ಸಾಗಿದ್ದು. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೆರೀತಿ ತೋಂದರೆ ಅಗದಹಾಗೆ ಕ್ರಮವಹಿಸಲು ನಗರಸಭೆ ಅಧಿಕಾರಿಗಳು ಲೋಕೋಪಯೋಗಿ ಇಲಾಖೇಯ ಮತ್ತು ಒಳಚಂರಡಿ  ಅಧಿಕಾರಿಗಳು ಶ್ರಮವಹಿಸುತ್ತಿದ್ದು ಹಾಗು ನಗರಸಭೆಯಿಂದ ಜಾತ್ರೆಗೆಬರುವ ಭಕ್ತದಿಗಳಿಗೆ ತೊಂದರೆ ಅಗದಹಾಗೆ ನಗರದ ಮುಖ್ಯ ರಸ್ತೆಗಳಾದ ಬಸವೇಶ್ವರ ವೃತ್ತದಿಂದ ಗಡಿಯಾರ ಕಂಬದ ವರೆಗೆ ಮತ್ತು ಕಾತರಕಿ ರಸ್ತೆ ಮುಖ್ಯ ಹೆದ್ದಾರಿ ಸಾಲಾರಜಂಗ ರಸ್ತೆ, ಹಸನ್ ರಸ್ತೆಗಳಿಗೆ ತೆಗ್ಗು ದಿಂಬಗಳನ್ನು ಮುಚ್ಚಿ ತೀರ್ವ ಗತಿಯಲ್ಲಿ ಕಾಮಗಾರಿಯನ್ನು ಕೈಗೋಳ್ಳಲು ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಆಕಾರಿಗಳಿಗೆ ನಗರಸಭೆ ಅಧ್ಯಕ್ಷರಾ ಲತಾ ವಿರಣ್ಣ ಸಂಡೊರ ಹಾಗು ಉಪಾಧ್ಯಕ್ಷರಾದ ಅಮ್ಜದ್ ಪಟೇಲ್ ಮತ್ತು ಸ್ಥಾಯಿ ಸಮೀತಿಯ ಅಧ್ಯಕ್ಷರಾದ ರಾಮಣ್ಣ ಹದ್ದಿನ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಂಜುನಾಥ, ಲೊಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕು. ಬಾಲನ್, ಕುಡಿಯುವ ನೀರಿನ ಮಲ್ವಿಚಾರಕರಾದ ವಸಂತ ಕುಮಾರ, ರಾಮಣ್ಣ ಹಳ್ಳಿಗುಡಿ,   ಅಭಿಯಂತರರಾದ ಮಳ್ಳಿಮಠ, ಕಿರಿಯ ಅಭಿಯಂತರರಾದ ಶಂಕರ, ಒಳಚರಂಡಿ ಕಾಮಗಾರಿಯ ಅಧಿಕಾರಿಯಾದ ಶ್ರೀನಿವಾಸ, ಹಾಗು ನಗರಸಭೆ
ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top