PLEASE LOGIN TO KANNADANET.COM FOR REGULAR NEWS-UPDATES

  ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ಧ ಸಹಕಾರಿ ನಿ. ಕೊಪ್ಪಳ ಇದರ ಸಹಕಾರಿಯ ಕಛೇರಿಯಲ್ಲಿ ಮುಂಜಾನೆ ೮-೩೦ ಘಂಟೆಗೆ ಸಹಕಾರಿಯ ಅಧ್ಯಕ್ಷರಾದ  ಜಿ.ಎಸ್ ಗೋನಾಳರ ಅಧ್ಯಕ್ಷತೆಯಲ್ಲಿ ಜರುಗಿತು. 
ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರಾದ  ಸಂಗಪ್ಪ ವಕ್ಕಳದ ಇವರು ಮಾತನಾಡಿ ಮೂಲತ: ರಡ್ಡಿ ಸಮಾಜವು ಆಂಧ್ರದ ಕೊಂಡವೀಡು ಪ್ರಾಂತದ ರಾಜಮನೆತನದಿಂದ ಬೆಳೆದು ಬಂದಿದೆ. ಶೌರ್ಯ ಆಂಧ್ರದ ಕೊಂದವೀಡು ಪ್ರಾಂತದ ರಾಜಮನೆತನದಿಂದ ಬೆಳೆದು ಬಂದಿದೆ. ಶೌರ್ಯ ಸಾಹಸಕ್ಕೆ ಹೆಸರಾದ ಈ ಮನೆತನವು ಶ್ರೀ ಹೆಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನ ಇವರಿಂದ ಹೆಚ್ಚು ಪ್ರಸಿದ್ದಿಯಾಯಿತು. ರಡ್ಡಿ ಸಮಾಜದ ಜನಾಂಗದ ಜನರ ಕೈ ಯಾವಗಲೂ ಮೇಲೆ ಇರಲಿ ಕೆಳಗೆ ಇರಬಾರದು ಎಂದು ಮಲ್ಲಮ್ಮ ಆರ್ಶೀರ್ವದಿಸಿದ್ದಾಳೆ. ಅಂದೇ ರೀತಿ ವೇಮನರು ಪ್ರಸಿದ್ದ ಕವಿಗಳಾಗಿದ್ದಾರೆಂದು ಹೇಳಿದರು ನಮ್ಮ ಸಮಾಜದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.  
ನಿರ್ದೆಶಕರಾದ   ಎಸ್ ಡಿ ಡಂಬಳ ಇವರು ಮಾತನಾಡಿ ಮಹಾಯೋಗಿ ವೇಮಕನರು ಜಾತಿ ಭೇಧ ಮತ ಪಂಥ ಮೀರಿ ನಿಂತು ಬೆಳದಿದ್ದಾರೆ. ಚರ್ಚಿಲ್‌ರು ಇವರ ಕವಿತೆಗಳನ್ನು ಅನುವಾದ ಮಾಡಿದ ನಂತರವೇ ಇವರ ಪಾಂಡಿತ್ಯದ ಪರಿಚಯ ಜನರಿಗೆ ತಿಳಿಯಿತು. ಎಂದರು. 
ಅಧ್ಯಕ್ಷರಾದ   ಜಿ.ಎಸ್ ಗೋನಾಳ ಇವರು ಮಾತನಾಡಿ ಶ್ರೀ ಮಹಾಯೋಗಿ ವೇಮನ ಮತ್ತು ಹೇಮರಡ್ಡಿ ಮಲ್ಲಮ್ಮನವರು ರಡ್ಡಿ ಸಮಾಜವನ್ನು ಎರಡು ಕಣ್ಣುಗಳಿದ್ದಂತೆ ಇವರ ದಾರಿಯಲ್ಲಿ ನಡೆದಾಗ ಪ್ರತಿಯೊಬ್ಬ ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದು ಹೇಳಿದರು ಅದೇ ರೀತಿ ಇನ್ನು ಸಮಾಜದ ಯುವಕರು ಹಿರಿಯ ಇನ್ನೂ ಹೆಚ್ಚು ಜಾಗೃತರಾಗಬೇಕು ಎಂದು ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ವಂದನೆ ತಿಳಿಸಿದರು. 
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ   ಮಹಾಂತಗೌಡ ಹೆಚ್ ಪಾಟೀಲರು ನಿರ್ದೆಶಕರಾದ   ದೇವಪ್ಪ ಅರಕೇರಿ, ಚಂದ್ರಕಾಂತ ಸಿಂಗಟಾಲೂರ, ವೀರಭದ್ರಯ್ಯ ಯತ್ನಳ್ಳಿ, ವೆಂಕನಗೌಡ ಮೇಟಿ, ಕಾರ್ಯದರ್ಶಿ ಬಸವರಾಜ, ರಾಮದುರ್ಗ, ವೆಂಕರಡ್ಡಿ, ಕೆಂಚರಡ್ಡಿ ಇನ್ನಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಬಸವರಾಜ ನಡೆಸಿಕೊಟ್ಟರು. ನಿರ್ದೆಶಕರಾದ ವೆಂಕನಗೌಡ ಮೇಟಿ ಇವರು ವಂದನಾರ್ಪಣೆ ನಡೆಸಿದರು. 

Advertisement

0 comments:

Post a Comment

 
Top