ಅಲ್ಲಾಹನ ಸಂದೇಶವಾಹಕರಾಗಿ ಬಂದ ಪೈಗಂಬರರ ಮಾರ್ಗದರ್ಶನದಲ್ಲಿ ನಡೆದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮಕ್ಕೂ ಮುಂಚೆ ಕಿನ್ನಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಸಭೆಯ ಸಾನಿಧ್ಯವನ್ನು ಹಜರತ್ ಚಾಂದ್ ಷರೀಫ್ ವಹಿಸಿದ್ದರು, ಧಾರ್ಮಿಕ ಪ್ರವಚನವನ್ನು ಗಿಣಗೇರಿಯ ಹಾಫೀಸ್ ಮೊಮ್ಮದ್ ಬಶೀರ್
ಸಾಬ್ ನೀಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖಂಡರಾದ ಮಾಬುಸಾಬ್ ಹೀರಾಳ ವಹಿಸಿದ್ದರು ಮುಖ್ಯತಿಥಿಗಳಾಗಿ ಮಿಲಾದ್ ಕಮೀಟಿಯ ಅಧ್ಯಕ್ಷ ಷರೀಫ್ ಸಾಬ್ ಹೀರಾಳ, ಯುನೋಸ್.ಎಚ್.ಎಚ್.ಪಿ. ಮೋಹಮ್ಮದ್ ಸಾಬ್ ಬಳ್ಳೊಳ್ಳಿ, ರಾಜಾಹುಸೇನ್ ತುಪ್ಪದ್, ವೆಂಕಟರಾವ್ ದೇಸಾಯಿ, ಬಸವರಾಜ ಚಿಲವಾಡಗಿ, ಶೇಖರಪ್ಪ ಹುದ್ದಾರ್ ಮುಂತಾದವರು ಭಾಗವಹಿಸಿದ್ದರು. ಸ್ವಾಗತ ಹಾಫೀಸ್ ಮಹೆಬೂಬ್ ಪಾಷಾ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಮುಖಂಡರಾದ ಬಾಷಾ ಹಿರೇಮನಿ ಮಾಡಿದರು.
0 comments:
Post a Comment