ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕವಾಗಿ ರೂಪಿಸಲು ಧೃಡ ನಿರ್ಧಾರ ಮಾಡುವುದರೊಂದಿಗೆ ಭಾರತದ ಎಲ್ಲಾ ಪ್ರಜೆಗಳಿಗೆ ನ್ಯಾಯ, ಸ್ವಾತಂತ್ರ ಮತ್ತು ಸಮಾನತೆಯ ಭಾವನೆಗಳನ್ನು ಎಲ್ಲರಿಗೂ ಐಕ್ಯತೆ ಮತ್ತು ಸಮಗ್ರತೆಯನ್ನು ನೀಡುವಂತಹ ತಮ್ಮ ಸಂಕಲ್ಪವನ್ನು ನಮ್ಮ ಭಾರತ ಸಂವಿಧಾನ ನಮಗೆ ಎಲ್ಲರಿಗೂ ತಿಳಿಸುವಂತದ್ದಾಗಿದೆ ಎಂದು ಪರಶುರಾಮ ಮ್ಯಾಳಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿನಿತಾ ಬೆಟೆಗೇರಿಯವರು ಭಾರತದ ಸಂವಿಧಾನವನ್ನು ರೂಪಿಸುವಂತ ಡಾ.ಬಿ.ಆರ್.ಅಂಬೇಡ್ಕರವರ ಚಿಂತನೆ ಮತ್ತು ವಿಚಾರಗಳನ್ನು ತಿಳಿಸುತ್ತಾ ನಮ್ಮ ಸಂವಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡುತ್ತಾ ಅಳವಡಿಸಿಕೊಂಡು ಭಾರತದ ಒಳ್ಳಯ ನಾಗರಿಕರಾಗಿ ಬಾಳುವಂತೆ ಮಕ್ಕಳಿಗೆ ತಿಳಿಸಿದರು ಹಾಗೂಸರ ಮುಖ್ಯಅತಿಥಿಗಳಾಗಿ ಆಗಮಿಸಿದಂತ ಹೀನಾ ಕೌಸರ್ ಹಾಗೂ ಶಿಲ್ಪಾ ಹಡಪದರವರು ಮೂಲಭೂತ ಹಕ್ಕುಗಳ ಬಗ್ಗೆ ವಿವರಿಸಿ ವಿದ್ಯಾರ್ಥಿಗಳಿಗೆ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಾದ ಸಂದೀಪ್ ಪರಶುರಾಮ ಹೂಗಾರ, ಸ್ವಾತಿ ಶ್ರೀಧರ್ ಪೋಲೀಸ್‌ಪಾಟೀಲ್, ಐಶ್ವರ್ಯ ಕಲ್ಲಯ್ಯ ಹಿರೇಮಠ, ಸ್ಪಂದನ ವೆಂಕಟೇಶ ಪವಾರ್, ಗವಿಸಿದ್ದಪ್ಪ ಶಂಕರ್ ಗಿಣಿಗೇರಿ, ಐಮನ್ ಅಬೀದ್ ಹುಸೇನ್ ಅತ್ತಾರ್‌ರವರು ನಮ್ಮ ಸಂವಿಧಾನದ ಸಮಾಜಿಕ, ಆರ್ಥಿಕ ಮತ್ತು ರಾಜಕೀಯ, ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಆರಾಧನೆ ಹಾಗೂ ವಾಕ್‌ಚಾತುರ್ಯದಂತಹ ಅನೇಕ ರೀತಿಯ ಪ್ರಮುಖ ಅಂಶಗಳನ್ನು ತಮ್ಮದೇ ಆದ ನುಡಿಗಳಲ್ಲಿ ಭಾಷಣ ಮಾಡಿದರು.
ಕಾರ್ಯಕ್ರಮವನ್ನು ಸಹಶಿಕ್ಷಕಿಯವರಾದ ಪಾರ್ವತಿ ನಿಡಶೇಷಿರವರು ನಿರೂಪಿಸಿದರು, ವಿದ್ಯಾರ್ಥಿಗಳಾದ ಕೌಶಲ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಸಹಶಿಕ್ಷಕಿರವರಾದ ಗಂಗಮ್ಮ ಸಿಂಧನೂರ ಸ್ವಾಗತ ಹಾಗೂ ಪುಷ್ಪಾರ್ಪಣೆ ನೆರವೇರಿಸಿದರು, ಸಹಶಿಕ್ಷಕಿರವರಾದ ನಾಗರತ್ನ ಕಟ್ಟಿಮನಿಯವರು ಭಾರತ ಸಂವಿಧಾನ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವರ ಬಗ್ಗೆ ಸವಿಸ್ತಾರವಾಗಿ ಮಾತಾಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಸಹಶಿಕ್ಷಕಿರವರಾದ ಶ್ರೀಮತಿ ಅನ್ನಪೂರ್ಣ ಕಲಾಲ್ ವಂದಿಸಿದರು.
0 comments:
Post a Comment