PLEASE LOGIN TO KANNADANET.COM FOR REGULAR NEWS-UPDATES

 ಗವಿಮಠದಲ್ಲಿ ಕಲ್ಯಾಣದ ಶರಣ ಸಂಸ್ಕೃತಿ ಇದೆ.  ಅಂತೆಯೇ ಇಲ್ಲಿ ಅನ್ನ, ಅರಿವು, ಆಧ್ಯಾತ್ಮ, ದಾಸೋಹ ಪರಂಪರೆ ಮೇಳೈಸಿದೆ. ನಾಡಿನ ಹಲವಾರು ಮಠಗಳಂತೆ  ಗವಿಮಠವು ಶಿಕ್ಷಣ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಜ್ಞಾನ ಪೀಠ ಪ್ರಶಸ್ತಿ ವಿಜೇತ ಕವಿ ಡಾ. ಚಂದ್ರಶೇಖರ ಕಂಬಾರ ನುಡಿದರು. ಅವರು ಗವಿಸಿದ್ಧೇಶ್ವರ ಜಾತ್ರೆಯ ಸಮಾರೋಪ  ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನು ನುಡಿದರು. ಮುಂದುವರೆದು ಮಾತನಾಡಿ ಬ್ರಿಟಿಷರು ಈ  ದೇಶದಲ್ಲಿ ಅಕ್ಷರ ಬಿತ್ತನೆಯಂತಹ  ಕಾರ್ಯ ಮಾಡಿದ್ದರ ಜೊತೆಗೆ ನಮ್ಮಲ್ಲಿ ಆತ್ಮವಿಶ್ವಾಸ ಕಸಿದುಕೊಂಡು ಕೀಳರಿಮೆಯನ್ನು ಬೆಳೆಸಿದ್ದಾರೆ. ಅದು ಈಗಲೂ ನಮ್ಮಿಂದ ಮಾಯವಾಗಿಲ್ಲ. ವಿದೇಶದಲ್ಲಿ ಓರ್ವ ಪಿ.ಹೆಚ್.ಡಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ ಕಸಗೂಡಿಸುವಂತಹ ಕೆಲಸ ಮಾಡುತ್ತಿರುವದನ್ನು ನಾನು ಕಂಡಿದ್ದೇನೆ. ಭಾರತದಲ್ಲಿನ ಉನ್ನತ ಪದವೀದರರು ಕೇವಲ ಸರ್ಕಾರಿ ಉದ್ಯೋಗವನ್ನೇ ಅವಲಂಬಿಸಿದ್ದಾರೆ. ಯುವಕರು ಸ್ವದೇಶಿ ಉದ್ಯೋಗ ಬಿಟ್ಟು ವಿದೇಶಿ ಉದ್ಯೋಗಕ್ಕೆ ಹಾತೊರೆಯಿತ್ತಿದ್ದಾರೆ.  ನಾವೆಲ್ಲ ಇಂದು ಕನ್ನಡಭಾಷೆ, ನೆಲ, ಜಲ, ತಂದೆತಾಯಿ ಇವುಗಳನ್ನು ಮರೆಯುವಂತಹ ಅಪಾಯದ ಸ್ಥಿತಿಯಲ್ಲಿ ಇದ್ದೇವೆ. ವೃದ್ಧಾಶ್ರಮದ ಸಂಸೃತಿ ನಿರ್ಮಾಣವಾಗಿದೆ. ನಮಗೆ ಕರ್ನಾಟಕ- ಕನ್ನಡ ಭಾಷೆ ಮುಖ್ಯ. ಆದ್ದರಿಂದ ನಾವೆಲ್ಲ ಇಂದು ಮತ್ತೊಮ್ಮೆ ಕನ್ನಡ ಭಾಷೆ, ನೆಲ, ಜಲ, ತಂದೆತಾಯಿ ಈ ಮೌಲ್ಯಗಳನ್ನು ಗೌರವಿಸಬೇಕೆಂದರು. ಶ್ರೀ.ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಹಾವೇರಿ, ಶ್ರೀ.ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಗಾಸ್ವಾಮಿಗಳು ಸುಲೇಪೇಟ ಸಾನಿಧ್ಯವಹಿಸಿ ಆಶಿರ್ವಚನಗೈದರು. ಶ್ರೀ. ಷ.ಬ್ರ. ನಾಗಭೂಷಣ ಶಿವಾಚಾರ್ಯರ ಮಹಾಸ್ವಾಮಿಗಳು ಹೆಬ್ಬಾಳ, ಶ್ರೀಮ.ನಿ.ಪ್ರ. ಹಿರಿಶಾಂತವೀರ ಮಹಾಸ್ವಾಮಿಗಳು ಹೂವಿನಹಡಗಲಿ ಹಾಗೂ ನಾಡಿನ ಹರಗುರುಚರಮೂರ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಭೆ ಜರುಗಿತು. ನಿರೂಪಣೆ ಶ್ರೀ ಚನ್ನಮಲ್ಲ ದೇವರು ಕುಕುನೂರ ನೆರವೇರಿಸಿದರು. 

Advertisement

0 comments:

Post a Comment

 
Top