ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎನ್.ಸಿ.ಸಿ ಕಮಾಂಡೆಂಟ್ ಲೆಪ್ಟ್‌ನೆಂಟ್ ಡಾ.ದಯಾನಂದ ಸಾಳುಂಕೆಯವರು ಶಿಬಿರಗಳಲ್ಲಿ ಏಕತೆ ಬೆಳಸುವುದರ ಜೊತೆಗೆ ವೈಯಕ್ತಿಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಬೆಳೆಸುತ್ತವೆ. ಕೆಲಸ ಮಾಡುವ ಪ್ರಜ್ಞೆಯನ್ನು ಬೆಳೆಸಿ ತಾಳ್ಮೆ, ಏಕಾಗ್ರತೆ, ಒಳ್ಳೆಯ ಗುಣಗಳನ್ನು ಬೆಳೆಸುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ   ಪರೀಕ್ಷಿತರಾಜ ಅವರು ಶಿಬಿರಗಳಿಂದ ಸಹೋದರತ್ವವನ್ನು ಬೆಳೆಸಿ ಮಾನಸಿಕವಾಗಿ ಸದೃಢಗೊಳ್ಳುವಂತೆ ಮಾಡುತ್ತದೆ. ಬೌದ್ಧಿಕವಾಗಿ ಬೆಳವಣಿಗೆಯನ್ನು ಮಾಡುತ್ತದೆ. ನಿಷ್ಠೆಯನ್ನು ಸಹ ಬೆಳೆಸುತ್ತದೆ ಎಂದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು
ವೇದಿಕೆ ಮೇಲೆ ಪ್ರಾಧ್ಯಾಪಕರಾದ  ಬಿ.ಶ್ರೀನಿವಾಸ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಿ.ಲಕ್ಷ್ಮಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಯಮನೂರಪ್ಪ ಸ್ವಾಗತಿಸಿದರೆ, ಕೊನೆಗೆ ಮಾರುತಿ ಇಂದ್ರಮ್ಮನವರ ವಂದಿಸಿದರು. ಹನುಮಂತ ವಾಲ್ಮೀಕಿ ಮತ್ತು ಹನುಮನಗೌಡ ಕಾರ್ಯಕ್ರಮ ನಿರೂಪಿಸಿರು. ಈ ಶಿಬಿರದಲ್ಲಿ ೫೦ ಶಿಬಿರಾರ್ಥಿಗಳು ಭಾಗವಹಿಸಿದ್ದರು.
 
0 comments:
Post a Comment