ನಗರದ ಗವಿಮಠ ರಸ್ತೆಯಲ್ಲಿರುವ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಾಲಾ ಕ್ರೀಡಾಕೂಟ ಸಮಾರಂಭ ಕಾರ್ಯಕ್ರಮವನ್ನು ನಗರ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀ ಕನಕಪ್ಪ ಚಲವಾದಿ ಉಧ್ಘಾಟಿಸಿ ಮಾನಸಿಕ ಹಾಗೂ ದೈಹಿಕ ನೂನ್ಯತೆಗಳ ಪರಿಹಾರಕ್ಕೆ ಕ್ರೀಡೆಗಳು ಅವಶ್ಯಕವಾಗಿವೆ ಎಂದು ನುಡಿದರು ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಗಳು ಉಪಯುಕ್ತ, ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಹಾಯಕವಾಗಿವೆ ಎಂದು ನುಡಿದರು. ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಕೊಪ್ಪಳ ಜಿಲ್ಲಾ ಗ್ರಂಥಾಲಯದ ಗ್ರಂಥಪಾಲಕರಾದ ನಾಗರಾಜ ಡೊಳ್ಳಿನ್ ಆಗಮಿಸಿ ಮಕ್ಕಳಿಗೆ ಕ್ರೀಡೆಗಳ ಅವಶ್ಯಕತೆಗಳು ಹಾಗೂ ಕ್ರೀಡೆಗಳ ವಿಧಗಳ ಬಗ್ಗೆ ಹಾಗೂ ಮಕ್ಕಳು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆರೋಗ್ಯ ಅಂಶಗಳು ಕೂಡ ಕ್ರೀಡೆಗಳಲ್ಲಿ ಒಳಗೊಂಡಿವೆ ಎಂದು ಮಾತನಾಡಿದರು. ಹಾಗೂ ಇನ್ನೋರ್ವ ಅತಿಥಿಗಳಾಗಿ ಕೊಪ್ಪಳ ಜಿಲ್ಲಾ ಟಿ.ವಿ ೯ ಕ್ಯಾಮೇರಾಮನ್ ಮಾರುತಿ ಕಟ್ಟಿಮನಿ ಕ್ರೀಡೆಗಳಿಂದ ರಾಷ್ಟ್ರದ ಬೆಳವಣಿಗೆ, ಸುಧಾರಣೆಯ ಬಗ್ಗೆ ಹೇಳಿದರು. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪರಶುರಾಮ ಮ್ಯಾಳಿ ವಹಿಸಿದ್ದರು.
ನಗರ ಪೊಲೀಸ್ ಠಾಣೆಯ ಎ.ಎಸ್.ಐ ಕನಕಪ್ಪ ಚಲವಾದಿ ಶಾಲಾ ಕ್ರೀಡಾಕೂಟಕ್ಕೆ ಚಾಲನೆ
ಕಾರ್ಯಕ್ರಮವನ್ನು ಶಾಲಾ ಸಹಶಿಕ್ಷಕಿಯಾದ ಫರೀದಾ ಹುಡಾ ನಿರೂಪಿಸಿದರು. ವಿದ್ಯಾರ್ಥಿಗಳಾದ ಕೌಶಲ್ಯ ಹಡಪದ, ಅಕ್ಷತಾ ಕಟ್ಟಿಮನಿ, ದಿವ್ಯ ಮೂಲಿಮನಿ, ಸಂದಿನಿ ಅಡ್ಡಮನಿ ಮತ್ತು ಪವಿತ್ರಾ ಪ್ರಾರ್ಥಿಸಿದರು. ಸಹಶಿಕ್ಷಕಿಯಾದ ನಾಗರತ್ನ ಹಡಪದ ಸ್ವಾಗತಿಸಿದರು. ಸಹಶಿಕ್ಷಕಿಯಾದ ವಿನಿತಾ ಬೆಟಗೇರಿ ಪುಷ್ಪಾರ್ಪಣೆ ಮಾಡಿದರು. ಶಾಲಾ ಅಧ್ಯಕ್ಷರಾದ ಹುಲಗಪ್ಪ ಕಟ್ಟಿಮನಿ ಉಪಸ್ಥಿತಿಯಿದ್ದರು.

0 comments:
Post a Comment