PLEASE LOGIN TO KANNADANET.COM FOR REGULAR NEWS-UPDATES

ಜಿಲ್ಲಾ ಬಿ ಜೆ ಪಿ ಕಾರ್ಯಲಯದಲ್ಲಿ ಜಿಲ್ಲಾ ಮೋರ್ಚ ಕಾರ್ಯಕಾರಣಿ ಸಭೆಯನ್ನು ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಹೆಚ್ ಗಿರೇಗೌಡ್ರ ಉದ್ಘಾಟನೆಯನ್ನು ನೆರವೆರಿಸಿ ಸಭೆಯನ್ನು ಉದ್ದೇಶಿಸಿ ಈಗಿನ ಕಾಂಗ್ರೆಸ್ ಸರ್ಕಾರರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಆಗೆ ಬಿ ಜೆ ಪಿ ಸರ್ಕಾರವಿದ್ದಾಗ ರೈತರ ಸಲುವಾಗಿ ಯೋಜನೆಗಳನ್ನು ಹಮ್ಮಕೊಂಡಿದ್ದರ ಬಗ್ಗೆ ವಿವರಿಸಿದರು.ಅಟಲ್ ಬಿಹಾರ ವಾಜಪೇಯಿ ಯವರ ಕನಸಿನ ನದಿ ಜೋಡಣೆ ಯೋಜನೆಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದರೆ ಈ ದೇಶದ ಕನಸು ನನಸಾಗುವುದು ಎಂದು ತಿಳಿಸಿದರು.
                        ಇದೇ ಸಂದರ್ಭದಲ್ಲಿ ಲೋಹ ಪುರುಷರಾದ ಶ್ರೀ ಸರದಾರ್ ವಲ್ಲಾಬಾಯಿ ಪಟೇಲ್‌ರ ಲೋಹ ಪ್ರತಿಭೆಯನ್ನು ಸ್ಥಾಪಿಸಲು ಬೇಕಾಗುವ ಲೋಹಗಳನ್ನು ರೈತರು ಉಪಯೋಗಿಸಿದ ಲೋಹವನ್ನು ನೀಡಲು ರೈತರಲ್ಲಿ ಮನವಿ ಮಾಡಿಕೊಂಡರು.ಈ ಸಭೆಯಲ್ಲಿ ರಾಜ್ಯ ಮೋರ್ಚಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಬಿ ನಾರಾಯಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹರಾವ್ ಕುಲಕರ್ಣಿ, ರಾಜು ಬಾಕಳೆ,  ಬಿ ಜೆ ಪಿ ಮುಖಂಡರಾದ ಅಪ್ಪಣ್ಣ ಪದಕಿ, ತಿಪ್ಪೆ ರುದ್ರಸ್ವಾಮಿ, ದೇವಪ್ಪ ಗೂಡ್ಲಾನೂರು, ಮಲ್ಲಪ್ಪ ಬೇಲೆರಿ, ಶಿವಪ್ಪ ಗೂಡ್ಲಾನೂರು, ಮಂಡಲ ಅಧ್ಯಕ್ಷರುಗಳಾದ ಡಾ. ಕೋಟ್ರೇಶ ಶಡ್ಮೀ, ಸಿದ್ರಾಮಸ್ವಾಮಿ ಹೆರೂರ, ಮನೋಹರ ಹೆರೂರು, ರೈತ ಮೋರ್ಚಾ ಮುಖಂಡರಾದ ದೇವಪ್ಪ ಕಾಸನಕಂಡಿ ಮಲ್ಲಿಕಾರ್ಜುನ ಶರಣಪ್ಪ, ಗಾದಿ ನಿಂಗನೌಡ, ರಾಮರಡ್ಡಿ ಡಂಬ್ರಳ್ಳಿ, ಸೋಮನಗೌಡ, ಶಿವಪ್ಪ, ಶರಣಪ್ಪ ಸಜ್ಜಿವಲ, ದೇವಪ್ಪ ಬಾರಕೇರ, ಜಿಲ್ಲಾ ಬಿ ಜೆ ಪಿ ವಕ್ತಾರರಾದ ಚಂದ್ರುಶೇಖರಗೌಡ ಪಾಟೀಲ ಹಲಗೇರಿ ಉಪಸ್ಥಿತರಿದ್ದರು  ಗುಂಡಪ್ಪ ಚಳಿಗೇರಿ ನಿರೂಪಿಸದರು.

Advertisement

0 comments:

Post a Comment

 
Top