PLEASE LOGIN TO KANNADANET.COM FOR REGULAR NEWS-UPDATES

ಭಕ್ತಾಧಿಗಳಿಗೆ ಸೂಚನೆ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಮಹಾರಥೋತ್ಸವವು ದಿನಾಂಕ ೧೮-೦೧-೨೦೧೪ ಶನಿವಾರ ಸಾಯಂಕಾಲ ೫ ಗಂಟೆಗೆ ಜರುಗುವ ಪ್ರಯುಕ್ತ  ಅಂದು ೫-೬  ಲಕ್ಷ ಭಕ್ತಾಧಿಗಳು ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುವದರಿಂದ  ಸಂಚಾರಿ ವ್ಯವಸ್ಥೆಯಲ್ಲಿ ಯಾವುದೇ ಅಡೆತಡೆಗಳು ಉಂಟಾಗಬಾರದೆಂದು  ಅಂದು ಎತ್ತಿನ ಬಂಡಿಗಳನ್ನು ತೆಗೆದುಕೊಂಡು ಬರುವ ಸುತ್ತ ಮುತ್ತಲಿನ ಭಕ್ತಾಧಿಗಳು ಬೇಗನೇ ೧೨ ಗಂಟೆಯ ಒಳಗಾಗಿ  ಈಗಾಗಲೇ ನಿಗದಿಮಾಡಿದ ಸ್ಥಳಗಳಲ್ಲಿ  ನಿಲ್ಲಿಸಿ ಶ್ರೀಗವಿಮಠದ ಆವರಣ ತಲುಪಿ ರಥೋತ್ಸವದಲ್ಲಿ ಭಾಗಿಯಾಗಿ.


ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಗೆ ಆಗಮಿಸುವ ವಯೋವೃದ್ಧರಿಗೆ,  ಮಹಿಳೆಯರಿಗೆ, ಮಕ್ಕಳಿಗೆ  ಗಂಜ್ ಕ್ರಾಸ್‌ನಿಂದ ಶ್ರೀಗವಿಮಠದವರೆಗೆ ಬರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.  ಈ ಸಾರೆ ರಥೋತ್ಸವದ ದಿನದಂದು ಶ್ರೀಗವಿಮಠ ಮಾರ್ಗದ ಮೂಲಕ ತೆರಳುವ ಎಲ್ಲ ವಾಹನಗಳನ್ನು ನಿಷೇಧಿಸಿ ಬೇರೆ ಕಡೆ ಹೊರಡುವ ಮಾರ್ಗ ನಿಗದಿ ಮಾಡಿರುವದರಿಂದ ಎಲ್ಲ ವಾಹನಗಳನ್ನು ಗಂಜ ಕ್ರಾಸ್‌ಗೆ ನಿಲ್ಲಿಸುವಂತಹ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಗಂಜ್ ಕ್ರಾಸ್‌ದಿಂದ ಶ್ರೀಗವಿಮಠದವರೆಗೆ ಜಾತ್ರೆಗೆ ಬರುವ ವಯೋವೃದ್ಧರಿಗೆ,  ಮಹಿಳೆಯರಿಗೆ, ಮಕ್ಕಳಿಗೆ ಸಲುವಾಗಿ ಉಚಿತ ಬಸ್ ವ್ಯವಸ್ಥೆ ಮಡಲಾಗಿದೆ. ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲೆ, ಕುವೆಂಪು ಶಾಲೆ, ಎನ್.ಕೆ.ಪಿ.ಎಂ ಶಾಲೆ, ಶಿವಶಾಂತವೀರ ಪಬ್ಲಿಕ್ ಶಾಲೆ ಹಾಗೂ ಕುಷ್ಟಗಿಯ ಶ್ರೀ ಚಂದ್ರಶೇಖರಸ್ವಾಮಿ ಶಿಕ್ಷಣ ಸಂಸ್ಥೆ ಭಕ್ತಾಧಿಗಳಿಗಾಗಿ ಉಚಿತ ಬಸ್ ಹೊರಡಿಸುವ ಸೇವೆ ಮಾಡುವರು.  ರಥೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳು ಉಚಿತ ಬಸ್ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಗವಿಮಠ ತಿಳಿಸಿದೆ.  


ಕೊಪ್ಪಳ:  ಶ್ರೀ ಗವಿಮಠದ ಜಾತ್ರಾಮಹೋತ್ಸವವು ದಕ್ಷಿಣ ಭಾರತದ ಮಹಾಕುಂಭ ಮೇಳದಂತೆ ನಡೆಯುತ್ತಿರುವದು ಅತ್ಯಂತ ಹರ್ಷದಾಯಕ ಸಂಗತಿಯಾಗಿದೆ. ಜೊತೆಗೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ  ಶ್ರೀಗವಿಸಿದ್ಧಶ್ವರ ಶಿವಯೋಗಿಗಳು ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಆಧ್ಯತ್ಮಿಕ  ಬೋಧನೆಗಳನ್ನು ಮಾಡುವ ಕಾರ್ಯಕ್ರಮ ಏರ್ಪಡಿಸುವ ಮೂಲಕ ಈ ವಿಶಿಷ್ಠವಾಗಿ ಆಚರಿಸುತ್ತಿರುವದು ಈ ನಾಡಿನಲ್ಲೇ ವಿಶೇಷವಾಗಿದೆ ಎಂದು ಸಹಾಯಕ ಆಯುಕ್ತ                  ಶ್ರೀ ಮಂಜುನಾಥ ಪಿ.ಎಸ್ ನುಡಿದರು. ಅವರು ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಮಾಧ್ಯಮ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ವಾರ್ತಾಧಿಕಾರಿ ತುಕಾರಾಂ.ಬಿ.ವಿ, ಪತ್ರಕರ್ತ ಸೋಮರಡ್ಡಿಅಳವಂಡಿ ಮಾತನಾಡಿದರು. ವೇದಿಕೆಯಲ್ಲಿ ಸಂಜಯ ಕೊತಬಾಳ, ಮಹೇಶ ಮುದಗಲ್, ಅದ್ಯಕ್ಷತೆ ವಹಿಸಿದ ಟ್ರಸ್ಟ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ ಮಾತನಾಡಿದರು. ಪ್ರಾಸ್ತಾವಿಕ ಎಸ್.ಎಲ್.ಮಾಲಿಪಾಟೀಲ, ನಿರೂಪಣೆ ಅಶೋಕ ಒಜನಳ್ಳಿ ನೆರವೇರಿಸಿದರು.    

Advertisement

0 comments:

Post a Comment

 
Top