PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿರುವ ಅನ್ನಪೂರ್ಣೇಶ್ವರಿ ದೇವಿಗೆ ಹಾಗೂ ತಾಯಂದಿರಿಗೆ ಉಡಿತುಂಬುವ ಕಾರ್ಯಕ್ರಮ ಅನೂಚಾನವಾಗಿ ನಡೆದುಬಂದ ಕಾರ್ಯಕ್ರಮ ಇಂದು ಸಹ ಜರುಗಿತು.  ಅನ್ನಪೂಣೇಶ್ವರಿ ದೇವಿಯ ಮುಂದೆ ತಳಿರು ತೋರಣ ಬಾಳೆಕಂಬಗಳಿಂದ ಅಲಂಕೃತಗೊಂಡಿರುವ ಮಂಟಪದಡಿಯಲ್ಲಿ ತಾಯಂದಿರು ಉಡಿ ತುಂಬುವ ಕಾರ್ಯಕ್ರಮ ವಿಜೃಭಣೆಯಿಂದ ಜರುಗಿತು. ವಿಶೇಷವಾಗಿ ಮಕ್ಕಳ ಫಲಾಪೇಕ್ಷೆ ಉಳ್ಳವರು, ವಿವಾಹ ಅಪೇಕ್ಷಿತ ಸಹೋದರಿಯರು ಹೀಗೇ ಹತ್ತು ಹಲವಾರು ಸ್ವಯಂ ಸಂಕಲ್ಪಗಳೊಂದಿಗೆ ದೇವಿಗೆ ಉಡಿ ತುಂಬುವ ಕಾರ್ಯದಲ್ಲಿ ನಿರತರಾಗಿರುವದು ಕಂಡುಬಂದಿತು.  ಮೊರದ ತುಂಬ ಅಕ್ಕಿ, ಕಣ, ಎಲೆ, ಅಡಿಕೆ, ಹಸಿರು ಬಳೆ, ಹೀಗೇ ಮಂಗಲದ್ರವ್ಯಗಳನ್ನು ಅರ್ಪಿಸಿದರು. ಕೊಪ್ಪಳದ ಹಾಗೂ ಸುತ್ತಮುತ್ತಲಿನ ಸಹಸ್ರಾರು ಮಹಿಳೆಯರು ಭಾಗವಹಿಸಿದ್ದರು. ಉಡಿ ತುಂಬಿಸಿಕೊಳ್ಳಲು ಭಕ್ತಿಭಾವದಿಂದ ಎಲ್ಲ ತಾಯಂದಿರು ಸಾಲು ಸಾಲಾಗಿ ನಿಂತು



ಕೊಂಡಿರುವದು ಕಂಡು ಬಂದಿತು.

ಬಸವ ಪಟ 

ಕೊಪ್ಪಳ : ದಿನಾಂಕ ೧೪-೦೧-೨೦೧೪ ರಂದು ಶ್ರೀಗವಿಮಠದಲ್ಲಿ ಸಂಜೆ ೬ಕ್ಕೆ ಬಸವ ಪಟ ಆರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಬಸವ ಪಟದಲ್ಲಿ ನಂದಿ, ಈಶ್ವರ,  ಸೂರ್ಯ, ಚಂದ್ರ , ವರುಣ,  ಪ್ರಣವ, ಗಿಡ-ಮರ ಬಳ್ಳಿ ಮುಂತಾದ ಪ್ರಕೃತೀಯ ಚಿತ್ರಣಗಳು ಅದರಲ್ಲಿ ಅಳವಡಿಸಲಾಗಿದೆ. ಬಸವ ಪಟವನ್ನು ಬಿದಿರಿನಿಂದ ನಿರ್ಮಿಸಿದ ಚೌಕಟ್ಟಿಗೆ ಕಟ್ಟಿಲಾಗಿತ್ತು. ಈ ಬಸವ ಪಟವನ್ನು ವಿಧಿ-ವಿಧಾನಗಳಿಂದ ಪೂಜೆಗೈದು ಮಂಗಳಾರತಿ ಎತ್ತಿ ಕತೃ ಗದ್ದುಗೆಗೆ ಪ್ರದಕ್ಷಣೆಗೈದು ತರುವಾಯದಲ್ಲಿ ಗದ್ದುಗೆಯ ಮುಂಬಾಗದಲ್ಲಿರುವ ಶಿಲಾ ಕಂಬಕ್ಕೆ ಕಟ್ಟುವುದರ ಮೂಲಕ ಜಾತ್ರಾ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕೊಪ್ಪಳ : ಪ್ರತಿ ವರ್ಷದ ಪದ್ಧತಿಯಂತೆ  ಗವಿಸಿದ್ಧೇಶ್ವರನ ಗದ್ದುಗೆ ಕಳಸಗಳನ್ನು ನಗರದ ವಿವಿಧ ಓಣಿಗಳ ದೈವದವರು ಕೂಡಿಕೊಂಡು ಭಕ್ತಿ-ಭಾವದಿಂದ ಸಕಲ ವಾಧ್ಯ-ಮೇಳಗಳೊಂದಿಗೆ ತಂದು ಪೂಜೆ, ಪ್ರದಕ್ಷಿಣೆಗೈದು ಕರ್ತೃ ಗದ್ದುಗೆಯ ಗೋಪೂರದ ಮೇಲೆ ಪಂಚ ಕಳಸಗಳನ್ನು ಏರಿಸಲಾಯಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top