PLEASE LOGIN TO KANNADANET.COM FOR REGULAR NEWS-UPDATES

 ಇಂದಿನ ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ಗ್ರಾಮ ಸಭೆ ಮಾಡಲಾರದೆ ನಿರಾಶ್ರಿತರಿಗೆ ವಿವಿಧ ಯೋಜನೆಗಳ ಮನೆಗಳನ್ನು ವಂಚಿತಗೊಳಿಸಿ, ಚುನಾಯಿತ ಸದಸ್ಯರೇ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ನಿವೇಸನ ಹಂಚಿರುವುದು ತನಿಖೆಗೊಳಪಡಿಸಬೇಕೆಂದು ಸಾಹಿತಿ, ಸಮಾಜ ಕಾರ್ಯಕರ್ತ ಅಲ್ಲಾಗಿರಿರಾಜ್ ಒತ್ತಾಯಿಸಿದರು. 
ಅವರು ಕಟ್ಟಡ ಕಾರ್ಮಿಕ ಸಂಘಟನೆ ಹಮ್ಮಿಕೊಂಡಿದ್ದ ಬಸಾಪಟ್ಟಣ ಗ್ರಾಮ ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡುತ್ತಾ, ಈ ದೇಶದ ಕಾನೂನಿನಲ್ಲಿ ಗ್ರಾಮ ಪಂಚಾಯತ್‌ನ ಗ್ರಾಮ ಸಭೆ ಮೂಲಕ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕೆಂದು ಕಾನೂನು ಇದ್ದರೂ ಕೂಡಾ ಇದ್ಯಾವದೂ ಗ್ರಾಮ ಮಟ್ಟದಲ್ಲಿ ಜರುಗದೇ ಬಡವರ ಬದುಕಿಗೆ ಆಶ್ರಯವಾಗಬೇಕಾಗಿದ್ದ ಆಶ್ರಯ ಮನೆಗಳು, ನಿವೇಶನಗಳು ಮತ್ತು ಶೌಚಾಲಯಗಳು, ಉದ್ಯೋಗ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ ಎಂದು ಅಲ್ಲಾಗಿರಿರಾಜ್ ಹೇಳಿದರು. 
ಇದೇ ಸಂದರ್ಭದಲ್ಲಿ ಸಿ.ಪಿ.ಐ.ಎಂ.ಎಲ್.ನ ಜಿಲ್ಲಾ ಕಾರ್ಯದರ್ಶಿ ಬಸನಗೌಡ ಮಾತನಾಡಿ ಕಾರ್ಮಿಕರ ಮತ್ತು ನಿರಾಶ್ರಿತ ಸಮುದಾಯಗಳಿಗೆ ಗ್ರಾಮಮಟ್ಟದಲ್ಲಿಯೇ ಅನ್ಯಾಯವಾಗುತ್ತಿದೆ ಹಾಗೂ ದುಡಿಯುವ ಉದ್ಯೋಗ ಖಾತ್ರಿ ಕೂಡಾ ಸ್ಥಳೀಯ ಕೃಷಿ ಕೂಲಿ ಕಾರ್ಮಿಕರನ್ನು ಕಡೇಗಾಣಿಸಿರುವುದು ದುರದೃಷ್ಠಕರ ಸಂಗತಿ ಎಂದು ಅಸಂಘಟಿತ ಕಾರ್ಮಿಕರೆಲ್ಲ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಎ.ಐ.ಸಿ.ಸಿ.ಟಿ.ಯು., ಜಿಲ್ಲಾ ಕಾರ್ಯದರ್ಶಿ ಟಿ. ರಾಘವೇಂದ್ರ ಮಾತನಾಡಿ ಬಸಪಟ್ಟಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದುಡಿಯುವ ಜನರ ಸಮಸ್ಯೆಗಳು ದಿನದಿಂದ ದಿನಕ್ಕೆ ತಾರಕ್ಕೇರುತ್ತಿವೆ. ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಸ್ಥಳೀಯ ಆಡಳಿತ ಮಂಡಳಿ ವಿಫಲವಾಗಿದೆ. ಈ ಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು ಹಾಗೂ ಅಖಿಲ ಭಾರತ ಕೃಷಿ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷರು ಯೇಸಪ್ಪ, ಮತ್ತು ಕಟ್ಟಡ ಕಾರ್ಮಿಕ ಸಂಘಟನೆ ಗ್ರಾಮ ಸಮಿತಿ ಅಧ್ಯಕ್ಷರಾದ ರಮೇಶ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಿ.ಪಿ.ಐ.ಎಂ.ಎಲ್. ಮುಖಂಡರಾದ ಮಾಬುಸಾಬ್ ಮತ್ತು, ಎ.ಐ.ಸಿ.ಸಿ.ಟಿ.ಯು. ತಾಲೂಕ ಸಮಿತಿ ಅಧ್ಯಕ್ಷರು ಬಿ. ಮೋಹನ್, ಕೆ.ಪಿ.ಕೆ.ಕೆ.ಎಸ್. ನ ತಾಲೂಕು ಅಧ್ಯಕ್ಷರು ಖಾದರಬಾಷಾ ಮತ್ತು ಕಾರ್ಯದರ್ಶಿ ಗಾದಿಲಿಂಗಪ್ಪ, ಆರ್.ವೈ.ಎ. ತಾಲೂಕ ಅಧ್ಯಕ್ಷರು ಹುಸೇನ್‌ಭಾಷ, ಐಸಾ ಸಂಘಟನೆಯ ತಾಲೂಕ ಕಾರ್ಯದರ್ಶಿ ಕೆ. ಚಂದ್ರಶೇಖರ ಪಾಲ್ಗೊಂಡಿದ್ದರು. ಧರಣಿ ಸತ್ಯಾಗ್ರಹದ ಮನವಿ ಪತ್ರವನ್ನು ಸ್ವೀಕರಿಸಿ ಪಿ.ಡಿ.ಓ. ನವರು ಮಾತನಾಡುತ್ತಾ ತಮ್ಮ ಬೇಡಿಕೆಗಳನ್ನು ಈಡೇರಿಸಲು ಈ ಮನವಿಯನ್ನು ಸರಕಾರಕ್ಕೆ ರವಾನಿಸಲಾಗುವುದು, ಸ್ಥಳೀಯ ಸಮಸ್ಯೆಗಳಿಗೆ ಗ್ರಾಮ ಪಂಚಾಯತ್‌ನಿಂದ ಪರಿಹಾರ ನೀಡಲಾಗುವುದೆಂದು ಭರವಸೆ ನೀಡಿದರು. 

Advertisement

0 comments:

Post a Comment

 
Top