ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ಡಿಸೆಂಬರ್ ೨೧ ರಂದು ಬೆಂಗಳೂರಿನಲ್ಲಿ ಏಟ್ರಿಯಾ ಹೋಟೆಲ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಪಾರದರ್ಶಕತೆ ಮತ್ತು ಮಾಹಿತಿ ಬಹಿರಂಗಪಡಿಸುವಿಕೆ ಕುರಿತು ಒಂದು ದಿನ ಪ್ರಾದೇಶಿಕ ಕಾರ್ಯಾಗಾರವನ್ನು ಏರ್ಪಡಿಸಿದೆ.
ಈ ಕಾರ್ಯಾಗಾರದಲ್ಲಿ ಈ ಕೆಳಕಂಡ ೫ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. ೧) ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮವಾಗಿ ಸರ್ಕಾರಿ ಕಾರ್ಯ ಚಟುವಟಿಕೆಗಳಲ್ಲಿ ಪಾರದರ್ಶಕತೆ ೨) ಸ್ವಯಂ ಮಾಹಿತಿ ಬಹಿರಂಗಪಡಿಸುವಿಕೆ ಸವಾಲುಗಳು ಮತ್ತು ತೊಡಕುಗಳು. ೩) ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮವಾಗಿ ಕಡಿಮೆಯಾಗುತ್ತಿರುವ ಭ್ರಷ್ಟಾಚಾರ ವಾಸ್ತವ ಅಥವಾ ಮಿಥ್ಯ ೪) ಮಾಹಿತಿಹಕ್ಕು ಕಾಯ್ದೆ ಪರಿಣಾಮವಾಗಿ ನಿರ್ಧಾರ ಕೈಗೊಳ್ಳುವಲ್ಲಿ ಜನರ ಸಹಭಾಗಿತ್ವ. ೫) ಮಾಹಿತಿ ಹಕ್ಕು ಕಾಯ್ದೆಯ ಭಾಗಿದಾರರಿಗೆ ಜಾಗೃತಿ.
ಈ ವಿಷಯಗಳ ಕುರಿತು ಆಸಕ್ತರು ತಮ್ಮ ಯಶೋಗಾಥೆಗಳನ್ನು ಶ್ರೀ ಕೆ.ಎಂ. ಪ್ರಸಾದ್, ಕಾರ್ಯಾಗಾರ ಸಂಯೋಜಕರು, ಇವರಿಗೆ ಇ-ಮೇಲ್ ವಿಳಾಸ prasadkm1960@gmail.com ಮೂಲಕ (ದೂರವಾಣಿ ಸಂಖ್ಯೆ ೯೪೪೮೭೧೯೬೨೭) ಇದೇ ಡಿಸೆಂಬರ್ ೧೦ ರೊಳಗೆ ಕಳುಹಿಸಬಹುದು.
ಆಯ್ಕೆ ಸಮಿತಿಯು ಆಯ್ಕೆ ಮಾಡಿದ ಐದು ಅತ್ಯುತ್ತಮ ಯಶೋಗಾಥೆಗಳಿಗೆ ತಲಾ ೫೦೦೦/- ರೂ. ಗಳ ನಗದು ಬಹುಮಾನ ನೀಡಲಾಗುವುದು ಎಂದು ಆಡಳಿತ ತರಬೇತಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಕಾರ್ಯಾಗಾರದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿಗಳ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಮಾಹಿತಿಹಕ್ಕು ಕಾಯ್ದೆಯ ಅನುಷ್ಠಾನ ಪಾರದರ್ಶಕತೆ ಮತ್ತು ಬದ್ಧತೆಯಲ್ಲಿ ಸುಧಾರಣೆ ಹಾಗೂ ಯಶೋಗಾಥೆಗಳ ಕುರಿತು ಚರ್ಚೆ ನಡೆಸಲಾಗುವುದು .

0 comments:
Post a Comment