ಪ್ರಾರ್ಥನೆಯನ್ನು ತರಬೇತಿ ಶಿಬಿರಾರ್ಥಿ ಅಂಬಿಕಾ ನೆರವೆರಿಸಿದರು, ಪ್ರಾಸ್ತಾವಿಕವಾಗಿ ರೇಖಾ ಪಾತ್ರದ್ ಕಾರ್ಯಕ್ರಮದ ಉದ್ದೇಶ ಅದರಿಂದಾಗುವ ಪ್ರಯೋಜನ, ಕುರಿತು ಮಾತನಾಡಿದರು. ರಾಕೇಶರವರು ಯುವಕ-ಯುವತಿಯರು ಎಚ್ಚೆತ್ತುಕೊಳ್ಳಬೆಕಾದ ಯೋಜನೆಗಳು ಹಾಗೂ ಅನಿಷ್ಠ ಪದ್ದರತಿಗಳನ್ನು ತೊಡೆದು ಹಾಕುವ ಬಗ್ಗೆ ಹಾಗು ಸದೃಢ ವಂತಾರಾಗಲು ಹಾಗೂ ಸಮಾಜದ ಸರ್ವೊತೋಮುಖ ಎಳಿಗೆಗೆ ಶ್ರಮವಹಿಸಿ ಕೆಲಸ ನಿರ್ವಹಿಸಬೆಕೆಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವಿರೇಶ ಹಾಲಗುಂಡಿ ಕಾರ್ಯಕ್ರಮ ನಿರುಪಿಸಿ ವಂದಿಸಿದರು.
ತರಬೇತಿ ಶಿಬಿರದ ೨ನೇ ದಿನ ಶಿಬಿರದ ವಿಷಯವಾದ ವ್ಯಕ್ತಿತ್ವ ವಿಕಾಸ ಕುರಿತು ಶಿಕ್ಷಕರಾದ ನಿಲಪ್ಪ ವಿ ಹಕ್ಕಂಡಿರವರು ವ್ಯಕ್ತಿತ್ವ ವಿಕಸನದ ಮಹತ್ವ ಅದರ ರೀತಿ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಬೆಕು ಎಂಬುವುದರ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು
0 comments:
Post a Comment