PLEASE LOGIN TO KANNADANET.COM FOR REGULAR NEWS-UPDATES

  ಸಾರಿಗೆ ಇಲಾಖೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ವತಿಯಿಂದ ವಾಯುಮಾಲಿನ್ಯ ನಿಯಂತ್ರಣದ ಮಹತ್ವದ ಬಗ್ಗೆ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
 ಮುಖ್ಯ ಅತಿಥಿಗಳಾಗಿ ಹಿರಿಯ ಮೋಟಾರು ವಾಹನ ಪರಿವೀಕ್ಷಕ ಜೆ.ಪಿ. ಪ್ರಕಾಶ ಅವರು ವಾಯುಮಾಲಿನ್ಯದಿಂದ ಆಗುವ ದುಷ್ಪರಿಣಾಮಗಳು ಹಾಗೂ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದರು. ಘಟಕದ ಪ್ರಭಾರ ವ್ಯವಸ್ಥಾಪಕ ಬಿ.ವಿ.ಬಟ್ಟೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಅಧಿಕಾರಿಗಳಾದ ಕೆ.ಎಚ್. ಬಂಗಾರಿ, ಮಂಜುನಾಥ, ಸುಮಲತಾ, ಪುಷ್ಪಲತಾ ಸಭೆಯಲ್ಲಿ ಭಾಗವಹಿಸಿದ್ದರು. ಚಾಲಕರಾದ ಚಂದ್ರಪ್ಪ, ಪಿ.ಆಂಜನಪ್ಪ ಇವರು ಕೆಎಂಪಿಎಲ್‌ನ ಮಹತ್ವ ಹಾಗೂ ಉತ್ತಮ ಚಾಲನಾ ನಿರ್ವಹಣೆಯ ಪದ್ದತಿಯ ಅಂಶಗಳನ್ನು ತಿಳಿಸಿದರು. ಅಧ್ಯಕ್ಷತೆಯನ್ನು ವಿಭಾಗೀಯ ತಾಂತ್ರಿಕ ಶಿಲ್ಪಿ ನಾರಾಯಣ ಬಿ.ಗೌಡಗೇರಿ ಅವರು ವಹಿಸಿದ್ದರು.   ಮಿತ ಇಂಧನ ಬಳಕೆಯಲ್ಲಿ ಉತ್ತಮ ಸಾಧನೆಗೈದ ೨೮ ಜನ ಚಾಲಕರಿಗೆ ಈ ಸಂದರ್ಭದಲ್ಲಿ ವಿಶೇಷ ಬಹುಮಾನ ವಿತರಣೆ ಮಾಡಲಾಯಿತು. ಬಾಲಕೃಷ್ಣ ಸ್ವಾಗತಿಸಿದರು. ವಿ.ಎಸ್.ಹುರಕಡ್ಲಿ ನಿರೂಪಿಸಿದರು. ಎ.ಜಿ.ಮಣ್ಣೂರ ವಂದನಾರ್ಪಣೆಗೈದರು.

Advertisement

0 comments:

Post a Comment

 
Top