ಕೊಪ್ಪಳ : ಹಣತೆಯ ಕವಿ, ಭಾವಲೋಕದ ಭಾವಜೀವಿ ಡಾ. ಜಿ.ಎಸ್.ಶಿವರುದ್ರಪ್ಪನವರ ಸ್ಮರಣಾರ್ಥ ಗೀತನಮನ ಕಾರ್ಯಕ್ರಮವನ್ನು ನಗರದ ಶ್ರೀ ನಂಧೀಶ್ವರ ಹಿರಿಯ ಪ್ರಾಥಮಿಕಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ವಿಶಿಷ್ಠ ಸೃಜನ ಶೀಲತೆಯ ಉದಾತ್ತ ನಾಯಕ, ಚಿಂತನ ಶೀಲ, ಚಲನಶೀಲ ಗುರು, ನವ್ಯಕಾಲದ ಸಾಂಸ್ಕೃತಿಕ ನಾಯಕ ಡಾ. ಜಿ.ಎಸ್.ಶಿವರುದ್ರಪ್ಪನವರು ನವೋದಯ ಕಾಲದಲ್ಲಿ ಕುವೆಂಪು, ಬೇಂದ್ರೆ , ಕೆ.ಎಸ್. ನರಶಿಂಹ ಸ್ವಾಮಿ, ವಿ ಕೃ ಗೋಕಾಕ, ಅಡಿಗರ ನಂತರ ಕನ್ನಡ ಸಾಹಿತ್ಯವನ್ನು ಸಾಹಿತ್ಯದ ಎಲ್ಲಾ ಪರಂಪರೆಗಳ ಉತ್ತಮ ಅಂಶಗಳನ್ನು ತಮ್ಮದಾಗಿಸಿಕೊಂಡು ತಮ್ಮದೇ ಆದ ಸಾಹಿತ್ಯ ಶೈಲಿಯೊಂದನ್ನು ರೂಪಿಸಿಕೊಂಡು ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ಕುವೆಂಪುರವರ ಆತ್ಮೀಯ ಶಿಷ್ಯರಾಗಿ ಅವರ ಮಾರ್ಗದರ್ಶನದಲ್ಲಿ ಸಾಹಿತ್ಯ ಕೃಷಿ ಮಾಡಿದರು. ಶಿವರುದ್ರಪ್ಪನವರು ೧೪ ನೇ ವಯಸ್ಸಿನಲ್ಲಿಯೇ ಪಧ್ಯಗಳನ್ನು ಬರೆಯಲು ಪ್ರಾರಂಭಿಸಿದರು. ಎಂದು ಶಾಲೆಯ ಮುಖ್ಯ ಗುರುಗಳಾದ ಸುರೇಶ ಕುಂಬಾರ ವಿಧ್ಯಾರ್ಥಿಗಳಿಗೆ ತಿಳಿಸಿದರು.
ಜಿ.ಎಸ್. ಶಿವರುದ್ರಪ್ಪನವರು ಬರೆದ ಕವನಗಳಾದ ಕಾಣದ ಕಡಲಿಗೆ ಹಂಬಲಿಸಿದೇ ಮನ..........., ಮುಂಗಾರಿನ ಅಭಿಶೇಕಕೆ ..........., ನವೋದಯದ ಕಿರಣ ಲೀಲೆ ........, ಹಾಡು ಹಳೆಯದಾದರೇನು ಭಾವನವನವೀನ .........., ವೇದಾಂತಿ ಹೇಳಿದನು ಮಣ್ಣೆಲ್ಲಾ ಹೊನ್ನು ......., ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೋಳಗೆ .........., ಹೀಗೆ ಅವರು ಬರೆದ ಹಲವು ಕವನಗಳನ್ನು ಮುಖ್ಯೋಪಾಧ್ಯಯರಾದ ಶ್ರೀ ಸುರೇಶ ಕುಂಬಾರವರು ಹಾಡಿ ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಗೀತ ಶಿಕ್ಷಕರಾದ ಸಾಹೇಬಗೌಡ ಹಳೇಮನಿ ಇವರು ಜಿ.ಎಸ್.ಎಸ್. ಅವರ ಕವಿತೆಯಾದ ’ಎದೆತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದರಿ ಇಂದು ನೀವು’ ಎಂಬ ಕವಿತೆಯನ್ನು ಹಾಡುವುದರ ಮೂಲಕ ಜಿ.ಎಸ್.ಎಸ್. ಅವರಿಗೆ ಗೌರವ ನಮನ ಸಲ್ಲಿಸಿದರು.
ಕುಮಾರ ಮಹೇಂದ್ರಗೌಡ ಹಳೆಮನಿ ನೆನಪಿದೆಯೇ ಗೆಳತಿ ನೆನಪಿದಿಯೇ......, ಎಂಬ ಜಿ.ಎಸ್.ಎಸ್. ಅವರ ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದನು. ಶಾಲೆಯ ವಿದ್ಯಾರ್ಥಿಗಳಾದ ಕು. ಅನಿತಾ ಹಾಗೂ ತೇಜಶ್ವಿನ ಬೆಲ್ಲದ ಒಂದೆ ಒಂದೆ ನಾವೆಲ್ಲರೂ ಒಂದೆ ಕವನವನ್ನುಹಾಡಿ ಜಿ.ಎಸ್.ಎಸ್.ಅವರಿಗೆ ಗೌರವ ನಮನ ಸಲ್ಲಿಸಿದರು.
ಶಾಲೆಯ ಶಿಕ್ಷಕಿಯರಾದ ಕು. ಸುನಿತಾ ಜಿ.ಎಸ್.ಎಸ್. ಅವರಬಗ್ಗೆ ತಮ್ಮ ಪ್ರತಿಯೊಂದು ಕಾರ್ಯದಲ್ಲಿ ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದರು. ಆದರ್ಶ ಗುರುವಿಗೆ ಆದರ್ಶ ಶಿಷ್ಯರಾಗಿ ಕುವೆಂಪು ಅವರ ಮಾರ್ಗದಾರ್ಶನದಲ್ಲಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದರು. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ್ಳಲು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿದ್ದ ಶ್ರಿನಿವಾಸ ಶಿಲ್ಪಿ ಇವರು ಜಿ.ಎಸ್.ಎಸ್. ಅವರ ಚಿಂತನ ಶೀಲತೆ. ಕಾವ್ಯ ಪ್ರಜ್ಞೆ, ಸಾಹಿತ್ಯ ವಿಮಶ್ರೆ, ಹೀಗೆ ಹಲವು ಆದರ್ಶ ಕಾರ್ಯಗಳನ್ನು ಮಾಡಿದ್ದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕು. ಸುವರ್ಣಾ ಕಾರ್ಯಕ್ರಮ ನಿರೂಪಿಸಿದರು. ಕು. ಸುನಿತಾ ಸ್ವಾಗತಿಸಿದರು. ವಿಧ್ಯಾರ್ಥಿಗಳಾದ ಕು. ಅನಿತಾ ಹಾಗೂ ಕು. ತೇಜಶ್ವಿನಿ ಪ್ರಾರ್ಥಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಶಿಲ್ಪಿ ಭಾಗವಹಿಸಿದ್ದರು. ವೇದಿಕೆಯ ಮೇಲೆ ಶ್ರೀಮತಿ ಗೀತಾ, ಕು. ಶೋಭಾ, ಕು. ರೇಣುಕಾ, ಆಶೀನರಾಗಿದ್ದರು.
0 comments:
Post a Comment