ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಕಳೆದ ಡಿ. ೧೬ ರಿಂದ ಹತ್ತು ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ನಡೆಸಿದ ಬಾಲಕಾರ್ಮಿಕ ಶೋಧನಾ ಕಾರ್ಯಕ್ರಮದಲ್ಲಿ ೪೦ ಬಾಲಕಾರ್ಮಿಕ ಮಕ್ಕಳನ್ನು ಪತ್ತೆ ಮಾಡಲಾಗಿದೆ.
ಪತ್ತೆಯಾದ ಬಾಲಕಾರ್ಮಿಕ ಮಕ್ಕಳ ವಿವರ ಇಂತಿದೆ : ಚಾಮಲಾಪುರದ ಸುರೇಶ ಪೌಲ್ಟ್ರೀ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ರಾಮಣ್ಣ ಸುಳಿಕೇರಿ (೧೪), ಮಂಜುಳಾ ಭೀಮಪ್ಪ ರಾಥೋಡ್ (೧೩), ನೀಲಮ್ಮ ರಾಮಪ್ಪ ಚವ್ಹಾಣ (೧೪), ಕುದರಿಮೋತಿಯ ಧನಲಕ್ಷ್ಮೀ ಪೌಲ್ಟ್ರೀ ಫಾರಂನಲ್ಲಿ ಇಮಾಂಬಿ ನಬಿಸಾಬ ಮುಲ್ಲಾ (೧೬), ಶಾಂತಮ್ಮ ಇಂದ್ರಪ್ಪ ವಡ್ಡರ್ (೧೬) ಕುರಿ ಕಾಯುವ ಸಮಯದಲ್ಲಿ ವೆಂಕಟೇಶ ಬುಳಪ್ಪ ವಡ್ರಟ್ಟಿ (೧೨), ಜೆ.ಪಿ.ಮಾರ್ಕೆಟ್ ನ್ಯೂ ಅಯ್ಯಂಗಾರ ಬೇಕರಿಯಲ್ಲಿ ಉಮೇಶ ರಮೇಶ ಮಾದರ (೧೨), ಗುಳದಳ್ಳಿಯ ಅಮೀಕಾ ಪೌಲ್ಟ್ರೀ ಫಾರಂನಲ್ಲಿ ರಾಜೇಶ್ವರಿ ಹುಲುಗಪ್ಪ ಹರಿಜನ (೧೪), ನೇತ್ರಾ ಮರಿಯಪ್ಪ ಮ್ಯಾದನೇರಿ (೧೩), ಬಸಮ್ಮ ನಿಂಗಪ್ಪ ಹರಿಜನ (೧೩), ಬೂದಗುಂಪದ ಕರ್ನಾಟಕ ಪೌಲ್ಟ್ರೀ ಫಾರಂನಲ್ಲಿ ಯಲ್ಲಮ್ಮ ನಿಂಗಪ್ಪ ಭಾಗಲೀಗೆರ್ (೧೩), ಗುಳದಳ್ಳಿಯ ಬಸವಪೂರ್ವ ಪೌಲ್ಟ್ರೀ ಫಾರಂನಲ್ಲಿ ಮದ್ದಾನೆಮ್ಮ ಹನುಮಂತಪ್ಪ ಬಿಲ್ಲಕನಟ್ಟಿ (೧೩), ಹುಸೇನಬಾಷಾ ಮಾಬುಸಾಬ (೧೪) ರೇಣುಕಾ ಕರಿಯಪ್ಪ ಜಾಗಿರದಾರ (೧೪), ವೆಂಕಟಗಿರಿಯ ಎಂ.ಕೆ.ಇಟ್ಟಂಗಿಭಟ್ಟಿಯಲ್ಲಿ ಯೇಸು ಶಾಂತರಾಜ ಮಿಚಾಲ್ (೦೯), ಚಿಕ್ಕಬೆಣಕಲ್‌ನ ಎಂ.ಕೆ.ಇಟ್ಟಂಗಿಭಟ್ಟಿಯಲ್ಲಿ ರಾಜು ಯೆಸಪ್ಪ ಭಂಡಾರಿ (೧೩), ಹಿರೇಬೆಣಕಲ್‌ನ ಎಂ.ಕೆ.ಇಟ್ಟಂಗಿಭಟ್ಟಿಯಲ್ಲಿ ಶಶಿ ತಿಮ್ಮಯ್ಯ ಸಣಕತಿಮಯ್ಯ (೦೯), ಸುನೀಲ್ ತಿಮ್ಮಯ್ಯ (೧೨), ಹಿರೇಬೆಣಕಲ್‌ನ ಎಸ್.ಹೆಚ್.ಇಟ್ಟಂಗಿಭಟ್ಟಿಯಲ್ಲಿ ನಾಗರಾಜ ನಾಗಣ್ಣ (೧೧), ನಾಗವೇಣಿ ನಾಗಣ್ಣ (೧೧), ಗಿಣಿಗೇರಿಯ ಎಸ್.ಬಿ.ಐ. ಇಟ್ಟಂಗಿಭಟ್ಟಿಯಲ್ಲಿ ಚತೂರ ಬನ್ ಬಿಹಾರ ಚಂದ್ರೆ (೧೪), ವಿಜಯಕುಮಾರ ಆದಿನಾರಾಯಣ (೦೮), ಸಂಧ್ಯಾ ಸನ್ನಾಸಾಪಡು (೧೩), ಬಸಾಪುರದ ಕೆ.ಎಲ್.ಆರ್. ಇಟ್ಟಂಗಿಭಟ್ಟಿಯಲ್ಲಿ ಲೋಕೆಶ್ ತ್ರಿನಾದ್ ರಮಣಾ (೧೧), ಬಸಾಪುರದ ಪದ್ಮಜಾ ಪೌಲ್ಟ್ರೀ ಫಾರಂನ ರಮೀಜಾ ಬಾಬುಸಾಬ ಮಲ್ಲಾಪೂರ (೧೬), ಕೆರೆಹಳ್ಳಿಯ ಕರ್ನಾಟಕ ಪೌಲ್ಟ್ರೀ ಫಾರಂನ ಅಯ್ಯಮ್ಮ ನಿಂಗಜ್ ಗುರುಕೇರ್ (೧೪), ಲಕ್ಷ್ಮೀ, ಪವಾಡೆಪ್ಪ ಬಾಗೋಣಿ (೧೫), ಮುತ್ತಣ್ಣ ಮದ್ದಾನೆಪ್ಪ ಬಂಡಿ (೧೪), ಸದ್ದಾಂಹುಸೇನ ಮಾಬುಸಾಬ ಪಿಂಜಾರ (೧೬), ಇಂದರಗಿಯ ಕೃಷ್ಣದೇವರಾಯ ಪೌಲ್ಟ್ರೀ ಫಾರಂನ ಗಂಗಮ್ಮ ಭರ್ಮಪ್ಪ ಕೆಂಗೇರಿ (೧೨), ರಾಮವ್ವ ಪಂಪಣ್ಣ ಹಿರೇಕುರುಬರ್ (೧೪), ಕಾಸನಕಂಡಿಯ ಯಲಮಂಚಿ ಪೌಲ್ಟ್ರೀ ಫಾರಂನ ಕರುಣೇಶ ನಿಂಗಪ್ಪ ಹರಿಜನ (೧೨), ಗಾಳೆಪ್ಪ ಮಾರ್ಕಂಡೆಪ್ಪ ಹರಿಜನ (೧೪), ಮುತ್ತಣ್ಣ ಫಕೀರವ್ವ ಹರಿಜನ (೧೪), ಹುಲಿಗೆಮ್ಮ ಗಿರಿಯಪ್ಪ ಪೂಜಾರ (೧೬), ಶಿವರಾಜ ರಾಮಪ್ಪ ಬಾಲಿಮನಿ (೧೪), ಕಾಸನಕಂಡಿಯ ಸಾಹಿತಿ ಪೌಲ್ಟ್ರೀ ಫಾರಂನ ಮರಿದೇವಿ ಶರಣಪ್ಪ ದೊಡ್ಡಮನಿ (೧೪), ಭೀಮವ್ವ ದುರುಗಪ್ಪ ದೊಡ್ಡಮನಿ (೧೪), ಅಂಜವ್ವ ಈರಪ್ಪ ಮೇಗಳಮನಿ (೧೫), ಶೃತಿ ಪಕೀರಪ್ಪ ಈಳಿಗೇರ (೧೬) ಈ ಮಕ್ಕಳನ್ನು ಪತ್ತೆ ಮಾಡಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಾರ್ಮಿಕರನ್ನು ಕೋಳಿ ಫಾರಂ, ಇಟ್ಟಂಗಿ ಭಟ್ಟಿ ಹಾಗೂ ಇತರೆ ವಾಣಿಜ್ಯ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ತೆ ಮಾಡಲಾಗಿದೆ. ಎಲ್ಲರೂ ೧೪ ರಿಂದ ೧೬ ವರ್ಷದೊಳಗಿನ ಮಕ್ಕಳಾಗಿದ್ದಾರೆ. ಈ ಕುರಿತು ಈಗಾಗಲೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಲಾಗಿದ್ದು, ಅವರ ಸೂಚನೆಯಂತೆ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಮಕ್ಕಳನ್ನು ಪುನರ್ವಸತಿಗೊಳಿಸಲಾಗುವುದು ದಾಳಿ ತಂಡದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರು ಬಸವರಾಜ ಹಿರೇಗೌಡರ, ಕ್ಷೇತ್ರಾಧಿಕಾರಿಗಳಾದ ವೀರಣ್ಣ ವ್ಹಿ.ಕುಂಬಾರ, ಮಾರುತಿ ನಾಯ್ಕರ್ ಪರಿಚಾರಕರಾದ ಹುಸೇನಿ ಅವರು ಭಾಗವಹಿಸಿದ್ದರು ಎಂದು ಬಸವರಾಜ ಹಿರೇಗೌಡರ ಅವರು ತಿಳಿಸಿದ್ದಾರೆ.
0 comments:
Post a Comment