PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕದ ಶವ ಯಾತ್ರೆ ಮಾಡಲು ಹೊರಟಿರುವ ಶಾಸಕ ಸಂಭಾಜಿ ಪಾಟೀಲ, ಅರವಿಂದ್ ಪಾಟೀಲ ಹಾಗೂ ಕರ್ನಾಟಕ ವಿಭಜನೆಯನ್ನು ಮಾಡಲು ಇಚ್ಚಿಸುವ ಶಾಸಕ ಉಮೇಶ ಕತ್ತಿಯವರನ್ನು ಶಾಸಕತ್ವದಿಂದ ವಜಾಗೊಳಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ಅಪಾರ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಇಟ್ನಾಳ ರವರಿಗೆ  ಮನವಿಯನ್ನು ಸಲ್ಲಿಸಲಾಯಿತು. 
ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ, ಗೌರವ ಕಾರ್ಯದರ್ಶಿ ಅಕ್ಬರ್ ಸಿ ಕಾಲಿಮಿರ್ಚಿ, ಗಂಗಾವತಿ ತಾಲೂಕ ಕಸಾಪ ಅಧ್ಯಕ್ಷ ಅಜ್ಮೀರ ನಂದಾಪೂರ, ಯಲಬುರ್ಗಾ ತಾಲೂಕ ಕಸಾಪ ಗೌರವಧ್ಯಕ್ಷರಾದ ಶಿವಣ್ಣ ರಾಯರಡ್ಡಿ, ಕೊಪ್ಪಳ ತಾಲೂಕ ಕಸಾಪ ಗೌರವ ಕಾರ್ಯದರ್ಶಿ ಹುಸೇನಪಾಷಾ, ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು, ಹನುಮಂತಪ್ಪ ಡಗ್ಗಿ, ಸಿದ್ದಲಿಂಗಪ್ಪ ಕೊಟ್ನೆಕಲ್, ಗುರುಸಿದ್ದಯ್ಯ್, ಶರಣಯ್ಯ ಚಿಲಕಮುಖಿ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.  

ಶ್ರದ್ದಾಂಜಲಿ : 
ಯದು ವಂಶದ ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರವರ ನಿಧನಕ್ಕೆ ಜಿಲ್ಲಾ ಕಸಾಪ ಇದೇ ಸಂದರ್ಭದಲ್ಲಿ ಶ್ರದ್ದಾಂಜಲಿ ಸಲ್ಲಿಸಿ ಅವರ ಆತ್ಮಕ್ಕೆ ಚಿರ ಶಾಂತಿ ಕೋರಲಾಯಿತು. ಇವರ ತಾತಂದಿರಾದ ನಾಲ್ವಾಡಿ ಕೃಷ್ಣರಾಜ ಒಡೆಯರವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾಗಿ ಕನ್ನಡ ಸಾಹಿತ್ಯದ ಏಳಿಗೆಗಾಗಿ ಹಾಗೂ ನಾಡು ನುಡಿಗೆ ಶ್ರಮಿಸಿದ ಕುರಿತು ಜಿಲ್ಲಾ ಕ ಸಾ ಪ ಅಧ್ಯಕ್ಷರಾದ ವೀರಣ್ಣ ನಿಂಗೋಜಿಯವರು ನೆನದು ಒಡೆಯರವರ ಕುಟುಂಬ ಹಾಗೂ ಸಾಹಿತ್ಯ ಪರಿಷತ್ತಿಗೆ ಇರುವ ನಂಟನ್ನು ನೆನಪಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಅಕ್ಬರ್ ಕಾಲಿಮಿರ್ಚಿ, ಅಜ್ಮೀರ ನಂದಾಪೂರ, ಹುಸೆನಪಾಷಾ, ಹನುಮಂತಪ್ಪ ಡಗ್ಗಿ, ಶಿವಾನಂದ ಹೊದ್ಲೂರು ಇನ್ನಿತರರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top