ಇದೇ ಡಿಸೆಂಬರ್ ೦೪ ರಂದು ಬೆಳಗಾವಿ ಸುವರ್ಣಸೌಧದ ಮುಂದೆ ರೈತರ ಬೃಹತ್ ಹೋರಾಟ ಹಮ್ಮಿಕೊಂಡಿದ್ದು ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಕರೆ ನೀಡಿದೆ.
ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ಕಾರ್ಯಾಧ್ಯಕ್ಷ ನಜೀರಸಾಬ ಮೂಲಿಮನಿ,ಗೌರವಾಧ್ಯಕ್ಷರಾದ ತ್ರೀಲಿಂಗಪ್ಪ ಬೇಟಗೇರಿ, ಗೂಡಸಾಬ ಹಿರೇಬಗನಾಳ, ಖಜಾಂಚಿ ಚಿನ್ನರಡ್ಡಿ ಹ್ಯಾಟಿ, ಉಪಾಧ್ಯಕ್ಷರಾದ ಶರಣಯ್ಯ ಮಳ್ಳುರುಮಠ, ಪಕೀರಗೌಡ ಗೊಂದಿಹೊಸಳ್ಳಿ, ಮುಖಂಡ ಭೀಮಸೇನ ಕಲಕೇರಿ ಹಸಿರು ಸೇನೆ ಜಿಲ್ಲಾ ಸಂಚಾಲಕರು ನಿಂಗನಗೌಡ ಗ್ಯಾರಂಟಿ, ತಾಲೂಕ ಮುಖಂಡ ಶಿವಣ್ಣ ಭೀಮನೂರು ಜಿಲ್ಲಾ ವಿವಿಧ ಘಟಕಗಳ ಮುಖಂಡರು ಜಂಟಿ ಪ್ರಕಟಣೆ ನೀಡಿ, ಬೆಳಗಾವಿ ಅಧಿವೇಶನದಲ್ಲಿ ರೈತರನ್ನು ಕಡೆಗಣಿಸಿದ ಪರಿಣಾಮವಾಗಿ ಪ್ರಗತಿಪರ ರೈತ ವಿಠಲ ಅರಭಾವಿ ಆತ್ಮಹತ್ಯೆಗೆ ಶರಣಾಗಿದ್ದು ದುರಂತ. ಸರಕಾರದ ನಿರ್ಲಕ್ಷ್ಯಕ್ಕೆ ತಕ್ಕ ಉತ್ತರ ನೀಡಲು ಹಾಗೂ ಈ ಅಧಿವೇಶನದಲ್ಲಿ ಕಬ್ಬು ಹಾಗೂ ಇನ್ನಿತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸಬೇಕು. ರೈತರ ಬೇಡಿಕೆಗಳಿಗೆ ಸ್ಪಂಧಿಸದ ಕಾರಣ, ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇದೇ ದಿ.೦೪ ರಂದು ರೈತರ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ.
ಈ ಅಧಿವೇಶನದಲ್ಲಿ ತುರ್ತಾಗಿ ತೆಗೆದುಕೊಳ್ಳಬೇಕಾದ ನಿರ್ಣಯಗಳು: ಕಬ್ಬು ಬೆಳೆ ಟನ್‌ಗೆ ೩೬೦೦ ರೂ. ನಿಗಧಿ ಪಡಿಸುವುದು. ಮೆಕ್ಕೆಜೋಳ ಇರುವ ಬೆಂಬಲ ಬೆಲೆಯನ್ನು ಪರೀಷ್ಕರಿಸಿ ಕನಿಷ್ಟ ೨೦೦೦ ರೂ ಗಳಿಗೆ ನಿಗಧಿಪಡಿಸಬೇಕು. ಮತ್ತು ಕೇವಲ ೨೫ ಕ್ವೀಂಟಲ್ ಕರೀದಿ ಕೇಂದ್ರದಲ್ಲಿ ಕರೀದಿಸುವುದನ್ನು ಸ್ಥಗಿತಗೊಳಿಸಿ ರೈತರು ತಂದ ಎಲ್ಲಾ ಜೋಳವನ್ನು ಕರೀದಿಸುವಂತೆ ಸೂಚಿಸಬೇಕು. ತಾವುಗಳು ತಕ್ಷಣ ನಿರ್ಧಾರ ತೆಗೆದುಕೊಳ್ಳದಿದ್ದರೆ, ಜೋಳದ ಮೂಟೆಗಳ ಸಮೇತ ರಸ್ತೆ ತಡೆ ಸೇರಿದಂತೆ ಇತರ ಉಗ್ರ ಸ್ವರೂಪದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹಸಿರು ಸೇನೆ ಎಚ್ಚರಿಸಿದೆ.
ಇದೇ ಅಧಿವೇಶನದಲ್ಲಿ ಜಿಲ್ಲೆಗೆ ಸಮಗ್ರ ನೀರಾವರಿಗೆ ಹೆಚ್ಚಿನ ಒತ್ತು ನೀಡಿ ತಕ್ಷಣ ಕಾಮಗಾರಿಗೆ ಚಾಲನೆ ನಿಡಬೇಕು. ಮತ್ತು ಜಿಲ್ಲೆಯ ಕೆರೆಗಳ ಒತ್ತುವರಿ ಬಿಡಿಸಿ ಕೆರೆಗೆ ನೀರು ತುಂಬಿಸಬೇಕು ಹಾಗೂ ಕಳೆದ ೨೦೧೧ರ ಮಾರ್ಚ ೨೫ ರಂದು ರೈತ ಕೂಲಿ ಕಾರ್ಮಿಕರ ಮೇಲಿನ ಮೊಕದ್ದಮೆಯನ್ನು ಇದೇ ಅಧಿವೇಶನದಲ್ಲಿ ಸರಕಾರ ವಾಪಾಸ್ ಪಡೆಯಬೇಕು. ಇಲ್ಲದಿದ್ದಲ್ಲಿ ಕೊಪ್ಪಳದಿಂದ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಂಗಳೂರು ವಿಧಾನಸೌಧಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಸರಕಾರಕ್ಕೆ ಹಸಿರು ಸೇನೆ ಗಡುವು ನೀಡಿದೆ.
ಬೆಳಗಾವಿಯಲ್ಲಿ ರೈತರು ಹಾಗೂ ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ದಿ. ೦೩ ರಂದು ಸಂಜೆ ೫ ಗಂಟೆಗೆ ಜಿಲ್ಲೆಯ ಎಲ್ಲಾ ರೈತರು ರೊಟ್ಟಿ ಬುತ್ತಿ ಸಮೇತ ಕೊಪ್ಪಳ ರೈಲು ನಿಲ್ದಾಣದಲ್ಲಿ ಹಾಜರಾಗುವಂತೆ ರೈತರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಕರೆ ನೀಡಿದೆ.
0 comments:
Post a Comment