PLEASE LOGIN TO KANNADANET.COM FOR REGULAR NEWS-UPDATES





ಭಾರತ ದೇಶವು ನೂರಾರು ಜಾತಿ, ಧರ್ಮಗಳ ತವರೂರು, ಇಲ್ಲಿ ಹಲವಾರು ಧರ್ಮಿಯರು ವಾಸಿಸುತ್ತಾರೆ. ಯಾವುದೇ ಒಂದು ಜಾತಿ ಧರ್ಮದಿಂದ ನಮ್ಮ ಭಾರತ ದೇಶ ನಿರ್ಮಾಣವಾಗಿಲ್ಲ. ಭಾರತ ನಿರ್ಮಾಣವಾಗಲು ಮತ್ತು ಭಾರತದ ಸ್ವಾತಂತ್ರಕ್ಕಾಗಿ ಸರ್ವ ಜನಾಂಗದವರು ಶ್ರಮಿಸಿದ್ದಾರೆ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಇಂದು ನಗರದ ಸಾರ್ವಜನಿಕ ಮೈದಾನದಲ್ಲಿ ಶಾಂತಿ ಪ್ರಕಾಶನವತಿಯಿಂದ ಏರ್ಪಡಿಸಲಾದ ಶಾಂತಿಗಾಗಿ ಸಾಹಿತ್ಯಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಂತಿ ಪ್ರಕಾಶನದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಪುಸ್ತಕವನ್ನು ಬಿಡುಗಡೆಗೊಳಿಸಿ ಏರ್ಪಡಿಸಿದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ ಭಾರತ ದೇಶ ಹಲವಾರು ಜಾತಿಗಳ, ಹಲವಾರು ಭಾಷೆಗಳ, ಹಲವು ಸಂಸ್ಕೃತಿಗಳ ದೇಶವಾಗಿದ್ದು ಇಲ್ಲಿರುವ ಪ್ರತಿಯೊಬ್ಬರು ಶಾಂತಿಯುತ ಬದುಕಿಗಾಗಿ ಪರಸ್ಪರ ಸೌಹಾರ್ದತೆ ಭಾವನೆ ಬೆಳೆಸಿಕೊಳ್ಳಬೇಕು. ಮನುಷ್ಯನ ಭಾವನೆಗಳು ಸುಂದರವಾದರೆ ಜಗತ್ತು ಸುಂದರವಾದಂತೆ. ಮಾನವ ಧರ್ಮ ಶ್ರೇಷ್ಠವಾದುದ್ದು, ನಾವು ಬದುಕಿ ಇನ್ನೊಬ್ಬರ ಹಿತ ಬಯೆಸುವುದೇ ನಿಜವಾದ ಮಾನವ ಧರ್ಮ ಇದನ್ನೇ ಇಸ್ಲಾಂ ಧರ್ಮ ಕೂಡಾ ಪ್ರತಿಪಾದಿಸುತ್ತದೆ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ಈ ಅಭಿಯಾನದ ಸ್ವಾಗತ ಸಮಿತಿಯ ಗೌರವಅಧ್ಯಕ್ಷರಾದ ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಮುಸ್ಲಿಮರ ಕೊಡುಗೆ ಕೂಡಾ ಅಪಾರವಾಗಿದೆ. ಶಾಂತಿ ಪ್ರಕಾಶನದವತಿಯಿಂದ ಪ್ರಕಟಗೊಂಡ ಇಸ್ಲಾಂ ಧರ್ಮದ ಪುಸ್ತಕಗಳಿಂದ ಇಸ್ಲಾಂ ಧರ್ಮದ ಬಗ್ಗೆ ಇತರರಿಗೆ ಧರ್ಮದ ಸಂದೇಶ ತಿಳಿದಿದೆ. ಈ ಪ್ರಕಾಶನದ ಪುಸ್ತಕ ಓದಿ ತಿಳಿದುಕೊಂಡು ಇದನ್ನು ಪಚನ ಮಾಡಿಕೊಂಡು ರಕ್ತಗತವನ್ನಾಗಿ ಮಾಡಿಕೊಳ್ಳಬೇಕೆಂದರು.
ಮುಸ್ಲಿಮರನ್ನು ಅಪರಾಧಿ ದೃಷ್ಠಿಯಿಂದ ನೋಡುವ ಪ್ರವೃತ್ತಿ ಕೈಬಿಟ್ಟು ಇಸ್ಲಾಂ ಧರ್ಮದ ತಿರುಳನ್ನು ಅರಿತುಕೊಳ್ಳಬೇಕಾಗಿದೆ. ತಪ್ಪು ತಿಳುವಳಿಕೆಯಿಂದ ಇಂದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವುದನ್ನು ತಡೆಗಟ್ಟಿ ಇಂತಹ ಕಾರ್ಯಕ್ರಮದ ಮೂಲಕ ಮಾನವ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಅವರು ಹೇಳಿದರು.
ಅಭಿಯಾನದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹ್ಮದ ಕುಂಞ ಅವರು ಮಾತನಾಡಿ ಸಾಹಿತ್ಯಕ್ಕೆ ಧಾರ್ಮಿಕತೆಯ, ನೈತಿಕತೆಯ ಮಾನವಿತೆಯ ಮೌಲ್ಯ ಇರುತ್ತದೆ. ಅಪ್ಪಟ ಮಾನವ ಪ್ರೇಮ ಚಿಂತನೆ ನಮ್ಮದಾಗಬೇಕು ಅದೇ ನಮ್ಮ ಶಾಂತಿ ಪ್ರಕಾಶನದ ಉದ್ದೇಶ. ಮನುಷ್ಯರನ್ನು ಜೋಡಿಸುವ ಕೆಲಸ ಮಾಡಬೇಕು. ಅದರಿಂದ ಶಾಂತಿ ನೆಮ್ಮದಿ ದೊರೆಯಲಿದೆ. ಪ್ರತಿಯೊಬ್ಬ ಮನುಷ್ಯನು ತನ್ನನ್ನು ತಾನು ಅರಿತುಕೊಂಡು ಜೀವನ ಸಾಗಿಸಬೇಕು ಎಂದ ಅವರು ದರ್ಮಯುದ್ಧ ಎಲ್ಲ ಧರ್ಮಗಳಲ್ಲಿದೆ ಆದರೂ ಅದರ ಬಗ್ಗೆ ತಪ್ಪು ತಿಳುವಳಿಕೆ ಮಾಡಿಕೊಳ್ಳುವುದು ಬೇಡ. ಇಸ್ಲಾಂ ಧರ್ಮಕ್ಕೆ ಹಾಗೂ ಭಯೋತ್ಪಾದನೆ  ಯಾವುದೇ ಸಂಬಂಧವಿಲ್ಲ ಇಂತಹ ಅಂಧ ವಿಶ್ವಾಸವನ್ನು ಹೋಗಲಾಡಿಸುವ ಸಾಹತ್ಯ ನಮ್ಮದು. ಮನುಷ್ಯನ ಕುಟುಂಬ ಭೂಮಿಯಲ್ಲಿನ ಸ್ವರ್ಗವಿದ್ದಂತೆ. ಅದನ್ನು ಯಜಮಾನನಾದವನು ಸರಿಯಾದ ರೀತಿಯಲ್ಲಿ ನಿಬಾಯಿಸಿಕೊಂಡು ಹೋದಾಗ ಶಾಂತಿ ನೆಮ್ಮದಿ ನೆಲೆಸುತ್ತದೆ. ಇಂತಹ ವೈಚಾರಿಕ ಸಾಹಿತ್ಯ ಕನ್ನಡಿಗರಿಗೆ ನೀಡುವಂತಹ ಕೆಲಸ ನಮ್ಮ ಶಾಂತಿ ಪ್ರಕಾಶನ ಕಳೆದ ೨೫ ವರ್ಷಗಳಿಂದ ಕೈಲಾದಷ್ಟು ಸೇವೆ ಮಾಡುತ್ತಾ ಬಂದಿದೆ ಎಂದು ಮಹ್ಮದ ಕುಂಞ ಹೇಳಿದರು.
ಈ ಸಂದರ್ಬದಲ್ಲಿ ವೇದಿಕೆ ಮೇಲೆ ನಗರ ಸಭೆ ಅಧ್ಯಕ್ಷರಾದ ಶ್ರೀಮತಿ ಲತಾ ವೀರಣ್ಣ ಸಂಡೂರು, ಉಪಾಧ್ಯಕ್ಷರಾದ ಜ.ಸೈಯದ್ ಅಮ್ಜದ ಪಟೇಲ್, ಮಾಜಿ ಶಾಸಕರಾದ ಜ.ಹಸನಸಾಬ ದೋಟಿಹಾಳ, ಜಮಾತ್-ಎ-ಇಸ್ಲಾಮಿ ಹಿಂದ್ ಜಿಲ್ಲಾಧ್ಯಕ್ಷರಾದ ಜ.ಎಂ.ಎ.ಶುಕೂರ, ಕೆ.ಪಿ.ಸಿ.ಸಿ ಸದಸ್ಯರಾದ ಜ.ಸೈಯದ ಜುಲ್ ಖಾದರ ಖಾದ್ರಿ, ಸ್ವಾಗತ ಸಮಿತಿ ಸದಸ್ಯರಾದ ಹಿರಿಯ ಲೇಖಕರಾದ ಹೆಚ್.ಎಸ್.ಪಾಟೀಲ್ ರಾಮಚಂದ್ರ ಬಡಿಗೇರ, ಎಸ್.ಆರ್.ಪಾಟೀಲ್, ವೀರಣ್ಣ ಕೊರ್ಲಹಳ್ಳಿ, ಎಂ.ಎಂ.ಮಂಗಳೂರು, ವೀರಣ್ಣ ನಿಂಗೋಕೊ, ಹನಮಂತಪ್ಪ ಅಂಡಗಿ, ಪ್ರಮೋದ ತುರ್ವಿಹಾಳ, ಅಮರಗುಂಡಪ್ಪ ಅರಳಿ, ಮಹ್ಮದ ಫಹೀಮುದ್ದೀನ್  ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜ.ಅಫ್ತಾಬ ಕುಷ್ಟಗಿ ಕಾರ್ಯಕ್ರಮ ನಿರೂಪಿಸಿ ಗಣ್ಯರನ್ನು ಸ್ವಾಗತಿಸಿದರು. ಕುಷ್ಟಗಿ ಕ.ಸಾ.ಪ ಅಧ್ಯಕ್ಷರಾದ ಚಂದಪ್ಪ ಅಕ್ಕಿ ಅವರು ವಂದಿಸಿದರು.

Advertisement

0 comments:

Post a Comment

 
Top